ಸುದ್ದಿಗಳು

ಕನ್ನಡದ ಕೋಟ್ಯಧಿಪತಿ 4 ರ ಮೊದಲ ಪ್ರಶ್ನೆ ಇಂದು ರಾತ್ರಿ 8 ಕ್ಕೆ..!!

ಮತ್ತೆ ನಿರೂಪಕರಾಗಿ ಪವರ್ ಸ್ಟಾರ್

ಬೆಂಗಳೂರು.ಏ.20: ಕಿರುತೆರೆಯಲ್ಲಿ ಸಾಕಷ್ಟು ಕುತೂಹಲ ಮೂಡಿಸಿರುವ ರಿಯಾಲಿಟಿ ಶೋಗಳಲ್ಲಿ ‘ಕನ್ನಡದ ಕೋಟ್ಯಧಿಪತಿ’ಯೂ ಒಂದು. ಈಗಾಗಲೇ 3 ಆವೃತ್ತಿಗಳಲ್ಲಿ ಮೋಡಿ ಮಾಡಿದ ಈ ಶೋ ಇದೀಗ ಮತ್ತೆ ಬರುತ್ತಿದೆ.

ಹೌದು, ‘ಕನ್ನಡದ ಕೋಟ್ಯಧಿಪತಿ’ 4ನೇ ಆವೃತ್ತಿ ಆರಂಭವಾಗುತ್ತಿದೆ. ಹೊಸ ಚಾನಲ್, ಹೊಸ ನಿರೂಪಕರೊಂದಿಗೆ ಹೊಸದಾಗಿ ಬರುತ್ತಿದ್ದು, ಈ ಬಾರಿ ಮತ್ತೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿರೂಪಣೆಯ ಹೊಣೆ ಹೊತ್ತಿದ್ದಾರೆ.

ಅಂದ ಹಾಗೆ ಇಂದು ಈ ಕಾರ್ಯಕ್ರಮದ ಮೊದಲ ಪ್ರಶ್ನೆಯನ್ನು ಕೇಳಲಾಗುವುದು. ಈ ಬಗ್ಗೆ ಪುನೀತ್ ವಿಡಿಯೋವೊಂದನ್ನು ಮಾಡಿ ಹಂಚಿಕೊಂಡಿದ್ದಾರೆ. ಇನ್ನೊಂದು ಈ ಕಾರ್ಯಕ್ರಮವು ಇದೀಗ ಸ್ಟಾರ್ ಸುವರ್ಣ ವಾಹಿನಿಯಿಂದ ಕಲರ್ಸ್ ಕನ್ನಡ ವಾಹಿನಿಗೆ ಶಿಫ್ಟ್ ಆಗಿದೆ.

ಈಗಾಗಲೇ ಈ ಕಾರ್ಯಕ್ರಮದ ಪ್ರೋಮೋಗಳು ರಿಲೀಸ್ ಆಗಿದ್ದು, ಹೊಸ ಆವೃತ್ತಿಯ ಆರಂಭಕ್ಕೆ ಕೌಂಡೌನ್ ಶುರುವಾಗಿದೆ. ಸದ್ಯಕ್ಕೆ ಕಾರ್ಯಕ್ರಮ ಯಾವಾಗ ಆರಂಭವಾಗುತ್ತದೆ ಎಂಬುವುದರ ಬಗ್ಗೆ ಮಾಹಿತಿಯಿಲ್ಲವಾದರೂ ಇಂದು ಕಾರ್ಯಕ್ರಮದ ಮೊದಲ ಪ್ರಶ್ನೆ ಕೇಳಲಾಗುತ್ತಿದೆ.

ಅಂದ ಹಾಗೆ ಈ ಕಾರ್ಯಕ್ರಮ ಆರಂಭಕ್ಕೂ ಮೊದಲು ಹತ್ತು ಪ್ರಶ್ನೆಗಳನ್ನು ಕೇಳಲಾಗುವುದು. ಈ ಹತ್ತು ಪ್ರಶ್ನೆಗಳಿಗೆ ಉತ್ತರ ನೀಡುವವರನ್ನು ಆಯ್ಕೆ ಮಾಡಿ, ಮೊದಲ ಸುತ್ತಿನ ಆಡಿಷನ್ ಗೆ ಅವಕಾಶ ಮಾಡಿಕೊಡಲಾಗುವುದು.ಇಂದು ರಾತ್ರಿ 8 ಘಂಟೆಗೆ ಕೇಳಲಾಗುವ ಪ್ರಶ್ನೆಗೆ ಎಸ್.ಎಂ.ಎಸ್ ಮೂಲಕ ಉತ್ತರಿಸಬೇಕಾಗುತ್ತದೆ.

‘ಯರ್ರಾಬಿರ್ರಿ’ ಚಿತ್ರಕ್ಕೆ ನಾಯಕಿಯಾದ ಬಿಗ್ ಬಾಸ್ ಖ್ಯಾತಿಯ ಸೋನು ಪಾಟೀಲ್

#kannadakotyadhipathi, #firstquestion, #balkaninews #filmnews, #kannadasuddigalu, #punithrajkumar

Tags