ಸುದ್ದಿಗಳು

ಕಂಗನಾ ಜೊತೆ ಕಿರಿಕ್ ಮಾಡಿಕೊಳ್ಳದೇ ಇರಲು ನಿರ್ಧರಿಸಿದ್ದಾರಂತೆ ಹೃತಿಕ್…!

ಮುಂಬೈ, ಜ.16:

ಬಾಲಿವುಡ್ ನಟ ಹೃತಿಕ್ ರೋಷನ್ ಅಭಿನಯದ ‘ಸೂಪರ್ 30’ ಚಿತ್ರ ಇದೇ ಬರುವ ಜುಲೈ 26ರಂದು ಬಿಡುಗಡೆಯಾಗುತ್ತಿದೆ. ಅಂದಹಾಗೆ ‘ಸೂಪರ್ 30’ ಚಿತ್ರ ಜನವರಿ 26ರಂದೇ ಬಿಡುಗಡೆಯಾಗಬೇಕಿತ್ತು. ಆದರೆ ಚಿತ್ರದ ನಿರ್ದೇಶಕ ವಿಕಾಸ್ ಬಾಲ್ ಅವರ ಮೇಲೆ ಕೇಳಿಬಂದ #ಮಿಟೂ ಆರೋಪದಿಂದ ಚಿತ್ರದ ಶೂಟಿಂಗ್ ತಡವಾಗಿ, ಇದೀಗ ಚಿತ್ರದ ಬಿಡುಗಡೆ ಕೂಡ ಮುಂದಕ್ಕೆ ಹೋಗಿದೆ. ಈ ಕುರಿತಂತೆ ಇತ್ತೀಚೆಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಹೃತಿಕ್ ಆಗೋದಿಲ್ಲಾ ಒಳ್ಳೆಯದಕ್ಕೆ ಎನ್ನುವ ಮೂಲಕ, ಚಿತ್ರೀಕರಣ ಮುಂದಕ್ಕೆ ಹೋಗಿದ್ದರಿಂದಲೇ ಕಂಗನಾ ರಾಣಾವತ್ ಅಭಿನಯದ ‘ಮಣಿಕಾರ್ಣಿಕಾ’ ಹಾಗೂ ‘ಸೂಪರ್ 30’ ಚಿತ್ರಗಳ ಬಿಡುಗಡೆ ಡೇಟ್ ಕ್ಲಾಶ್ ಆಗದೆ ಸಂಭವನೀಯ ದೊಡ್ಡ ಮನಸ್ತಾಪ ತಪ್ಪಿದೆ ಎಂಬಂತೆ ಮಾತನಾಡಿದ್ದಾರೆ.

‘ಸೂಪರ್ 30’ ಚಿತ್ರದ ನಿರ್ದೇಶಕರ ಮೇಲೆ ಲೈಂಗಿಕ ದೌರ್ಜನ್ಯದ  ಆರೋಪ

ವಿದೇಶದಲ್ಲಿ ಆರಂಭವಾಗಿ ಭಾರತದಲ್ಲಿ ಸದ್ದು ಮಾಡಿದ ಲೈಂಗಿಕ ದೌರ್ಜನ್ಯದ ವಿರುದ್ಧದ #ಮಿಟೂ ಅಭಿಯಾನದಿಂದಾಗಿ ಚಿತ್ರರಂಗದ ಮತ್ತೊಂದು ಮುಖ ಬಹಿರಂಗವಾಯ್ತು. ಅದೆಷ್ಟೋ ಚಿತ್ರನಿರ್ಮಾಪಕರು ಹಾಗೂ ನಿರ್ದೇಶಕರ ಕರಾಳ ಮುಖ ಬೆತ್ತಲಾದರೆ, ಚಿತ್ರರಂಗದಲ್ಲಿನ ಮತ್ತೊಂದು ಅಸಹ್ಯ ಪ್ರಪಂಚ ಜನರಿಗೆ ಪರಿಚಯವಾಯ್ತು. ನಟಿಯರು, ಮನೋರಂಜನಾ ಮಾಧ್ಯಮದಲ್ಲಿರುವ ತಾರೆಯರು ತಮಗಾದ ಕಹಿಅನುಭವವನ್ನು ಯಾವುದೇ ಮುಚ್ಚು ಮರೆ ಇಲ್ಲದೆ ಹೇಳಿಕೊಂಡಿದ್ದರಿಂದ ಹಲವು ಮಂದಿ ಭಯಭೀತರಾದರು, ಮತ್ತೆ ಕೆಲವರು ನಿರ್ದೇಶಕರನ್ನು ಚಿತ್ರೀರಕಣದಿಂದಲೇ ದೂರವಿಡಲಾಯ್ತು.

