ಸುದ್ದಿಗಳು

ಹಾಡುಗಳೊಂದಿಗೆ ಮನ ಸೆಳೆದ ‘ಕಪಟ ನಾಟಕ ಪಾತ್ರಧಾರಿ’

ಈಗಿನ ದಿನಮಾನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ವಿಭಿನ್ನವಾದ ಟೈಟಲ್‌ಗಳ ಮೂಲಕವೇ ಸದ್ದು ಮಾಡುವ ಚಿತ್ರಗಳ ಸಂಖ್ಯೆ ಹೆಚ್ಚಾಗಿದೆ. ಟೈಟಲ್ಲಿನಂಥಾದ್ದೇ ವಿಶಿಷ್ಟವಾದ ಕಥಾ ಹಂದರವನ್ನು ಹೊಂದಿರುವ ಈ ಬಗೆಯ ಅದೆಷ್ಟೋ ಚಿತ್ರಗಳು ಗೆದ್ದು ಬೀಗಿವೆ.

ಸದ್ಯ ಹೊಸತನದಿಂದ ಕೂಡಿದ ಹಾಡುಗಳ ಮೂಲಕ ಸದ್ದು ಮಾಡುತ್ತಿರುವ ‘ಕಪಟನಾಟಕ ಪಾತ್ರಧಾರಿ’ ಚಿತ್ರವೂ ಅಂಥಾದ್ದೇ ಭರಪೂರ ಗೆಲುವನ್ನು ತನ್ನದಾಗಿಸಿಕೊಳ್ಳುವ ಭರವಸೆ ಮೂಡಿಸಿದೆ. ಇದೇ ನವೆಂಬರ್ 8 ರಂದು ತೆರೆ ಕಾಣಲಿರುವ ಈ ಚಿತ್ರದ ದೊಡ್ಡ ಶಕ್ತಿಯಾಗಿ ಈ ಹಾಡುಗಳು ಹೊರ ಹೊಮ್ಮಿವೆ.

ಕ್ರಿಶ್ ನಿರ್ದೇಶನದ ಕಪಟ ನಾಟಕ ಪಾತ್ರಧಾರಿ ಈ ರೀತಿ ಹಾಡುಗಳ ಮೂಲಕವೇ ಹವಾ ಸೃಷ್ಟಿಸುವಂತೆ ಮಾಡಿರುವವರು ಸಂಗೀತ ನಿರ್ದೇಶಕ ಆದಿಲ್ ನದಾಫ್. ಯಾವುದೇ ಚಿತ್ರದ ವಿಚಾರದಲ್ಲಿಯಾದರೂ ಹಾಡುಗಳ ಮೂಲಕವೇ ಕಥೆಯ ಝಲಕ್ಕುಗಳು ಹೊಮ್ಮುತ್ತವೆ. ಆದರೆ ಅದನ್ನು ಪರಿಣಾಮಕಾರಿಯಾಗಿ ಪ್ರೇಕ್ಷಕ ವಲಯಕ್ಕೆ ತಲುಪುವಂತೆ ಮಾಡುವುದು, ಪ್ರತೀ ಕೇಳುಗರ ಒಳಗಿಳಿದು ಕಾಡುವಂತೆ ಮಾಡುವುದೆಲ್ಲ ಕಷ್ಟದ ಕೆಲಸ. ಅದನ್ನು ಆದಿಲ್ ನದಾಫ್ ಲಾಲಾಜಾಲವಾಗಿಯೇ ಸಾಧ್ಯವಾಗಿಸಿಕೊಂಡಿದ್ದಾರೆ.

‘ಯಾಕೆ ಅಂತ ಗೊತ್ತಿಲ್ಲ ಕಂಡ್ರಿ ನನ್ನನ್ನು ನೋಡಿ ನಕ್ಬಿಟ್ಲು ಸುಂದ್ರಿ ಎಂಬ ಹಾಡು ಮತ್ತು ಲಿರಿಕಲ್ ವೀಡಿಯೋ ಮೂಲಕವೇ ‘ಕಪಟ ನಾಟಕ ಪಾತ್ರಧಾರಿ’ ಚಿತ್ರ ಸದ್ದು ಮಾಡಿತ್ತು. ಆ ನಂತರ ಬಂದ ಹಸಿದಾ ಶಿಖನು ಬೇಟೆಯಾಡಿದೆ ಎಂಬ ಹಾಡಂತೂ ತೀರಾ ವಿಶೇಷವಾದ ಸಾಹಿತ್ಯದೊಂದಿಗೆ ಮಾಡಿದ್ದ ಮೋಡಿ ಕಡಿಮೆಯದ್ದೇನಲ್ಲ.

ನಿರ್ದೆಶಕ ಕ್ರಿಶ್ ಈ ಸಿನಿಮಾ ಹಾಡುಗಳು ಹೀಗೆಯೇ ಮೂಡಿ ಬರಬೇಕೆಂದು ಮೊದಲೇ ನೀಲನಕ್ಷೆ ಸಿದ್ಧ ಮಾಡಿಕೊಂಡಿದ್ದರಂತೆ. ನಂತರ ಅದಕ್ಕೆ ತಕ್ಕುದಾದ ಸಾಹಿತ್ಯ ಬರೆಸಿಕೊಂಡು ಅದಕ್ಕೆ ಆದಿಲ್‌ ರ ಸಂಗೀತ ಸ್ಪರ್ಶ ಕೊಡಿಸುವಲ್ಲಿ ಅವರು ಗೆದ್ದಿದ್ದಾರೆ. ಅದು ಸಿನಿಮಾ ಗೆಲುವಾಗಿ ಫಳಫಳಿಸುವ ಕ್ಷಣಗಳೀಗ ಹತ್ತಿರಾಗುತ್ತಿವೆ.

ರಿಷಿಗೆ ಜೋಡಿಯಾಗಲಿರುವ ಡಿಂಪಲ್ ಕ್ವೀನ್

#KapataNatakaPaatradhaari #FIlmnews  #KannadaSuddigalu

Tags