ಸುದ್ದಿಗಳು

‘ಗೋರಕ್ಷಣೆ’ ನೆಪದಲ್ಲಿ ಅಮಾಯಕರ ಹತ್ಯೆ- ಕಂಗನಾ!

ಮುಂಬೈ, ಆ.09: ಬಾಲಿವುಡ್ ನ ಬಹುನಿರೀಕ್ಷಿತ ‘ಮಣಿಕರ್ಣಿಕಾ’ ಸಿನೆಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯಕ್ರಮದಲ್ಲಿ ಇಡೀ ಚಿತ್ರತಂಡವೇ ಮುಂಬೈನಲ್ಲಿ ನೆರೆದಿತ್ತು. ಈ ಸಮಯದಲ್ಲಿ ಮಾತನಾಡಿದ ನಟಿ ಕಂಗನಾ ರಾನಾವತ್, ನಮ್ಮ ದೇಶದಲ್ಲಿ ಪ್ರಾಣಿಗಳನ್ನು ರಕ್ಷಿಸುವ ಅಗತ್ಯ ಖಂಡಿತಾ ಇದೆ. ಎಂದು ಹೇಳಿದ್ದಾರೆ. ಗೋಹತ್ಯೆ ನಿಷೇಧದ ಹೆಸರಲ್ಲಿ ನಡೆಯುತ್ತಿರುವ ಹಲ್ಲೆ, ಪ್ರಕರಣಗಳು ಅತ್ಯಂತ ದುಃಖಕರವಾದ ಸಂಗತಿ, ಸರ್ಕಾರಗಳು ಎಲ್ಲಿಯವರೆಗೆ ಎಚ್ಚೆತ್ತುಕೊಳ್ಳುವುದಿಲ್ಲವೋ ಅಲ್ಲಿವರೆಗೆ ವಾಸ್ತವಿಕ ನಿಷೇದ ಅಸಾಧ್ಯ ಎಂದು ಕಂಗನಾ ಅಭಿಪ್ರಾಯಪಟ್ಟಿದ್ದಾರೆ.

ಢೋಂಗಿ ರಾಜಕಾರಣಿಗಳು

ನಮ್ಮ ದೇಶದಲ್ಲಿ ಹಲವಾರು ವರ್ಷಗಳಿಂದ ಗೋಹತ್ಯೆ ನಿಷೇಧದ ಹೆಸರಲ್ಲಿ ಹಲವು ಢೋಂಗಿ ರಾಜಕಾರಣಿಗಳು ಕೇವಲ ತಮ್ಮ ಬೇಳೆ ಬೇಯಿಸಿಕೊಳ್ಳಲು, ಅಮಾಯಕರ ಮೇಲೆ ಹಲ್ಲೆ ನಡೆಸುತ್ತಲೇ ಇದ್ದಾರೆ. ಇನ್ನೊಂದೆಡೆ ಕಳ್ಳರ ಹಾಗೆ ತಲೆ ಮರೆಸಿಕೊಂಡು ಗೋಮಾಂಸವನ್ನು ಭಕ್ಷಣೆ ಮಾಡುತ್ತಾರೆ. ಜೊತೆಗೆ ಹಸುಗಳನ್ನು ಖಸಾಯಿ ಖಾನೆಗೆ ತಲುಪಿಸುವ ನಿಟ್ಟಿನಲ್ಲಿ ಕಳ್ಳ ಸಾಗಣಿಕೆಯಲ್ಲೂ ಶಾಮೀಲಾಗಿದ್ದಾರೆ. ಇಂತಹವರು ಯಾವ ನೈತಿಕತೆ ಇಟ್ಟುಕೊಂಡು ಗೋಹತ್ಯೆ ನಿಷೇಧದ ಬಗ್ಗೆ ಮಾತನಾಡುತ್ತಾರೆ, ಎಂಬುದನ್ನು ನಾವು ಸೂಕ್ಷ್ಮವಾಗಿ ಗಮನಿಸಬೇಕಿದೆ ಎಂದು ಕಂಗನಾ ತಿಳಿಸಿದ್ದಾರೆ.

ವಿರೋಧಿಸುವ ಹಕ್ಕಿಲ್ಲ

ಪ್ರಾಣಿಗಳನ್ನು ರಕ್ಷಿಸಬೇಕು ನಿಜ, ಆದರೆ ಆಹಾರದ ಆಯ್ಕೆಗೆ ಬಂದಾಗ ಸಾರ್ವಜನಿಕ ಬದುಕಿನಲ್ಲಿ ಯಾರಿಗೂ ಯಾವುದನ್ನೂ ಪ್ರಶ್ನಿಸುವ ಹಾಗೂ ವಿರೋಧಿಸುವ ಹಕ್ಕಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಜೊತೆಗೆ ಪ್ರಸಕ್ತ ವಿದ್ಯಾಮಾನಗಳಲ್ಲಿ ಗೋಹತ್ಯೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ಪ್ರಕರಣಗಳ ಕುರಿತಾಗಿ ಕಂಗನಾ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

Tags

Related Articles