ಸುದ್ದಿಗಳು

ಸೈನಿಕರ ಬಗ್ಗೆ ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ

ಚೆನೈ, ಫೆ.19:

ಪುಲ್ವಾಮ ದುರಂತ ಇಂದಿಗೂ ಮಾಸದ ನೆರಳು. ನಿಜಕ್ಕೂ ಅಷ್ಟು ಮಂದಿಯ ವೀರ ಯೋಧರ ಪ್ರಾಣ ಒಂದೇ ಒಂದು ಸೆಕೆಂಡ್ ನಲ್ಲಿ ಉಗ್ರರ ದುಷ್ಕೃತ್ಯಕ್ಕೆ ಬಲಿಯಾದವು. ಇದೀಗ ಈ ದುರಂತಕ್ಕೆ ಇಡೀ ದೇಶವೇ ಮರುಗುತ್ತಿದೆ‌. ಅಷ್ಟೇ ಅಲ್ಲ ಈ ದುರಂತಕ್ಕೆ ಕಾರಣರಾದವರನ್ನು ಯಾವುದೇ ಕಾರಣಕ್ಕೂ ಬಿಡುವಂತಿಲ್ಲ ಅಂತಾ ಇಡೀ ದೇಶ ಹೇಳುತ್ತಿದೆ. ಇದೀಗ ಈ ದುರಂತಕ್ಕೆ ಸಂಬಂಧಪಟ್ಟಂತೆ ನಟ ಕಮಲ್ ಹಾಸನ್ ಮಾತನಾಡಿರುವುದು ಸುದ್ದಿಯಾಗಿದೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕಮಲ್

ಹೌದು, ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ನಟ ಕಮಲ್ ಹಾಸನ್ ಮಾತನಾಡಿರುವುದು ವರದಿಯಾಗಿದೆ. ಪಾಕ್ ಆಕ್ರಮಿತ ಪ್ರದೇಶವನ್ನು ಆಜಾದ್ ಕಾಶ್ಮೀರ್ ಎಂದು ಪರಿಗಣಿಸಿ. ಕಣಿವೆ ನಾಡಿನಲ್ಲಿ ಜನಮತ ಗಣನೆಗೆ ಕೇಂದ್ರ ಸರ್ಕಾರ ಹೆದರುತ್ತಿರೋದು ಯಾಕೆ. ಈ ಮೂಲಕ ಜನಮತಕ್ಕೆ ಅನುಗುಣವಾಗಿ ಕಾಶ್ಮೀರ ಪ್ರದೇಶದ ವಿವಾದ ಇತ್ಯರ್ಥವಾಗಬೇಕು ಎನ್ನುವ ಹೇಳಿಕೆ ಇಂದು ಮೊನ್ನೆಯದಲ್ಲ. ಬಹಳಷ್ಟು ಬಾರೀ ಈ ಹೇಳಿಕೆಯನ್ನು ಅವರು ಹೇಳುತ್ತಿದ್ದರು. ಇದೀಗ ಅದೇ ಹೇಳಿಕೆಯನ್ನು ಮತ್ತೊಮ್ಮೆ ಈ ನಟ ಹೇಳಿದ್ದಾರೆ.

ಗಡಿ ದಾಟಿ ಮುಂದೆ ಹೋಗುವುದು ಸರಿಯಲ್ಲ

ಜಗತ್ತು ಬದಲಾಗುತ್ತಿದೆ. ಹಾಗೇ ನಮ್ಮ ಸೈನಿಕರು ಕೂಡ ಬದಲಾಗಬೇಕು. ಗಡಿ ದಾಟಿ ಹೋಗಬಾರದು ಆಗ ಒಂದು ಸಾವು ನೋವು ಸಂಭವಿಸೋದಿಲ್ಲ ಅಂತಾ ಹೇಳಿದ್ದಾರೆ. ಕಾಶ್ಮೀರ ಕೂಡ ಭಾರತದ ಅವಿಭಾಜ್ಯ ಅಂಗ ಹಾಗಾಗಿ ನಾವು ಅದನ್ನು ಕಾಪಾಡಿಕೊಳ್ಳಬೇಕು ಎಂದಿದ್ದಾರೆ. ಇನ್ನು ಗಡಿ ದಾಟುವ ವಿಚಾರವಾಗಿ ಇದೀಗ ಬಹಳಷ್ಟು ವಿರೋಧ ಉಂಟಾಗುತ್ತಿದೆ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿ ಇಂದಿಗೆ 33 ವರ್ಷಗಳು

#kamalhaasan #kamalhaasanmovies #kamalhaasanhits #kamalhaasantwitter #pulmamaterroirstattack

Tags