ಸುದ್ದಿಗಳು

‘ಕಪಟ ನಾಟಕ ಪಾತ್ರಧಾರಿ’ಯ ತಾಂತ್ರಿಕ ಶ್ರೀಮಂತಿಕೆ

‘ಹುಲಿರಾಯ’ ಖ್ಯಾತಿಯ ಬಾಲು ನಾಗೇಂದ್ರ ನಾಯಕನಾಗಿ ನಟಿಸಿರುವ ‘ಕಪಟ ನಾಟಕ ಪಾತ್ರಧಾರಿ’ ಚಿತ್ರ ಇದೇ ನವೆಂಬರ್ 8 ರಂದು ತೆರೆ ಕಾಣಲಿದೆ. ಕ್ರಿಶ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರ ಈಗಾಗಲೇ ಎಲ್ಲ ವರ್ಗದ ಪ್ರೇಕ್ಷಕರ ಆಕರ್ಷಣೆಯಾಗಿ ಬದಲಾಗಿದೆ.

ಹಾಡು ಮತ್ತು ಟ್ರೇಲರ್ ಮೂಲಕವೇ ಆಳವಾಗಿ ಎಲ್ಲ ಪ್ರೇಕ್ಷಕರ ಮನಸುಗಳಿಗೂ ಇಳಿದುಕೊಂಡಿರುವ ‘ಕಪಟ ನಾಟಕ ಪಾತ್ರಧಾರಿ’ ಭರಪೂರವಾದ ಮನೋರಂಜನಾ ಪ್ಯಾಕೇಜ್. ಆರಂಭದಿಂದ ಕಡೆಯವರೆಗೂ ಗಾಢ ಕುತೂಹಲ ಕಾಯ್ದಿಟ್ಟುಕೊಂಡು ಚಿತ್ರ ವಿಚಿತ್ರ ಘಟನಾವಳಿಗಳ ಮೂಲಕ ಕಟ್ಟಲ್ಪಟ್ಟಿರುವ ಇಲ್ಲಿನ ದೃಶ್ಯಗಳು ಪ್ರತೀ ಪ್ರೇಕ್ಷಕರನ್ನೂ ಖುಷಿಗೊಳಿಸಲಿದೆ ಎಂಬ ಭರವಸೆ ಚಿತ್ರತಂಡದಲ್ಲಿದೆ.

ಸಿನಿಮಾವೊಂದು ಭರಪೂರ ಗೆಲುವು ಕಾಣಬೇಕೆಂದರೆ ಅದು ಪ್ರತಿಯೊಂದು ವಿಭಾಗದಲ್ಲಿಯೂ ಕೂಡಾ ಬೆರಗಾಗಿಸುವಂಥಾ ಅಂಶಗಳನ್ನು ಅಡಕವಾಗಿಟ್ಟುಕೊಳ್ಳಬೇಕು. ಈ ಸೂಕ್ಷ್ಮವನ್ನು ಮನಗಂಡಿರುವ ನಿರ್ದೇಶಕ ಕ್ರಿಶ್ ಚಿತ್ರೀಕರಣ ಆರಂಭವಾಗುವ ಮುನ್ನವೇ ಅದಕ್ಕೆ ಬೇಕಾದ ತಯಾರಿ ಮಾಡಿಕೊಂಡಿದ್ದರು. ಈಗಂತೂ ಪ್ರೇಕ್ಷಕರು ಎಲ್ಲ ಕೋನಗಳಿಂದಲೂ ತಾವು ನೋಡುವ ಸಿನಿಮಾವನ್ನು ಚಿಕಿತ್ಸಕ ದೃಷ್ಟಿಯಿಂದ ದಿಟ್ಟಿಸುತ್ತಾರೆ. ಇದನ್ನು ಮನಗಂಡೇ ತಾಂತ್ದರಿಕವಾಗಿಯೂ ಶ್ರೀಮಂತವಾಗಿರುವಂತೆ ನಿರ್ದೇಶಕ ಕ್ರಿಶ್ ನೋಡಿಕೊಂಡಿದ್ದಾರಂತೆ. ಅದೆಲ್ಲವೂ ಸರಿಕಟ್ಟಾಗಿಯೇ ವರ್ಕೌಟ್ ಆಗಲಿದೆ ಎನ್ನುವ ನಂಬಿಕೆ ಅವರಲ್ಲಿದೆ.

ಇಡೀ ಚಿತ್ರದ ಆಕರ್ಷಣೆಗಳೇನೆಂಬ ಪ್ರಶ್ನೆ ಇಟ್ಟರೆ ನಿರ್ದೇಶಕರ ಕಡೆಯಿಂದ ಒಂದಷ್ಟು ವಿಚಾರಗಳು ಹೊರ ಬೀಳುತ್ತವೆ. ಆ ಪ್ರಕಾರವಾಗಿ ನೋಡ ಹೋದರೆ ತಾಂತ್ರಿಕವಾಗಿಯೂ ಈ ಚಿತ್ರವೊಂದು ಮಾಸ್ಟರ್ ಪೀಸ್ ಆಗುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ.

ಸ್ಕ್ರೀನ್ ಪ್ಲೇನಲ್ಲಿಯಂತೂ ಕ್ರಿಶ್ ಜಾದೂವನ್ನೇ ಸೃಷ್ಟಿಸಿದ್ದಾರಂತೆ. ಇದಕ್ಕೆಲ್ಲ ಸಂಪೂರ್ಣವಾಗಿ ಸಂಕಲನದ ಮೂಲಕ ಹೊಸ ಸ್ಪರ್ಶ ನೀಡಿ ಮತ್ತಷ್ಟು ಪರಿಣಾಮಕಾರಿಯನ್ನಾಗಿಸಿ ಮಾಡಿರುವವರು ಶ್ರೀಕಾಂತ್. ಇವರು ‘ಕೆಜಿಎಫ್‌’ನಂಥಾ ಬಿಗ್ ಹಿಟ್ ಚಿತ್ರಕ್ಕೇ ಸಂಕಲನ ವಿಭಾಗದಲ್ಲಿ ಕಾರ್ಯ ನಿರ್ವಹಿಸಿರುವವರು. ಅವರು ತಮ್ಮ ಅನುಭವವನ್ನೆಲ್ಲ ಧಾರೆಯೆರೆದು ಕ್ರಿಯಾಶೀಲವಾಗಿಯೇ ಸಂಕಲನ ಕಾರ್ಯ ಮುಗಿಸಿಕೊಂಡಿದ್ದಾರೆ. ಈ ದೆಸೆಯಿಂದಲೇ ‘ಕಪಟ ನಾಟಕ ಪಾತ್ರಧಾರಿ’ ತಾಂತ್ರಿಕವಾಗಿಯೂ ಸದ್ದು ಮಾಡೋ ಭರವಸೆ ಚಿತ್ರತಂಡದಲ್ಲಿದೆ.

‘ಕಪಟ ನಾಟಕ ಪಾತ್ರಧಾರಿ’ಗೆ ಜೊತೆಯಾದ ಸಂಗೀತಾ ಭಟ್

#KapataNatakaPaathradaari #BaluNagendra #SangeethaBhat  #Filmnews #KanandaSuddigalu

Tags