ಸುದ್ದಿಗಳು

ಲೋಕ ಸಮರದಲ್ಲಿ ಕಮಲ್ ಹಾಸನ್ ಚಿನ್ಹೆ ಯಾವುದು ಗೊತ್ತೆ…?

ಚೆನೈ, ಮಾ.11:

ಲೋಕಸಭಾ ಚುನಾವಣೆಯ ಕಾವು ಜೋರಾಗಿದೆ. ಈಗಾಗಲೇ ಸಿನಿಮಾ ನಟರು, ಜನಪ್ರತಿನಿಧಿಗಳು ಕೂಡ ಲೋಕಸಭಾ ಚುನಾವಣೆಗೆ ನಿಂತಿದ್ದಾರೆ. ಇದೀಗ ಕಮಲ್ ಹಾಸನ್ ಕೂಡ ಚುನಾವಣೆಗೆ ಸ್ಪರ್ಧೆ ಮಾಡ್ತಾ ಇದ್ದು, ಇದೀಗ ಚುನಾವಣಾ ಆಯೋಗ ಕಮಲ್ ಹಾಸನ್‌ ಗೆ ಬ್ಯಾಟರಿ ಟಾರ್ಚ್ ಚಿನ್ಹೆಯನ್ನು ನೀಡಿದೆ.

ಕಮಲ್ ಚಿನ್ಹೆ ಬ್ಯಾಟರಿ ಟಾರ್ಚ್

ಲೋಕ ಸಮರದ ಕಾವು ಜೋರಾಗಿದೆ. ಇಡೀ ದೇಶವೇ ಚುನಾವಣೆಯನ್ನು ಎದುರಿಸುತ್ತಿದೆ. ಅಭ್ಯರ್ಥಿಗಳು ಕೂಡ ಈಗಾಗಲೇ ಚುನಾವಣೆಯ ಅಕಾಡಕ್ಕೆ ಇಳಿದಿದ್ದು, ಪ್ರಚಾರ ಕಾರ್ಯಗಳನ್ನು ಭರದಿಂದ ಮಾಡುತ್ತಿದ್ದಾರೆ. ಎಲ್ಲೆಡೆ ಚುನಾವಣೆಯ ರಂಗು ಜೋರಾಗಿದೆ. ಪ್ರಜಾಪ್ರಭುತ್ವದ ಹಬ್ಬ ಅಂತಾನೇ ಕರೆಸಿಕೊಳ್ಳುವ ಈ ಚುನಾವಣೆಗಳೀಗೆ ಇದೀಗ ಕಂಡೌನ್ ಶುರುವಾಗಿದೆ. ಇದೀಗ ಈ ಲೋಕಸಭಾ ಚುನಾವಣಾ ಅಕಾಡಕ್ಕೆ ನಟ ಕಮಲ್ ಹಾಸನ್ ಕೂಡ ಬಂದಿದ್ದಾರೆ.

ಭರವಸೆ ಮಾತನ್ನಾಡಿದ ಕಮಲ್

ಹೌದು, ಕಮಲ್ ನೇತೃತ್ವ ಪಕ್ಷವಾದ ಮಕ್ಕಳ್ ನೀದಿ ಮಯ್ಯಂ ಪಕ್ಷದಿಂದ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದಾರೆ. ಈ ಪಕ್ಷಕ್ಕೆ ಚುನಾವಣಾ ಆಯೋಗ ಬ್ಯಾಟರಿ ಟಾರ್ಚ್ ನನ್ನು ಪಕ್ಷದ ಚಿನ್ಹೆಯಾಗಿ ನೀಡಿದೆ. ಈಗಾಗಲೇ ತಮ್ಮ ಪಕ್ಷದಿಂದ ಎಲ್ಲಾ ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ಹಾಕುವುದಾಗಿ ಹೇಳಿದ್ದರು. ಇದೀಗ ಈ ಚಿನ್ಹೆ ಕೊಟ್ಟಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು ಈ ವಿಚಾರವನ್ನು ಕಮಲ್ ಹಾಸನ್ ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದಾರೆ.

ಪೈಲ್ವಾನ್ ಹೊಸ ಸ್ಟಿಲ್ಸ್!! ಮುಂಬೈ ಬೆಡಗಿಯೊಂದಿಗೆ ಕಿಚ್ಚ!!

#balkaninews #kamalhaasan #kamalhaasanmovies #politics #symbol #kamalhaasanelectionsymbolbatterytorch #batterytorch

Tags