ಸುದ್ದಿಗಳು

‘ಕಮರೊಟ್ಟು ಚೆಕ್ ಪೋಸ್ಟ್’ ಗೆ ಅಮೋಘ 50 ದಿನಗಳು

ಬಹುತೇಕ ಹೊಸ ಪ್ರತಿಭೆಗಳೇ ನಟಿಸಿರುವ ‘ಕಮರೊಟ್ಟು ಚೆಕ್ ಪೋಸ್ಟ್’ ಚಿತ್ರವು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇಂದು 8 ನೇ ವಾರಕ್ಕೆ ಕಾಲಿಟ್ಟಿರುವ ಈ ಚಿತ್ರವು ಅಮೋಘ 50 ದಿನಕ್ಕೆ ಕಾಲಿಟ್ಟಿದ್ದು,75 ನೇ ದಿನದತ್ತ ಮುನ್ನುಗ್ಗುತ್ತಿದೆ.

ಈ ಚಿತ್ರವು ಮೇ ತಿಂಗಳ 31 ರಂದು ರಾಜ್ಯಾದ್ಯಂತ ತೆರೆಗೆ ಬಂದಿತ್ತು. ಚಿತ್ರದಲ್ಲಿ ಸನತ್, ಉತ್ಪಲ್, ಸ್ವಾತಿ, ಅಹಲ್ಯ, ಗಡ್ಡಪ್ಪ ಸೇರಿದಂತೆ ಎಲ್ಲರ ನಟನೆ ಗಮನ ಸೆಳೆಯುವಂತಿದೆ. ಸಾಮಾನ್ಯವಾಗಿ ಹಾರರ್ ಸಿನಿಮಾದಲ್ಲಿ ಕಿರುಚಾಡುವುದು, ಹೆದರಿಸುವುದು ಇರುತ್ತದೆ. ಅದು ಸಹ ಈ ಚಿತ್ರದಲ್ಲಿದ್ದರೂ ಸಹ ವಿಶೇಷ ಎನಿಸುವಂತ ಪ್ಯಾರಾನಾರ್ಮಲ್ ಕಥೆಯನ್ನು ಒಳಗೊಂಡಿದೆ.

ಪರಮೇಶ್ ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರದಲ್ಲಿ ನಾಲ್ಕು ಆತ್ಮಗಳ ಬಗ್ಗೆ ಮಾತ್ರ ತೋರಿಸಲಾಗಿದೆ. ಆದರೆ ಅದಕ್ಕೂ ಮುನ್ನ ಇನ್ನೊಂದು ಆತ್ಮವಿರುತ್ತದೆ. ಈ ಬಗ್ಗೆ ನಿರ್ದೇಶಕರು ಹೇಳಿರುವುದಿಲ್ಲ. ಬರೀ ಆತ್ಮವಿದೆ ಎಂದು ತೋರಿಸಿದ್ದಾರೆ. ಈ ಕುರಿತಂತೆ ನಿರ್ದೇಶಕರು ಭಾಗ2 ರಲ್ಲಿ ತೋರಿಸಲಿದ್ದಾರೆ.

ಚೆಕ್ ಪೋಸ್ಟ್ ಬಳಿ ನಡೆದ ಅಪಘಾತವೊಂದರ ಸತ್ಯಘಟನೆ ಆಧರಿಸಿ ಚಿತ್ರ ಮಾಡಲಾಗಿದೆ. ಅಲ್ಲದೇ ನಿರ್ದೇಶಕ ಪರಮೇಶ್ ಅವರ ಗೆಳೆಯರೊಬ್ಬರ ಜೀವನದಲ್ಲಿ ನಡೆದ ಅಪಘಾತದ ಬಳಿಕ ಏನೆಲ್ಲಾ ಆಯಿತೆಂದು ಈ ಚಿತ್ರದ ಮೂಲಕ ತೋರಿಸಲಾಗಿದ್ದು, ಪ್ರೇಕ್ಷಕರಿಗೆ ಇಷ್ಟವಾಗಿದೆ.

ಯಶ್ ಗೆ ಸ್ಟಾರ್ ಗಿರಿ ತಂದು ಕೊಟ್ಟ ಈ ಚಿತ್ರಕ್ಕೆ 6 ವರ್ಷ !!

#kamarottucheckpost #celebrate #50days #balkaninews #kannadafilm, #kannadamovie, #kannadanews, #kannadanewmovie, #kannadacine, #latestkannadamovie, #sandalwoodmovies

Tags