ಸುದ್ದಿಗಳು

ಕಪಟ ನಾಟಕಕ್ಕೆ ತಲೆದೂಗಿದ ಪ್ರೇಕ್ಷಕರು

ಹೊಸ ಪ್ರತಿಭೆಗಳನ್ನು, ಹೊಸತನದ ಕಥೆಗಳನ್ನು ಅದೆಂಥಾ ದೊಡ್ಡ ಚಿತ್ರಗಳ ಭರಾಟೆಯ ನಡುವೆಯೂ ಪ್ರೇಕ್ಷಕ ಪ್ರಭುಗಳು ಕೈ ಬಿಡುವುದಿಲ್ಲ ಎನ್ನುವುದು ಸಾಕಷ್ಟು ಸಲ ಸಾಬೀತಾಗಿದೆ. ಅದೀಗ ‘ಕಪಟ ನಾಟಕ ಪಾತ್ರಧಾರಿ’ಯ ವಿಚಾರದಲ್ಲಿ ಮತ್ತೊಮ್ಮೆ ಸಾಬೀತಾಗಿದೆ.

‘ಹುಲಿರಾಯ’ ಖ್ಯಾತಿಯ ಬಾಲು ನಾಗೇಂದ್ರ ನಾಯಕನಾಗಿ ನಟಿಸಿರುವ ‘ಕಪಟ ನಾಟಕ ಪಾತ್ರಧಾರಿ’ ಆರಂಭಿಕವಾಗಿ ಗಮನ ಸೆಳೆದಿದ್ದೇ ಸುಂದರವಾದ ಹಾಡುಗಳ ಮೂಲಕ. ಆ ನಂತರದಲ್ಲಿ ಹೊರ ಬಂದಿದ್ದ ಟ್ರೇಲರ್ ಮೂಲಕ ವ್ಯಾಪಕ ನಿರೀಕ್ಷೆ ಹುಟ್ಟಿಸಿದ್ದ ‘ಕಪಟ ನಾಟಕ ಪಾತ್ರಧಾರಿ’ ಗಟ್ಟಿ ಕಥೆಯೊಂದಿಗೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಯಾವುದೇ ಚಿತ್ರದ ಬಗ್ಗೆ ನೋಡಿದ ಪ್ರೇಕ್ಷಕರೇ ಒಳ್ಳೆ ಮಾತಾಡೋದನ್ನು ಮೀರಿಸುವ ಪ್ರಚಾರ ಬೇರೊಂದಿಲ್ಲ. ಆದರೆ ಈ ಭಾಗ್ಯ ಸಿಗೋದು ಕೆಲವೇ ಕೆಲ ಚಿತ್ರಗಳಿಗೆ ಮಾತ್ರ. ಅಂಥಾ ಅದೃಷ್ಟವನ್ನು ‘ಕಪಟ ನಾಟಕ ಪಾತ್ರಧಾರಿ’ ಕೂಡಾ ತನ್ನದಾಗಿಸಿಕೊಂಡಿದೆ.

ಈ ಸಿನಿಮಾದ ಪಾಲಿಗೆ ಭರ್ಜರಿ ಓಪನಿಂಗ್ ಸಿಕ್ಕಿತ್ತು. ಆ ನಂತರದಲ್ಲಿ ಬಾಯಿಂದ ಬಾಯಿಗೆ ಹರಡಿಕೊಂಡ ಒಳ್ಳೆ ಮಾತುಗಳೇ ಹೆಚ್ಚೆಚ್ಚು ಜನರನ್ನು ಚಿತ್ರಮಂದಿರಗಳತ್ತ ಕರೆತರುವಲ್ಲಿಯೂ ಯಶಸ್ವಿಯಾಗಿತ್ತು. ಈ ಮೂಲಕ ಈ ಹೊಸಬರ ತಂಡಕ್ಕೆ, ಹೊಸಾ ಪ್ರಯತ್ನಕ್ಕೆ ರೋಮಾಂಚಕ ಗೆಲುವು ಸಿಕ್ಕಿದೆ.

ನಿರ್ದೇಶಕ ಕ್ರಿಶ್ ಅದೆಷ್ಟೋ ವರ್ಷಗಳ ಕಾಲ ನಿರ್ದೇಶನದಲ್ಲಿ ಪಳಗಿದವರಂತೆ ‘ಕಪಟ ನಾಟಕ ಪಾತ್ರಧಾರಿ’ಯ ದೃಶ್ಯ ಕಟ್ಟಿದ್ದಾರೆ. ಇದು ಅವರ ಮೊದಲ ಚಿತ್ರವೆಂದರೆ ನಂಬಲು ಸಾಧ್ಯವಾಗದಷ್ಟು ಅಚ್ಚುಕಟ್ಟಾಗಿ ಇದನ್ನವರು ರೂಪಿಸಿದ್ದಾರೆ. ಇನ್ನುಳಿದಂತೆ ಪ್ರತೀ ಕ್ಷಣವೂ ತುದಿ ಸೀಟಿಗೆ ತಂದು ಕೂರಿಸುತ್ತಾ ಮನೋರಂಜನೆಯ ಮಹಾ ಪೂರವನ್ನೇ ಹರಿಸುವ ಮೂಲಕ ಕಪಟ ನಾಟಕ ಪಾತ್ರಧಾರಿ ಮನಸೆಳೆದಿದ್ದಾನೆ.

ಈ ಸಿನಿಮಾವೀಗೆ ರಾಜ್ಯದ ಎಲ್ಲ ಕೇಂದ್ರಗಳಲ್ಲಿಯೂ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ದಿನದಿಂದ ದಿನಕ್ಕೆ ಕಲೆಕ್ಷನ್ನಿನಲ್ಲಿಯೂ ದಾಖಲೆ ಬರೆಯುತ್ತಿರುವ ಈ ಸಿನಿಮಾವನ್ನು ಆದಷ್ಟು ಬೇಗನೆ ಕಣ್ತುಂಬಿಕೊಳ್ಳಬೇಕೆಂದು ಕಾತರರಾಗಿರುವವರ  ಸಂಖ್ಯೆಯೂ ಹೆಚ್ಚಿನದ್ದಿದೆ. ‘ಕಪಟ ನಾಟಕ ಪಾತ್ರಧಾರಿ’ ದೊಡ್ಡ ಮಟ್ಟದ ಗೆಲುವಿನತ್ತ ಮುನ್ನುಗ್ಗುತ್ತಿದೆ ಎನ್ನುವುದಕ್ಕೆ ಇದಕ್ಕಿಂತಲೂ ಬೇರೆ ಉದಾಹರಣೆ ಬೇಕಿಲ್ಲ.

ಮುದ್ದು ಮಡದಿಯ ಬರ್ತಡೇಗೆ ಮುದ್ದಾಗಿ ವಿಶ್ ಮಾಡಿದ ರಿಯಲ್ ಸ್ಟಾರ್

#KapataNaatakaPaataradhari #BaluNagendra # SangeethaBhat #KannadaSuddigalu

Tags