ಸುದ್ದಿಗಳು

‘ಕಾಣದಂತೆ ಮಾಯವಾದನು’ ಚಿತ್ರಕ್ಕೆ ಉಪ ಶೀರ್ಷಿಕೆ ಕೊಟ್ಟ ಸ್ಪರ್ಧಿಗೆ ಬಹುಮಾನ

‘ಜಯಮ್ಮನ ಮಗ’ ಚಿತ್ರದ ನಿರ್ದೇಶಕ ವಿಕಾಸ್ ಇದೀಗ ‘ಕಾಣದಂತೆ ಮಾಯವಾದನು’ ಚಿತ್ರದ ಮೂಲಕ ನಟರಾಗಿ ಪರಿಚಿತರಾಗುತ್ತಿರುವ ವಿಷಯ ಎಲ್ಲರಿಗೂ ತಿಳಿದೇ ಇದೆ. ಈಗಾಗಲೇ ಚಿತ್ರದ ಟೀಸರ್ ಮತ್ತು ಟ್ರೈಲರ್ ನೋಡುಗರ ಮನಸ್ಸನ್ನು ಸೆಳೆದಿದೆ. ಇದೇ ಕಾರಣಕ್ಕೆ ಚಿತ್ರತಂಡ ಚಿತ್ರಕ್ಕೆ ಯಾರು ಟ್ಯಾಗ್ ಲೈನ್ ನೀಡುತ್ತಿರೋ ಅವರಿಗೆ ಬಹುಮಾನ ಎಂಬ ಸ್ಪರ್ಧೆ ಏರ್ಪಡಿಸಿದ್ದರು. ಸದ್ಯ ಈ ಸ್ಪರ್ಧೆಯ ವಿಜೇತರು ಯಾರು ಎನ್ನುವುದನ್ನು ಚಿತ್ರತಂಡ ಬಹಿರಂಗ ಪಡಿಸಿದೆ.

ಅಂದ ಹಾಗೆ ಈ ಸ್ಪರ್ಧೆಗೆ ಬರೋಬ್ಬರಿ ಮೂರು ಸಾವಿರ ಸಬ್ ಟೈಟಲ್ ಗಳು ಬಂದಿದ್ದವು. ಅವುಗಳಲ್ಲಿ ‘ಗೋರಿಯಾದ್ಮೇಲೆ ಹುಟ್ಟಿದ್ ಸ್ಟೋರಿ’ ಎಂಬ ಉಪಶೀರ್ಷಿಕೆ ಆಯ್ಕೆಯಾಗಿದೆ. ಈ ಟೈಟಲ್ ನೀಡಿದ್ದು ಕುಂದಾಪುರದ ಸರ್ಕಾರಿ ಶಾಲೆಯ ಶಿಕ್ಷಕ ನರೇಂದ್ರ ಎಸ್ ಗಂಗೊಳ್ಳಿ.

ಇನ್ನು ಈ ಟೈಟಲ್ ನೀಡಿದ ನರೇಂದ್ರ ಅವರಿಗೆ ಚಿತ್ರತಂಡ 50000/- ರೂಪಾಯಿ ಚೆಕ್ ನೀಡಿದೆ. ‘ಈಗ ಸಬ್ ಟೈಟಲ್ ಕೊಡುವುದು ಹೊಸ ಟ್ರೆಂಡ್ ಅಲ್ಲದಿದ್ದರೂ ಸಹ ನಾವು ಪ್ರೇಕ್ಷಕರಿಗಾಗಿ ಈ ಸ್ಪರ್ಧೆಯನ್ನು ಮಾಡಿದೆವು’ ಎಂದು ಚಿತ್ರತಂಡದವರು ಹೇಳುತ್ತಾರೆ. ಹಾಗೆಯೇ ಈ ಕುರಿತು ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಹೃದಯದ ಆರೋಗ್ಯಕ್ಕೆ ಇಲ್ಲಿವೆ ನೋಡಿ ಸೂಪರ್ ಫುಡ್ ಗಳು

#Kanadanthemayavadanu #Kanadanthemayavadanucontest  #sandalwoodmovies  ‍#kannadasuddigalu

Tags