ಸುದ್ದಿಗಳು

ಆ್ಯಕ್ಷನ್ ಸಿನಿಮಾ ನಿರ್ದೇಶಿಸಲಿರುವ ಕಂಗನಾ ರಣಾವತ್

ಮುಂಬೈ.ಏ.14: ‘ಮಣಿಕರ್ಣಿಕಾ’ ಚಿತ್ರದ ಮೂಲಕ ಮನೆ ಮಾತಾಗಿರುವ ಬಾಲಿವುಡ್ ಬೆಡಗಿ ಕಂಗನಾ ರಣಾವತ್ ಇದೀಗ ನೂತನ ಸಾಹಸಕ್ಕೆ ಕೈ ಹಾಕಿದ್ದಾರೆ. ಈ ಮೊದಲೇ ಡೈರೆಕ್ಟರ್ ಕ್ಯಾಪ್ ಧರಿಸಿರುವ ಅವರು ಇದೀಗ ಆಕ್ಷನ್ ಒರಿಯೆಂಟೆಡ್ ಸಿನಿಮಾವೊಂದನ್ನು ನಿರ್ದೇಶಿಸಲಿದ್ದಾರೆ.

Image result for kangana ranaut

ಮುಹೂರ್ತ ಮಾಡಿಕೊಂಡ ದಿನದಿಂದಲೂ ಸಾಕಷ್ಟು ಸುದ್ದಿ ಮಾಡಿದ ‘ಮಣಿಕರ್ಣಿಕಾ’ ಬಿಡುಗಡೆಯ ನಂತರವೂ ಗಳಿಕೆಯ ಕುರಿತಾಗಿಯೂ ಸಾಕಷ್ಟು ಸುದ್ದಿ ಮಾಡಿತ್ತು. ಈ ಚಿತ್ರದ ನಂತರ ಇದೀಗ ಕಂಗನಾ ಆತ್ಮವಿಶ್ವಾಸ ಹಾಗೂ ಬೇಡಿಕೆ ಸಾಕಷ್ಟು ಹೆಚ್ಚಿದೆ ಎಂದರೆ ತಪ್ಪಾಗಲಾರದು. ಬಾಲಿವುಡ್ ನಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿ ಕಂಗನಾ ರಣಾವತ್ ಹೊರಹೊಮ್ಮಿದ್ದಾರೆ.

Image result for kangana ranaut

ಬಾಲಿವುಡ್ ನ ಬ್ಯುಸಿ ನಟಿ ಕಂಗನಾ ರಣಾವತ್ ಇದೀಗ ‘ಆ್ಯಕ್ಷನ್ ಓರಿಯೆಂಟೆಡ್’ ಸಿನಿಮಾ ನಿರ್ದೇಶನ ಮಾಡಲಿದ್ದು, ಈಗಾಗಲೇ ಈ ಚಿತ್ರಕ್ಕೆ ಸ್ಕ್ರಿಪ್ಟ್ ಕೆಲಸ ನಡೆಯುತ್ತಿದೆ. ಚಿತ್ರದಲ್ಲಿ ಯಾರೆಲ್ಲಾ ನಟಿಸುತ್ತಾರೆ, ನಿರ್ಮಾಪಕರು ಮುಂತಾದ ಮಾಹಿತಿ ಇನ್ನು ತಿಳಿದು ಬಂದಿಲ್ಲ. ಬಿಟೌನ್ ತುಂಬಾ ಕೇಳಿ ಬರುತ್ತಿರುವ ಈ ಸುದ್ದಿಯಿಂದ ಕಂಗನಾ ಅಭಿಮಾನಿಗಳು ಸಂತಸದಿಂದಿರುವುದು ಮಾತ್ರ ಸತ್ಯ.

ಮಾತಿನ ಮರು ಜೋಡಣೆ (ಡಬ್ಬಿಂಗ್) ಮುಗಿಸಿದ ‘ಆನೆಬಲ’

#kanganaranouth, #filmnews, #filmnews, #manikarnika

Tags