ಸುದ್ದಿಗಳು

‘ಕನ್ನಡ ದೇಶದೊಳ್’ …..‘ಕನ್ನಡ ದೇಶದೊಳ್’…..

ಬೆಂಗಳೂರು,ಆ.17: ‘ಕನ್ನಡ ದೇಶದೊಳ್‌‌‌‌’ ಎಂಬ ಪದ ಎಷ್ಟು ಬಾರಿ ನೀವು ಕೇಳಿದ್ದೀರಿ? ಕನ್ನಡ ದೇಶದೊಳ್, ಕನ್ನಡ ದೇಶದೊಳ್, ಕನ್ನಡ ದೇಶದೊಳ್ ಎಂಬುದು ಎಲ್ಲಾ ಕಡೆ ಇತ್ತೀಚೆಗೆ ಜಾಸ್ತಿಯಾಗಿ ಕೇಳಿಸುತ್ತಿದೆ…! ಅಷ್ಟೇ ಏಕೆ? ಬಟ್ಟೆ ಮೇಲೂ ಇದೇ ಪದ..! ಆ ಪದ ಕೇಳುವಾಗೆಲ್ಲಾ ಮೈ ರೋಮಾಂಚನಗೊಳ್ಳುತ್ತದೆ.
ಕಳೆದ ಒಂದೆರಡು ವರ್ಷಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಬಸ್ ಗಳಲ್ಲಿ, ಆಟೋಗಳ ಮೇಲೆ ಸಖತ್ ಸದ್ದು ಮಾಡುತ್ತಿದೆ. ಈಗ ಈ ಶೀರ್ಷಿಕೆಯ ಮೂಲಕ ಕನ್ನಡಿಗರ ಮನಗೆದ್ದಿರುವ “ಕನ್ನಡ ದೇಶದೋಳ್” ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ  ಮಾಡಿದೆ..

ಈ ಹೆಸರು ಇಷ್ಟೊಂದು ಜನಪ್ರಿಯರಾಗಲು ಕಾರಣ ಉದಯೋನ್ಮುಖ ನಿರ್ದೇಶಕ ಅವಿರಾಮ್ ಕಂಠೀರವ ಅವರು. ಇವರು ಸಿನಿಮಾವೊಂದನ್ನು ನಿರ್ದೇಶನ ಮಾಡುವುದಕ್ಕೆ ತಯಾರಿ ಮಾಡಿಕೊಂಡಿದ್ದರು ಅದಕ್ಕೆ ಕನ್ನಡ ದೇಶದೋಳ್ ಎಂಬ ಶೀರ್ಷಿಕೆಯನ್ನು ಇಟ್ಟರು ಆದರೆ ಸಿನಿಮಾ ಆರಂಭಕ್ಕೂ ಮೊದಲು ಶೀರ್ಷಿಕೆಯನ್ನು ಪ್ರತಿಯೊಬ್ಬ ಕನ್ನಡಿಗರನ್ನು ತಲುಪುವಂತೆ ಮಾಡಲು ಶೀರ್ಷಿಕೆಯ ಪ್ರಚಾರ ಶುರುಮಾಡಿದರು. ಕನ್ನಡ ದೇಶದೋಳ್ ಶೀರ್ಷಿಕೆ ಇಡೀ ಕನ್ನಡ ನಾಡಲ್ಲಿ ಪ್ರಸಿದ್ದಿ ಪಡೆಯಿತು. ಶೀರ್ಷಿಕೆ ಕನ್ನಡಿಗರ ಮನಗೆದ್ದ ನಂತರ ಸಿನಿಮಾ ಪ್ರಾರಂಭಿಸಿದ ನಿರ್ದೇಶಕ ಅವಿರಾಮ್ ಅವರು ಚಿತ್ರೀಕರಣ ಮುಗಿಸಿ ನವೆಂಬರ್ ನಲ್ಲಿ ತೆರೆಗೆ ತರಲು ಸಿದ್ದತೆ ನಡೆಸಿದ್ದಾರೆ‌‌. ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಸ್ವಾತಂತ್ರ್ಯ ದಿನೋತ್ಸವದ ದಿನದಂದು ಬಿಡುಗಡೆಯಾಗಿದೆ. ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ ಸಂಭ್ರಮ…ಇಂದೇ ‘ಕನ್ನಡ ದೇಶದೊಳ್’ ಬಿಡುಗಡೆ ಮಾಡಲು ತಂಡ ಉತ್ಸುಕವಾಗಿದೆ.

ಚಿತ್ರದಲ್ಲಿ 7 ಹಾಡುಗಳಿವೆ. ರಾಜೇಶ್ ಕೃಷ್ಣನ್, ಅನನ್ಯ ಭಟ್, ಸಿದ್ಧಾರ್ಥ್ ಬೆಳುಮನ್ನು, ಶಶಾಂಕ್ ಶೇಷಗಿರಿ, ಸ್ಪರ್ಶ, ಸಾತ್ವಿಕ್ ಹಾಡಿದ್ದಾರೆ. ಈಗಾಗಲೇ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ. ಗಣೇಶ ಹಬ್ಬಕ್ಕೆ ಹಾಡುಗಳನ್ನು ಹೊರತರಲು ತಂಡ ಸಿದ್ಧವಾಗಿದೆ.

Tags