ಸುದ್ದಿಗಳು

ಧಾರಾವಾಹಿಗಳತ್ತ ಸಿನಿಮಾ ನಿರ್ದೇಶಕರು..!

ಕನ್ನಡದ ಜನಪ್ರಿಯ ಧಾರಾವಾಹಿಗಳು

ಬೆಂಗಳೂರು, ಅ.17: ಸ್ಯಾಂಡಲ್‍ವುಡ್‍ನಲ್ಲಿ ಒಂದು ಹೊಸ ಟ್ರೆಂಡ್ ಶುರುವಾಗಿದೆ.. ಸಾಮಾನ್ಯವಾಗಿ ಕಿರುತೆರೆಯಿಂದ ಬೆಳ್ಳಿತೆರೆಗೆ ನಿರ್ದೇಶಕರು ಜಂಪ್ ಆಗುವುದು ಸಾಮಾನ್ಯವಾದ ಟ್ರೆಂಡ್ ಆಗಿತ್ತು. ಆದರೆ ಇದೀಗ ಇದು ಬದಲಾಗಿದೆ. ಸ್ಯಾಂಡಲ್‍ವುಡ್‍ನಲ್ಲಿ ಭರ್ಜರಿ ಸಿನಿಮಾಗಳನ್ನು ನೀಡಿದ್ದ ನಿರ್ದೇಶಕರುಗಳು ಇದೀಗ ಧಾರಾವಾಹಿಗಳ ನಿರ್ದೇಶನದಲ್ಲಿ ತೊಡಗಿರುವುದು ಬದಲಾವಣೆಯ ಹೊಸ ಗಾಳಿ ಬೀಸಿದೆ.

ಹೌದು,  ಕಿರುತೆರೆಯಲ್ಲಿ ಸದ್ಯ ಜನಪ್ರಿಯತೆಗಳಿಸಿರುವ ಧಾರಾವಾಹಿಗಳ ಹಿಂದೆ ಈ ಪ್ರತಿಭಾವಂತ ನಿರ್ದೇಶಕರ ಕ್ರಿಯಾಶೀಲತೆ ಅಡಗಿದೆ.  ‘ಉಘೇ ಉಘೇ ಮಾದೇಶ್ವರ’, ‘ಶನಿ’, ‘ಕಮಲಿ’ ಧಾರಾವಾಹಿಗಳನ್ನು ಸಿನಿಮಾ ನಿರ್ದೇಶಕರು ಡೈರೆಕ್ಷನ್ ಮಾಡುತ್ತಿದ್ದಾರೆ. ಈ ನಿರ್ದೇಶಕ ಪ್ರತಿಭೆಯಿಂದ ಧಾರಾವಾಹಿಗಳ ಯಶಸ್ಸಿಗೆ ಹಾಗೂ ಅವುಗಳ ಕ್ವಾಲಿಟಿಗೆ ಸಹಾಯವಾಗಿದೆ .

ಮಹೇಶ್ ಸುಖಧಾರೆ

`ಸೈನಿಕ’, ‘ಸಂಭ್ರಮ’, ‘ಅಂಬರೀಶ’ ಹಾಗೂ ‘ಹ್ಯಾಪಿ ಬರ್ತ್ ಡೇ’ ಚಿತ್ರಗಳನ್ನು ನಿರ್ದೇಶಿಸಿದ್ದ ಮಹೇಶ್ ಸುಖಧಾರೆ ಅವರು ಜೀ ಕನ್ನಡದಲ್ಲಿ ಮೂಡಿ ಬರುತ್ತಿರುವ ‘ಉಘೇ ಉಘೇ ಮಾದೇಶ್ವರ’ ಧಾರಾವಾಹಿಯನ್ನು ನಿರ್ದೇಶನ ಮಾಡುತ್ತಿದ್ದಾರೆ.ರಾಘವೇಂದ್ರ ಹೆಗ್ಡೆ

ಕಲರ್ಸ್ ಕನ್ನಡದಲ್ಲಿ ಶುರುವಾದ ‘ಶನಿ’ ಧಾರಾವಾಹಿ ದೊಡ್ಡ ವೀಕ್ಷಕರ ಬಳಗವನ್ನು ಹೊಂದಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ `ಜಗ್ಗುದಾದ’ ಚಿತ್ರ ಮಾಡಿದ್ದ ರಾಘವೇಂದ್ರ ಹೆಗ್ಡೆ `ಶನಿ’ ಧಾರಾವಾಹಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಧಾರಾವಾಹಿಯ ಯಶಸ್ಸಿನ ಹಿಂದೆ ರಾಘವೇಂದ್ರ ಹೆಗ್ಡೆ ಶ್ರಮವಿದೆ.ಅರವಿಂದ್ ಕೌಶಿಕ್

`ಹುಲಿರಾಯ’ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಅರವಿಂದ್ ಕೌಶಿಕ್ ಇದೀಗ ‘ಕಮಲಿ’ ಧಾರಾವಾಹಿ ಪ್ರಾರಂಭಿಸಿದ್ದಾರೆ. ಈ ಹಿಂದೆ ರಚಿತಾ ರಾಮ್ ನಟಿಸಿದ್ದ ‘ಅರಸಿ’ ಧಾರಾವಾಹಿಯನ್ನು ಸಹ ಅರವಿಂದ್ ಕೌಶಿಕ್ ಅವರೇ ನಿರ್ದೇಶನ ಮಾಡಿದ್ದರು.

Tags