ಸುದ್ದಿಗಳು

ಕಮಲ್ ಹಾಸನ್ ನಾಲಿಗೆ ಕತ್ತರಿಸಬೇಕು ಹೀಗಂದವರು ಯಾರು ಗೊತ್ತಾ..?

ಚೆನ್ನೈ,ಮೇ.15: ಪ್ರಚಾರದ ವೇಳೆ ಭಾರತ ದೇಶದ ಮೊದಲ ಭಯೋತ್ಪಾದಕ ಹಿಂದೂ ಎಂದಿದ್ದ ಕಮಲ್ ಹಸನ್ ಹೇಳಿಕೆಗೆ ದೇಶದೆಲ್ಲೆಡೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇನ್ನೂ ಈ ಸಂಬಂಧ ತಮಿಳುನಾಡಿನ ಸಚಿವ ಕೆಟಿ ರಾಜೇಂದ್ರ ಬಾಲಾಜಿ ಕಮಲ್ ಹಾಸನ್ ಅವರ ಮಕ್ಕಳ್ ನಿಧಿ ಮೈಯಂ ಪಕ್ಷವನ್ನು ನಿಷೇಧಿಸಬೇಕು, ಕಮಲ್ ಹಸನ್ ವಿರುದ್ಧ ಚುನಾವಣಾ ಆಯೋಗ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

Image result for balaji told to cut the tongue of kamal haasan

ಕಮಲ್ ಹಾಸನ್ ನಾಲಿಗೆ ಕತ್ತರಿಸಬೇಕು

ಗಾಂಧಿಯನ್ನು ಕೊಂದ ನಾಥುರಾಮ್ ಗೋಡ್ಸೆ ದೇಶದ ಮೊದಲ ಹಿಂದೂ ಭಯೋತ್ಪಾದಕ ಎಂಬ ಕಮಲ್ ಹಾಸನ್ ಹೇಳಿಕೆ ವಿರುದ್ಧ ತಿರುಗಿಬಿದ್ದ ಬಾಲಾಜಿ, ಕಮಲ್ ಹಾಸನ್ ನಾಲಿಗೆ ಕತ್ತರಿಸಬೇಕು ಎಂದು ಕಿಡಿಕಾರಿದ್ದಾರೆ. ಅಲ್ಲದೇ ಅವರು ಭಾಷಣ ಮಾಡ್ತಿದ್ದ ಜಾಗ ಮುಸ್ಲೀಂರು ವಾಸಿಸೋ ಜಾಗ ಹಾಗಾಗಿ ಅಲ್ಪ ಸಂಖ್ಯಾತರ ಮತಗಳನ್ನು ಸೆಳೆಯುವ ಸಲುವಾಗಿ ಕಮಲ್ ಹಾಸನ್ ಆ ರೀತಿ ನಾಟಕ ಮಾಡಿದ್ದಾರೆ. ಗಾಂಧಿಯನ್ನು ಕೊಂದಿದ್ದು ತಪ್ಪು, ಅದಕ್ಕೆ ಗೋಡ್ಸೆಯನ್ನು ವಿರೋಧಿಸುವುದು ಸರಿ, ಆದ್ರೆ ಒಬ್ಬ ವ್ಯಕ್ತಿ ಮಾಡಿದ ತಪ್ಪಿಗೆ ಒಂದು ಧರ್ಮದ ಬಗ್ಗೆಯೇ ಕೀಳು ಮಟ್ಟದ ಹೇಳಿಕೆಗಳನ್ನು ನೀಡುವುದು ಶೋಬೆಯಲ್ಲ ಅಂದ್ರು.

ವಿಶಾಲ್ ಗೆ ಜೋಡಿಯಾದ ಕನ್ನಡತಿ ಶ್ರದ್ಧಾ!!

#poltics #kamalhassan #tollywood #kollywood

 

Tags

Related Articles