ಸುದ್ದಿಗಳು

ಸಾಧಕರ ಸೀಟ್ ಅಲಂಕರಿಸಿದ ಕಾಮಿಡಿ ಸ್ಟಾರ್ ಚಿಕ್ಕಣ್ಣ

ವೀಕೆಂಡ್ ವಿತ್ ರಮೇಶ್ ಕನ್ನಡದ ಜನಪ್ರಿಯ ರಿಯಾಲಿಟಿ ಶೋ. ಹೌದು, ಕನ್ನಡದ ಬಹುಮುಖ್ಯವಾದ ರಿಯಾಲಿಟಿ ಶೋಗಳಲ್ಲಿ ಮೊದಲ ಸ್ಥಾನದಲ್ಲಿದೆ ವೀಕೆಂಡ್ ವಿತ್ ರಮೇಶ್ ಸೀಸನ್ 4. ಈಗಾಗಲೇ ಯಶ್ವಸಿಯಾಗಿ 3 ಸೀಸನ್ ಗಳನ್ನು ಮುಗಿಸಿ ನಾಲ್ಕನೇ ಸೀಸನ್ ನಡೆಯುತ್ತಿದ್ದು, ಇದೀಗ ಈ ಕಾರ್ಯಕ್ರಮದಲ್ಲಿ ಕನ್ನಡದ ಕಾಮಿಡಿ ಸ್ಟಾರ್ ಚಿಕ್ಕಣ್ಣ ಸಾಧಕರ ಸೀಟ್ ಅಲಂಕರಿಸಿದ್ದಾರೆ.

ಹೌದು, ಈ ವಾರದ ಸಾಧಕರ ಸೀಟ್ ನಲ್ಲಿ ಕನ್ನಡದ ಕಾಮಿಡಿ ನ್ಯಾಚುರಲ್ ಸ್ಟಾರ್ ಚಿಕ್ಕಣ್ಣ ಸಾಧಕರ ಸೀಟ್ ಅಲಂಕರಿಸಿದ್ದಾರೆ. ಬಹುತೇಕ ಸ್ಟಾರ್ ಕಲಾವಿದರ ಜೊತೆ ನಟಿಸಿರುವ ಇವರು ಇದೀಗ ಸಾಧಕರ ಕುರ್ಚಿಯಲ್ಲಿ ಕುಳಿತಿರುವುದು ಅವರ ಅಭಿಮಾನಿಗಳಿಗೆ ಸಂತಸ ಉಂಟು ಮಾಡಿದೆ.

ಈ ವಿಚಾರವನ್ನು ಸ್ವತಃ ಚಾನೆಲ್ ರವರು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಈ ವಾರ ಮುಂಬರುವ ವೀಕೆಂಡ್ ವಿಥ್ ರಮೇಶ್ ಸಂಚಿಕೆಯ ಅತಿಥಿ ಯಾರು ಅಂತ ಗೆಸ್ ಮಾಡಿ ನೋಡೋಣ? ನಿಮ್ಮ ಉತ್ತರವನ್ನು ಕೆಳಗೆ ಬರೆಯಿರಿ. ಇವರ ಸ್ಫೂರ್ತಿದಾಯಕ ಪಯಣವನ್ನು ವೀಕ್ಷಿಸಿ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದಲ್ಲಿ ಎಂದು ಹೇಳುತ್ತಾ ಚಿಕ್ಕಣ್ಣನವರ ಫೋಟೋವನ್ನು ಬ್ಲರ್ ಮಾಡಿ ಅಪ್ ಲೋಡ್ ಮಾಡಿದ್ದಾರೆ.

ಚಿಕ್ಕಣ್ಣನವರು ಕಿರಾತಕ, ರನ್ನ, ಅಧ್ಯಕ್ಷ, ಬುಲ್ ಬುಲ್ ರಾಜುಹುಲಿ, ಚಂದ್ರಿಕಾ, ಜಸ್ಟ್ ಲವ್ ಹೀಗೆ ಬಹುತೇಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಮದುವೆಗೂ ಮುನ್ನ ಗರ್ಭಿಣಿಯಾದ ‘ದಿ ವಿಲನ್’ ಬೆಡಗಿ!! ಬೇಬಿ ಬಂಪ್ ಫೋಟೋಶೂಟ್ ನಲ್ಲಿ ಸಖತ್ ಮಿಂಚಿಂಗ್!!

#weekendwithramesh #weekendwithrameshseason4 #chikkanna #chikkannamovies #chikkannafacebook

Tags