ಇದಕ್ಕೆ ಉದಾಹರಣೆ ಎಂಬಂತೆ ‘ಸೂಪರ್ 30’ ಚಿತ್ರದ ನಿರ್ದೇಶಕ ವಿಕಾಸ್ ಬಾಲ್ ಅವರ ಮೇಲೆ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದ್ದರಿಂದ ಅವರನ್ನು ನಿರ್ದೇಶನದಿಂದ ಕೈ ಬಿಡಲಾಯ್ತು. ಈ ಕುರಿತಂತೆ ಇತ್ತೀಚೆಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಹೃತಿಕ್ ವಿಕಾಸ್ ಜೊತೆಗಿನ ಕೆಲಸ ಮಾಡಿದ ಅನುಭವ ಉತ್ತಮವಾಗಿತ್ತು ಎಂದು ಬಣ್ಣಿಸಿದ್ದಾರೆ. ಚಿತ್ರ ನಿರ್ಮಾಪಕರು ನಿರ್ದೇಶಕರನ್ನು ಕೈಬಿಡುವ ಮೂಲಕ ಕಠಿಣ ನಿರ್ಧಾರ ಕೈಗೊಂಡಿದ್ದರ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಹೃತಿಕ್ ರೋಷನ್, ನಿರ್ದೇಶಕರು ಬದಲಾಗಿದ್ದರಿಂದ, ಚಿತ್ರೀಕರಣ ವಿಳಂಭವಾಯ್ತು. ಆಗೋದೆಲ್ಲಾ ಒಳ್ಳೆಯದಕ್ಕೆ ಎಂದಿದ್ದಾರೆ.ಅಂದಹಾಗೆ ಹೃತಿಕ್ ಈ ಮಾತಿನ ಹಿಂದೆ, ಕಂಗನಾ ಜೊತೆಗಿನ ಘರ್ಷಣೆ ತನಗಿಷ್ಟವಿಲ್ಲ ಎಂಬ ಅರ್ಥವೂ ಅಡಗಿದೆ ಎನ್ನುತ್ತಾರೆ ಕೆಲವರು. ಅಂದಹಾಗೆ ಕಂಗನಾ ರಾಣಾವತ್ ಅಭಿನಯದ ‘ಮಣಿಕಾರ್ಣಿಕಾ’ ಇದೇ ತಿಂಗಳ 26ರಂದು ಬಿಡುಗಡೆಯಾಗಬೇಕಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಸೂಪರ್ 30 ಕೂಡ ಅದೇ ದಿನ ತೆರೆಕಾಣಬೇಕಿತ್ತು. ಸಿನಿಪಂಡಿತರ ಅಭಿಪ್ರಾಯದಂತೆ ಹೃತಿಕ್ ರೋಷನ್ ಅಭಿನಯದ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ‘ಮಣಿಕಾರ್ಣಿಕಾ’ ಚಿತ್ರಕ್ಕಿಂತ ಉತ್ತಮ ಪ್ರದರ್ಶನ ಕಾಣುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಮತ್ತೆ ಬಾಕ್ಸ್ ಆಫೀಸ್ ನಲ್ಲಿ ಈ ಇಬ್ಬರು ಮಾಜಿ ಪ್ರೇಮಿಗಳ ನಡುವೆ ಘರ್ಷಣೆ ನಡೆಯುವ ಸಾಧ್ಯತೆ ಹೆಚ್ಚಿತ್ತು. ಅಲ್ಲದೆ ಯಾವುದೇ ಕಾರಣಕ್ಕೂ ತನ್ನ ಮೊದಲ ನಿರ್ದೇಶನದ ಚಿತ್ರ ‘ಮಣಿಕಾರ್ಣಿಕಾ’ ದ ಬಿಡುಗಡೆಯ ಸಮಯವನ್ನು ಮುಂದಕ್ಕೆ ಹಾಕಲು ಕಂಗನಾ ತಯಾರಿಲ್ಲ. ಒಟ್ಟಾರೆ ಆಗೋದೆಲ್ಲಾ ಒಳ್ಳೆಯದಕ್ಕೆ ಎಂಬಂತೆ ಮತ್ತೊಮ್ಮೆ ಮಾಧ್ಯಮಗಳಿಗೆ ಆಹಾರವಾಗುವ ಬದಲಿಗೆ, ಇದೀಗ ಹೃತಿಕ್ ಬಿಸೋ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದು ಗಣಿತಶಾಸ್ತ್ರಜ್ಞ ಆನಂದ್ ಕುಮಾರ್ ಅವರ ಬಯೋಪಿಕ್ ‘ಸೂಪರ್ 30’ ಜುಲೈ ತಿಂಗಳಲ್ಲಿ ತೆರೆಕಾಣಲಿದೆ.

#vikasbahl #bollywood #hindimovies #hruthikroshan #manikarnika #hruthikroshanandkanganaranaut #balkaninews

Tags