ಸುದ್ದಿಗಳು

ಅಂಬರೀಶ್ ಅಭಿಮಾನಿಗಳಿಗೆ ಇಲ್ಲಿದೆ ಸಿಹಿ ಸುದ್ದಿ

ಕಳೆದ ಕೆಲವು ತಿಂಗಳುಗಳಿಂದ ರೆಬೆಲ್ ಸ್ಟಾರ್ ಅಂಬರೀಶ್ ನಟನೆಯ ಸೂಪರ್ ಹಿಟ್ ಸಿನಿಮಾ ‘ಅಂತ’ ರೀ-ರಿಲೀಸ್ ಆಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಹಾಗೆಯೇ ಎಲ್ಲವೂ ಅಂದುಕೊಂಡಂತಾಗಿದ್ದರೆ ಅವರ ಹುಟ್ಟುಹಬ್ಬಕ್ಕೆ ಈ ಚಿತ್ರ ತೆರೆಮೇಲೆ ಬರಬೇಕಿತ್ತು. ಆದರೆ, ಕೆಲವು ತಾಂತ್ರಿಕ ಕಾರಣದಿಂದ ಆಗ ರಿಲೀಸ್ ಆಗಿಲಿಲ್ಲ.

ವಿಶೇಷವೆಂದರೆ, ಇದೀಗ ಈ ಚಿತ್ರವು ಹೊಸ ತಂತ್ರಜ್ಞಾನದೊಂದಿಗೆ ಮತ್ತೆ ತೆರೆಯ ಮೇಲೆ ಇದೇ ತಿಂಗಳ 8 ರಂದು ಚಿತ್ರಮಂದಿರಗಳಿಗೆ ಲಗ್ಗೆಯಿಡುತ್ತಿದೆ. ಆಧುನಿಕ ಟಚ್ ನೀಡಿರುವ ‘ಅಂತ’ ಚಿತ್ರದ ಹೊಸ ಟ್ರೈಲರ್ ಬಿಡುಗಡೆಯಾಗಿದ್ದು, ಬಹಳ ಕಲರ್ ಫುಲ್ ಮೂಡಿ ಬಂದಿದೆ ಹಾಗೆಯೇ ಚಿತ್ರದ ಬಗ್ಗೆ ಸಿಕ್ಕಾಪಟ್ಟೆ ಭರವಸೆ ಮೂಡಿಸಿದೆ.

1981 ರಲ್ಲಿ ತೆರೆ ಕಂಡಿದ್ದ ಈ ಚಿತ್ರವು ಆಗಿನ ಸಮಯದಲ್ಲಿ ದೊಡ್ಡ ಹಿಟ್ ಆಗಿತ್ತು. ಪೊಲೀಸ್ ಅಧಿಕಾರ ಮತ್ತು ಖೈದಿಯಾಗಿ ಅಂಬರೀಶ್ ರ ಅಭಿನಯದ ಎಲ್ಲರನ್ನೂ ಸೆಳೆದಿತ್ತು. ಅಲ್ಲದೇ ಚಿತ್ರದ ಕೆಲವು ಡೈಲಾಗ್ ಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದವು.

ಎಸ್.ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಈ ಚಿತ್ರದಲ್ಲಿ ಅಂಬರೀಶ್ ರೊಂದಿಗೆ ಲಕ್ಷ್ಮಿ, ಜಯಮಾಲಾ, ಶಕ್ತಿಪ್ರಸಾದ್, ಸುಂದರ್ ಕೃಷ್ಣ ಅರಸ್, ವಜ್ರಮುನಿ ಸೇರಿದಂತೆ ಅನೇಕರು ನಟಿಸಿದ್ದಾರೆ.

ಎಕೆ-47.. ‘ಮಠ’ ಗುರುಪ್ರಸಾದ್..!

#Kannada Movie  #Antha #AnthaMovie  #Ambarish  #SandalwoodMovies  ‍#kannadaSuddigalu

Tags