ಸುದ್ದಿಗಳು

‘ಭರಾಟೆ’ ಸಂಭ್ರಮಾಚರಣೆ: ನಿಮ್ಮೂರಿನ ಥಿಯೇಟರ್ ಗೆ ಶ್ರೀಮುರುಳಿ ಭೇಟಿ

ರೋರಿಂಗ್ ಸ್ಟಾರ್ ಶ್ರೀಮುರುಳಿ ಅಭಿನಯದ ‘ಭರಾಟೆ’ ಚಿತ್ರವು ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಸದ್ಯ ಮೂರನೇಯ ವಾರಕ್ಕೆ ಕಾಲಿಟ್ಟಿರುವ ಈ ಚಿತ್ರವು 25ನೇ ದಿನದತ್ತ ಮುನ್ನುಗುತ್ತಿದೆ.

ವಿಶೇಷವೆಂದರೆ ಇದೀಗ ಚಿತ್ರತಂಡದವರು ‘ಭರಾಟೆ ಸಂಭ್ರಮಾಚರಣೆ’ ಆಚರಿಸಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಶ್ರೀಮುರುಳಿ ಹಾಗೂ ಚಿತ್ರತಂಡದವರು ರಾಜ್ಯದ ಹಲವು ಪ್ರಮುಖ ಪ್ರದೇಶಗಳಾದ ಹುಬ್ಬಳ್ಳಿ, ಗದಗ, ದಾವಣಗೆರೆ, ಹಾಸನ, ಶಿವಮೊಗ್ಗ, ಬಾಗಲಕೋಟೆ, ಚಿತ್ರದುರ್ಗ.. ಸೇರಿದಂತೆ ಅನೇಕ ಜಿಲ್ಲೆಯ ಚಿತ್ರಮಂದಿರಗಳಿಗೆ ಭೇಟಿ ನೀಡಲಿದ್ದಾರೆ.

ಅಂದ ಹಾಗೆ ಇದೊಂದು ಕೌಟುಂಭಿಕ ಸಿನಿಮಾವಾಗಿದ್ದು, ಶ್ರೀಲೀಲಾ, ಶೋಭರಾಜ್, ಸಾಯಿಕುಮಾರ್, ರವಿಶಂಕರ್, ಐಯ್ಯಪ್ಪ ಶರ್ಮ, ತಾರಾ, ಸುಮನ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಚಿತ್ರವನ್ನು ‘ಭರ್ಜರಿ’ ಚೇತನ್ ನಿರ್ದೇಶಿಸಿದ್ದಾರೆ.

ಬಿಗ್ ಬಿ ಗೆ ಆರೋಗ್ಯದ ಬಗ್ಗೆ ಅಂತಿಮ ಎಚ್ಚರಿಕೆ ನೀಡಿದ ವೈದ್ಯರು

#KannadaMovie  #Bharaate #MovieCelebration #SriMuruli #SandalwoodMovies  ‍#kannadaSuddigalu

Tags