ಸುದ್ದಿಗಳು

ನಂಬರ್ ಒನ್ ಪಟ್ಟ ಗಿಟ್ಟಿಸಿಕೊಂಡ ‘ಗಟ್ಟಿ ಮೇಳ’

ಜೀ ಕನ್ನಡ ವಾಹಿನಿಯಲ್ಲಿ ಪ್ರತಿದಿನ ರಾತ್ರಿ 8 ಗಂಟೆಗೆ ಪ್ರಸಾರವಾಗುತ್ತಿರುವ ಜನಮೆಚ್ಚಿದ ಧಾರಾವಾಹಿ ‘ಗಟ್ಟಿಮೇಳ’. ಕೌಟುಂಬಿಕ ಕಥೆಯನ್ನೊಳಗೊಂಡ ಈ ಸೀರಿಯಲ್ ಇದೀಗ ಟಾಪ್ ವನ್ ಕನ್ನಡ ಸೀರಿಯಲ್ ಆಗಿ ಹೊರಹೊಮ್ಮಿದೆ.

ಹೌದು, ಇಷ್ಟು ದಿನಗಳ ಕಾಲ ಜೀ ಕನ್ನಡ ವಾಹಿನಿಯ ‘ಪಾರು’ ಧಾರಾವಾಹಿ ನಂಬರ್ ವನ್ ಸ್ಥಾನದಲ್ಲಿತ್ತು. ಇದೀಗ ‘ಗಟ್ಟಿಮೇಳ’ ಸೀರಿಯಲ್  ನಂಬರ್ ವನ್ ಪಟ್ಟವನ್ನು ಮುಡಿಗೇರಿಸಿಕೊಂಡಿದೆ.ಈ ಸಂತೋಷದ ಸುದ್ದಿಯನ್ನು ನಟ ರಕ್ಷಿತ್ ಹಾಗೂ ನಟಿ ನಿಶಾ ರವಿಕೃಷ್ಣನ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಸೀರಿಯಲ್ ಶುರುವಾಗಿ ಕೇವಲ ಕೆಲವೇ ತಿಂಗಳುಗಳಲ್ಲಿ ನಂಬರ್ ಸ್ಥಾನ ಪಡೆದುಕೊಂಡಿದೆ. ಈ ಧಾರಾವಾಹಿಯನ್ನು ವೀಕ್ಷಿಸಿ ಪ್ರೋತ್ಸಾಹಿಸಿದ ಪ್ರತಿಯೊಬ್ಬರಿಗೂ ಕೂಡ ಧನ್ಯವಾದಗಳು ಎಂದು ವಿಡಿಯೋ ಮಾಡುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

ನಟಿ ಸುಧಾ ನರಸಿಂಹ ಮೂರ್ತಿ, ರಕ್ಷಿತ್, ನಿಶಾ ರವಿಕೃಷ್ಣನ್, ಅಶ್ವಿನಿ, ಪ್ರಿಯಾ ಆಚಾರ್, ಅಭಿಷೇಕ್ ದಾಸ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ.

 

View this post on Instagram

 

Thanks a ton! You guys have been amazing! Thanks for all the love and support 🤗❤️

A post shared by Raksh (@reachraksh) on

ಬಹುಭಾಷಾ ನಟಿ ರಂಭಾ ಬ್ಯೂಟಿಫುಲ್ ಫ್ಯಾಮಿಲಿ ಇಲ್ಲಿದೆ ನೋಡಿ

#balkaninewskannada #sandalwood #kannadamovies #serialactorrakshith #nisharavikrishan #gattimelatoponeserial

Tags