ಸುದ್ದಿಗಳು

‘ದಬಾಂಗ್-3’ ಕನ್ನಡ ವರ್ಷನ್ ಗೆ ಕನ್ನಡದ ಕಲಾವಿದರ ಧ್ವನಿ..!

ಕಿಚ್ಚ ಸುದೀಪ್ ಹಾಗೂ ಸಲ್ಮಾನ್ ಖಾನ್ ಅಭಿನಯದಲ್ಲಿ ಬರುತ್ತಿರುವ ‘ದಬಾಂಗ್-3’ ಚಿತ್ರವು ಸಾಕಷ್ಟು ಕುತೂಹಲ ಮೂಡಿಸಿದೆ. ಈ ಚಿತ್ರವು ಹಿಂದಿಯಲ್ಲಿ ಮಾತ್ರವಲ್ಲದೇ ತೆಲುಗು, ತಮಿಳು ಸೇರಿದಂತೆ ಕನ್ನಡದಲ್ಲೂ ಡಬ್ ಆಗಿ ಬರುತ್ತಿದೆ. ವಿಶೇಷವೆಂದರೆ ಈ ಚಿತ್ರದ ಕನ್ನಡ ವರ್ಷನ್ ಗೆ ಕನ್ನಡದ ಕಲಾವಿದರೇ ಧ್ವನಿ ನೀಡುತ್ತಿರುವುದು.

ಇನ್ನು ಈ ಚಿತ್ರದ ಕನ್ನಡ ವರ್ಷನ್ ಗೆ ‘ಅಂಬಿ ನಿಂಗೆ ವಯಸ್ಸಾಯ್ತೋ’ ಖ್ಯಾತಿಯ ಗುರುದತ್ ಗಾಣಿಗ ಸಂಭಾಷಣೆ ಬರೆದಿದ್ದು ಅನೂಪ್ ಭಂಡಾರಿ ಹಾಡುಗಳನ್ನು ರಚಿಸಿದ್ದಾರೆ. ಇದೀಗ ಚಿತ್ರದ ಪಾತ್ರಗಳಿಗೆ ರವಿಶಂಕರ್ ಗೌಡ, ಗೋವಿಂದೇ ಗೌಡ, ದಿವ್ಯಾ ಶ್ರೀ, ಶಿವರಾಜ್ ಕೆ.ಆರ್ ಪೇಟೆ, ಧರ್ಮ, ಶಶಿಕಲಾ ಸೇರಿದಂತೆ ಅನೇಕರು ಧ್ವನಿ ನೀಡಿದ್ದಾರೆ.

‘ದಬಾಂಗ್ 3’ ಚಿತ್ರ ನೋಡಿದಾಗ ಇದು ಕನ್ನಡದ ಚಿತ್ರ ಎನಿಸಬೇಕು ಎಂಬ ತೀರ್ಮಾನ ಮಾಡಿರುವ ಕಿಚ್ಚ ಸುದೀಪ್ ಎಲ್ಲಾ ಭಾಷೆಗೂ ಅವರೇ ಧ್ವನಿ ನೀಡಿದ್ದಾರೆ. ಇನ್ನು ಚಿತ್ರದಲ್ಲಿ ಸೋನಾಕ್ಷಿ ಸಿನ್ಹಾ, ಸಾಯಿ ಮಾಂಜ್ರೆಕರ್ ಸೇರಿದಂತೆ ದೊಡ್ಡ ತಾರಾಗಣವೇ ಇದೆ. ಪ್ರಭುದೇವ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

ಮಗಳ ಬರ್ತಡೇಗೆ ದುಬೈಗೆ ಹಾರಿದ ಸ್ಟೈಲಿಶ್ ಸ್ಟಾರ್

#KannadaArtists #Dabaang3 #Sudeep #SalmanKhan #KannadaSuddigalu

Tags