ಸುದ್ದಿಗಳು

ಹಾಫ್ ಸೆಂಚುರಿ ಬಾರಿಸಿದ ಶ್ರೀ ಮುರುಳಿ ‘ಭರಾಟೆ’

ರೋರಿಂಗ್ ಸ್ಟಾರ್ ಶ್ರೀಮುರುಳಿ ಅಭಿನಯಿಸಿರುವ ‘ಭರಾಟೆ’ ಚಿತ್ರವು ಯಶಸ್ವಿಯಾಗಿ ಪ್ರದರ್ಶನವಾಗುತ್ತಿದ್ದು, ಇಂದು ಯಶಸ್ವಿ 50 ದಿನಗಳನ್ನು ಪೂರೈಸಿದೆ. ಗಾಂಧಿನಗರದ ಸ್ವಪ್ನ, ಮೈಸೂರಿನ ಶಾಂತಲ, ಶಿವಮೊಗ್ಗದ ಹೆಚ್ ಪಿ ಸಿ, ಮಂಡ್ಯದ ಗುರುಶ್ರೀ ಹೀಗೆ ಅನೇಕ ಭಾಗಗಳಲ್ಲಿ ಸಿನಿಮಾ ಇನ್ನು ಪ್ರದರ್ಶನ ಕಾಣುತ್ತಿದ್ದು, ಯಶಸ್ವಿ 75 ನೇ ದಿನಗಳತ್ತ ಮುನ್ನುಗ್ಗುತ್ತಿದೆ.

‘ಬಹದ್ದೂರ್’ ಮತ್ತು ‘ಭರ್ಜರಿ’ ಚಿತ್ರಗಳ ಬಳಿಕ ಚೇತನ್ ಕುಮಾರ್ ನಿರ್ದೇಶನದ ಚಿತ್ರವಿದು. ಇದೊಂದು ಕ್ಲಾಸ್ ಮತ್ತು ಮಾಸ್ ಚಿತ್ರವಾಗಿದ್ದು, ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಗಳಿಕೆ ಕಂಡಿದೆ. ಹಾಗೆಯೇ ಮುರುಳಿ ಸಿನಿಮಾ ಕೆರಿಯರ್ ನಲ್ಲಿ ಮತ್ತೊಂದು ಹಿಟ್ ಸಿನಿಮಾ ಎನಿಸಿಕೊಂಡಿದೆ.

ಇನ್ನು ಚಿತ್ರದಲ್ಲಿ ಶ್ರೀಮುರುಳಿ ಸೇರಿದಂತೆ ಶ್ರೀಲೀಲಾ, ಸಾಧು ಕೋಕಿಲ, ಸಾಯಿಕುಮಾರ್, ರವಿಶಂಕರ್, ಐಯ್ಯಪ್ಪ ಶರ್ಮ, ಸುಮನ್, ತಾರಾ ಸೇರಿದಂತೆ ಅನೇಕ ನೂರಕ್ಕೂ ಹೆಚ್ಚಿನ ಕಲಾವಿದರು ಅಭಿನಯಿಸಿದ್ದಾರೆ.

ದರ್ಶನ್ ನನ್ನ ಸ್ವಂತ ಮಗ: ಸುಮಲತಾ ಅಂಬರೀಶ್

#Bharaate #BharaateMovies  #SriMuruli #KannadaSuddigalu

Tags