ಸುದ್ದಿಗಳು

ಟ್ರೈಲರ್ ಮೂಲಕ ಭರವಸೆ ಮೂಡಿಸಿದ ‘ಕಪಟ ನಾಟಕ ಪಾತ್ರಧಾರಿ’

ನವ ನಿರ್ದೇಶಕ ಕ್ರಿಶ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಕಪಟ ನಾಟಕ ಪಾತ್ರಧಾರಿ’ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ವಿಶೇಷವೆಂದರೆ ಈ ಟ್ರೈಲರ್ ನೋಡುಗರಿಂದ ಮೆಚ್ಚುಗೆ ಪಡೆಯುತ್ತಿದ್ದು, ಒಳ್ಳೆಯ ಕಾಮೆಂಟ್ ಗಳು ಬರುತ್ತಿವೆ.

ಇನ್ನು ಚಿತ್ರದಲ್ಲಿ ಬಾಲು ನಾಗೇಂದ್ರ ಹಾಗೂ ಸಂಗೀತಾ ಭಟ್ ನಾಯಕನಟ-ನಟಿಯರಾಗಿ ಕಾಣಿಸಿಕೊಂಡಿದ್ದು, ಈಗಾಗಲೇ ಬಿಡುಗಡೆಗೊಂಡಿರುವ ಚಿತ್ರದ ಹಾಡುಗಳು ಪ್ರೇಕ್ಷಕರನ್ನು ಆಕರ್ಷಿಸಿವೆ. ಈ ಕಾರಣದಿಂದಲೇ ಈ ಸಿನಿಮಾ ಸುತ್ತ ಒಂದಷ್ಟು ಕೌತುಕಗಳಿಗೂ ಜೀವ ಬಂದಂತಾಗಿತ್ತು. ಇದೀಗ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಚಿತ್ರದ ಬಗೆಗೆ ಸಾಕಷ್ಟು ಕುತೂಹಲ ಮೂಡಿಸುತ್ತಿದೆ.

ಚಿತ್ರದಲ್ಲಿ ಆಟೋ ಡ್ರೈವರ್ ಆಗಿ ಬಾಲು ನಾಗೇಂದ್ರ ಕಾಣಿಸಿಕೊಂಡಿದ್ದಾರೆ. ಇನ್ನು ಈ ಟ್ರೈಲರ್ ನೋಡುತ್ತಿದ್ದರೆ ಕಥಾನಾಯಕನು  ಸಿಕ್ಕ ಕೆಲಸಗಳನ್ನೆಲ್ಲ ಬಿಡುತ್ತಾ, ಆಟೋ ಡ್ರೈವರ್ ಆಗಿ ಸೇರಿಕೊಳ್ಳುತ್ತಾನೆ. ಇಂತಹ ನಾಯಕನಿಗೆ ಹಬ್ಬಿಕೊಳ್ಳುವ ಪ್ರೀತಿ, ಆತನಿಗೆ ಸುತ್ತಿಕೊಳ್ಳುವ ಒಂದು ಭೀಕರ ಕ್ರೈಂ ಮತ್ತು ಅದರ ಸುತ್ತ ಹರಡಿಕೊಳ್ಳುವ ಹಾರರ್ ವೃತ್ತಾಂತದ ಸುತ್ತಾ ಮಜವಾದ ಕಥೆಯನ್ನು ಈ ಚಿತ್ರ ಒಳಗೊಂಡಿದೆ ಎಂಬುದು ತಿಳಿಯುತ್ತಿದೆ.

ಇನ್ನು ಈ ಚಿತ್ರವು ಗರುಡ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿದ್ದು, ನಿರ್ದೇಶಕರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಇನ್ನು ಚಿತ್ರಕ್ಕೆ ಆದಿಲ್ ನದಾಪ್ ಸಂಗೀತ ನೀಡಿದ್ದು, ಕ್ರಿಶ್, ವೇಣು ಹಸ್ರಾಳಿ, ಚಾಣಕ್ಯ, ಅನಿರುದ್ಧ್ ಶಾಸ್ತ್ರಿ ಹಾಡುಗಳನ್ನು ರಚಿಸಿದ್ದಾರೆ. ಉಳಿದಂತೆ ಚಿತ್ರದಲ್ಲಿ ಕರಿ ಸುಬ್ಬು, ಶಂಕರ್ ನಾರಾಯಣ್, ಪ್ರಕಾಶ್ ತುಮ್ಮಿನಾಡು, ಉಗ್ರಂ ಮಂಜು, ಜಯದೇವ್, ನವೀನ್ ವಾಸುದೇವ್, ಸೇರಿದಂತೆ ಅನೇಕರು ನಟಿಸಿದ್ದಾರೆ.

ಅವುಕು ರಾಜನ ಎಂಟ್ರಿ ಕಂಡು ದಂಗಾದ ಫ್ಯಾನ್ಸ್

#kapatanatakapaatradhaari #kapatanatakapaatradhaariTrilor #BaluNagendra #SangeethaBhat

Tags