ಸುದ್ದಿಗಳು

ಕೈ ಜೊತೆ ಕೈ ಜೋಡಿಸಲು ಕಮಲ್ ಹಾಸನ್ ಷರತ್ತು

ಡಿಎಂಕೆ ಪಕ್ಷದ ಜತೆಗಿನ ಮೈತ್ರಿಯನ್ನು ಮುರಿದುಕೊಂಡು ಬಂದರೆ ಮಾತ್ರ

ಚೆನ್ನೈ,ಅ.15: ಬಹುಭಾಷ ನಟ ಕಂ ರಾಜಕಾರಣ  ಕಮಲ್ ಹಾಸನ್ ಅವರು ಕಾಂಗ್ರೆಸ್ ಜತೆ ಕೈ ಜೋಡಿಸಲು ಸಿದ್ಧ ಅಂತಾ ಹೇಳಿದ್ದಾರೆ. ಆದರೆ, ಕೈಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಷರತ್ತು ಹಾಕಿದ್ದಾರೆ. ಡಿಎಂಕೆ ಪಕ್ಷದ ಜತೆಗಿನ ಮೈತ್ರಿಯನ್ನು ಮುರಿದುಕೊಂಡು ಬಂದರೆ ಮಾತ್ರ ತಮ್ಮ ಪಕ್ಷವಾದ ‘ಮಕ್ಕಳ್ ನೀದಿ ಮೈಯಂ’(ಎಂಎನ್‍ಎಂ), ಕಾಂಗ್ರೆಸ್ ಜತೆ ಕೈಜೋಡಿಸಲಿದೆ ಅಂತಾ ಷರತ್ತು ವಿಧಿಸಿದ್ದಾರೆ.

ಯಾರು ಕಿಂಗ್ ಮೇಕರ್?

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಕೆಲ ತಿಂಗಳ ಹಿಂದೆ ಭೇಟಿಯಾಗಿದ್ದ ಕಮಲ್ ಹಾಸನ್ ಇದೀಗ ಕೈ ಜತೆಗೆ ಮೈತ್ರಿ ಸಾಧ್ಯತೆ ಕುರಿತು ಪ್ರಸ್ತಾಪಿಸಿದ್ದಾರೆ. ರಾಜ್ಯದ ರಾಜಕಾರಣದಲ್ಲಿ ರಜನಿಕಾಂತ್ ಅಥವಾ ಕಮಲ್ ಹಾಸನ್‍ರಲ್ಲಿ ಯಾರು ಕಿಂಗ್ ಮೇಕರ್ ಆಗುತ್ತಾರೆಂಬ ಕುತೂಹಲ ತಮಿಳುನಾಡಿನಾದ್ಯಾಂತ ಮೂಡಿದೆ.

Image result for kamalhassan

ತಮಿಳುನಾಡಿನಲ್ಲಿ 39 ಲೋಕಸಭಾ ಕ್ಷೇತ್ರ

2019ರ ಲೋಕಸಭೆ ಚುನಾವಣೆ ಎಂ.ಕರುಣಾನಿಧಿ, ಜೆ.ಜಯಲಲಿತಾ ಅವರ ಅನುಪಸ್ಥಿತಿಯಲ್ಲಿ ನಡೆಯಲಿದೆ. ತಮಿಳುನಾಡಿನಲ್ಲಿ 39 ಲೋಕಸಭಾ ಕ್ಷೇತ್ರಗಳಿವೆ. ಎಂ.ಕರುಣಾನಿಧಿ ಅವರು ಯುಪಿಎ, ಎನ್ಡಿಎ ಎರಡೂ ಮೈತ್ರಿಕೂಟಕ್ಕೆ ಬೆಂಬಲ ನೀಡಿ ಕೇಂದ್ರ ಸಚಿವ ಸ್ಥಾನಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು.

ಡಿಎಂಕೆಯ ಸ್ಟಾಲಿನ್ ಕರುಣಾನಿಧಿ

2014ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ 37 ಸ್ಥಾನಗಳನ್ನು ಎಐಎಡಿಎಂಕೆ ಪಕ್ಷ ಗೆದ್ದುಕೊಂಡಿತ್ತು. ಆಗ ಜಯಲಲಿತಾ ಇದ್ದರು. ಬಿಜೆಪಿ ಕೇವಲ 1 ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತ್ತು. ಈ ಬಾರಿ ಡಿಎಂಕೆಯ ಸ್ಟಾಲಿನ್ ಕರುಣಾನಿಧಿ ಅವರ ಸಾವಿನ ವಿಚಾರವನ್ನು ಮುಂದಿಟ್ಟುಕೊಂಡು ಮತ ಕೇಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

 

Tags