ಸುದ್ದಿಗಳು

ಅಭಿನಯದಿಂದ ದೂರ ಸರಿಯುವುದಿಲ್ಲ: ನಟಿ ಪ್ರೇಮಾ

ಹಿರಿಯ ನಟಿ ಪ್ರೇಮಾ ‘ಉಪ್ಪಿ ಮತ್ತೆ ಹುಟ್ಟಿ ಬಾ’ ಚಿತ್ರದ ಬಳಿಕ ಯಾವ ಸಿನಿಮಾದಲ್ಲೂ ನಟಿಸಿರಲಿಲ್ಲ. ಇದೀಗ ಮತ್ತೆ ಬಣ್ಣ ಹಚ್ಚುವ ಬಗ್ಗೆ ಮಾತನಾಡಿದ್ದಾರೆ.

‘ನಾನು ಚಿತ್ರರಂಗದಿಂದ ದೂರ ಉಳಿಯುವ ಮಾತೆ ಇಲ್ಲ, ಆದರೆ ನನಗೆ ಇಷ್ಟವಾಗುವ ಪಾತ್ರ ಸಿಕ್ಕಿಲ್ಲ. ಮುಂದೆ ಸಿಕ್ಕರೆ ಖಂಡಿತ ಮಾಡುವೆ. ಇತ್ತೀಚೆಗೆ ನನಗೆ ಒಪ್ಪುವ ಪಾತ್ರಗಳಿರುವ ಕಥೆಗಳು ಸಿಕ್ಕಿಲ್ಲ. ಹಲವಾರು ಚಿತ್ರಗಳ ಆಫರ್ ಬಂದಿವೆ. ಆದರೆ ಅವುಗಳು ನನಗೆ ಇಷ್ಟವಾಗಲಿಲ್ಲಾ, ಉತ್ತಮ ಪೋಷಕ ಪಾತ್ರ ಸಿಕ್ಕರೂ ಮಾಡುತ್ತೇನೆ. ಹಾಗಂತಾ ನಾನು ಕಿರುತೆರೆಗೆ ಹೋಗುವುದಿಲ್ಲ’ ಎಂದು ಹುಬ್ಬಳ್ಳಿಯ ಖಾಸಗಿ ಕಾಲೇಜು ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಅವರು ಸ್ಷಪ್ಟಪಡಿಸಿದ್ದಾರೆ.

‘19 ಏಜ್ ಈಸ್ ನಾನ್ಸೆನ್ಸ್’ ಮನುಷ್‍ ಗೆ ಇದೆಂಥಾ ಅದೃಷ್ಟ?

#Prema #PremaMovie  #SandalwoodMovies  ‍#kannadaSuddigalu

Tags