ಸುದ್ದಿಗಳು

‘ಹುಲಿರಾಯ’ನೊಂದಿಗೆ ಹೆಜ್ಜೆ ಹಾಕಿದ ಸಂಗೀತಾ ಭಟ್ !!!

ಶೀರ್ಷಿಕೆಯ ಮೂಲಕವೇ ಗಮನ ಸೆಳೆದ ಸಿನಿಮಾಗಳಲ್ಲಿ ‘ಕಪಟ ನಾಟಕ ಪಾತ್ರದಾರಿ’ ಚಿತ್ರವೂ ಒಂದು. ಈಗಾಗಲೇ ವಿಭಿನ್ನ ಪೋಸ್ಟರ್ ಗಳ ಮೂಲಕ ಗಮನ ಸೆಳೆದಿದ್ದ ಈ ಚಿತ್ರದ ಮೊದಲ ಮೆಲೊಡಿ ಸಾಂಗ್ ರಿಲೀಸ್ ಆಗಿದೆ.

‘ಯಾಕೆ ಅಂತ ಗೊತ್ತಿಲ್ಲ’ ಎಂದು ಶುರುವಾಗುವ ಈ ಹಾಡಿನ ಸಾಲುಗಳು ಕೇಳಲು ಇಂಪಾಗಿದ್ದು, ಹಾಡಿನ ಸಾಲುಗಳು ಸಖತ್ ಕ್ಯಾಚಿಯಾಗಿವೆ. ವೇಣು ಹೆಸ್ರಳ್ಳಿ ರಚಿಸಿರುವ ಈ ಮೆಲೋಡಿ ಹಾಡಿಗೆ, ಹರಿಚರಣ್ ಶೇಷಾದ್ರಿ ಧ್ವನಿಯಾಗಿದ್ದು, ಆದಿಲ್ ನದಾಫ್ ಸಂಗೀತ ಸಂಯೋಜಿಸಿದ್ದಾರೆ.

ಜಗವೇ ನಾಟಕ ರಂಗ

‘ಹುಲಿರಾಯ’ ಚಿತ್ರದಲ್ಲಿ ಅಮೋಘ ಅಭಿನಯದ ನೀಡಿದ್ದ ನಾಯಕ ಬಾಲು ನಾಗೇಂದ್ರ ಈಗ ‘ಕಪಟ ನಾಟಕ ಪಾತ್ರದಾರಿ’ಯಾಗಿ ಕಾಣಿಸಿಕೊಂಡಿದ್ದಾರೆ. ಅವರು ಈ ಚಿತ್ರದಲ್ಲಿ ಆಟೋ ಡ್ರೈವರ್ ಆಗಿ ಕಾಣಿಸಿಕೊಂಡಿದ್ದು, ಸಂಗೀತಾ ಭಟ್ ನಾಯಕಿಯಾಗಿ ಅಭಿನಯಿಸಿದ್ದಾರೆ.

ಇತ್ತಿಚೆಗಷ್ಟೇ ಶೂಟಿಂಗ್ ಮುಗಿಸಿದ್ದ ಚಿತ್ರತಂಡ ಇದೀಗ ಮೆಲೋಡಿ ಹಾಡು ರಿಲೀಸ್ ಮಾಡುವ ಮೂಲಕ ಗಮನ ಸೆಳೆಯುತ್ತಿದೆ. ಇನ್ನು ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ ಕ್ರಿಶ್. ಚಿತ್ರದಲ್ಲಿ ಸಂಗೀತ ಭಟ್, ಬಾಲು ನಾಗೇಂದ್ರ ಸೇರಿದಂತೆ, ಕರಿಸುಬ್ಬು, ಶಂಕರ್ ನಾರಾಯಣ್, ಪ್ರಕಾಶ್ ತುಮ್ಮಿನಾಡು, ಉಗ್ರಂ ಮಂಜು, ಜಯದೇವ್, ಸುನೀಲ್ ಕುಲಕರ್ಣಿ ಮುಂತಾದವರು ನಟಿಸಿದ್ದಾರೆ.

ಲವ್ ನಲ್ಲಿ ಕಳೆದು ಹೋದ ಶಂಕರ್ ನಾಗ್ ಅಭಿಮಾನಿ…!!!

#KapataNatakaPaatradhaari #KapataNatakaPaatradhaarisong #kannadafilm, #kannadamovie, #kannadanews, #kannadanewmovie, #kannadacine, #latestkannadamovie,

Tags