ಸುದ್ದಿಗಳು

ಶ್ಯಾನೆ ಟಾಪಾಗಿರೋ ಚೆಲುವೆಗೆ ಜನ್ಮದಿನದ ಸಂಭ್ರಮ..!

ಸ್ಯಾಂಡಲ್‌ವುಡ್ ತಾರೆ ಅದಿತಿ ಪ್ರಭುದೇವಗೆ 28ರ ಜನ್ಮದಿನ..!

ಚಂದನವನದಲ್ಲಿ ಅತಿಹೆಚ್ಚು ಬೇಡಿಕೆಯನ್ನು ಗಳಿಸಿರುವ ನಟಿ ಅತಿದಿ ಪ್ರಭುದೇವ.

ಪ್ರತಿಯೊಬ್ಬರನ್ನೂ ಗೌರವದಿಂದ ಕಾಣುವ ಈ ನಟಿ ಈಗಾಗಲೇ ಚಿತ್ರರಂಗದಲ್ಲಿ ಒಳ್ಳೆ ಹೆಸರನ್ನು ಪಡೆದಿದ್ದಾರೆ. ನಾಗಕನ್ನಿಕೆ ಸೀರಿಯಲ್ ಮೂಲಕ ಬಣ್ಣದ ಲೋಕಕ್ಕೆ ಎಂಟ್ರೀ ಕೊಟ್ಟು ಸಿಂಗ, ಬಜ಼ಾರ್,ರಂಗನಾಯಕಿ,ಧೈರ್ಯಂ ಮತ್ತು ಬ್ರಹ್ಮಚಾರಿ ಸರಿದಂತೆ ಸಾಲು ಸಾಲು ಚಿತ್ರಗಳಲ್ಲಿ ನಟಿಸಿ ಸ್ಯಾಂಡಲ್‌ವುಡ್ ನಲ್ಲಿ ಟಾಪ್ ನಟಿಯರಲ್ಲಿ ಒಬ್ಬರೆನಿಸಿದ್ದಾರೆ.

ಸದ್ಯ ತೋತಾಪುರಿ ಸೇರಿದಂತೆ ಇನ್ನೆರಡು ಚಿತ್ರಗಳಲ್ಲಿ ನಟಿಸುತ್ತಿರುವ ಈ ನಟಿಗೆ ಜನ್ಮದಿನದ ಸಂಭ್ರಮ. ಪ್ರತಿವರ್ಷದಂತೆ ದಾವಣಗೆರೆ ಬಳಿಯಿರುವ ಮನೆ ದೇವರಿಗೆ ಪೂಜೆ ಮಾಡಿಸಿ. ನಂತರ ಅಲ್ಲಿರುವ ಅಂಧ ಮಕ್ಕಳ ಜೊತೆ ತನ್ನ ಜನ್ಮದಿನವನ್ನ ಸಂಭ್ರಮಿಸಲಿದ್ದಾರೆ ಅದಿತಿ ಪ್ರಭುದೇವ .

#AditiPrabhudeva #Ramachari #Singha #KannadaActress #KannadaMovies #Kannada

Tags