ಸುದ್ದಿಗಳು

ಮೆಚ್ಚುಗೆ ಪಡೆಯುತ್ತಿರುವ ‘ಯಾಕೆ ಅಂತ ಗೊತ್ತಿಲ್ಲಾ ಕಣ್ರೀ’ ವಿಡಿಯೋ ಸಾಂಗ್

ಬಾಲು ನಾಗೇಂದ್ರ ಮತ್ತು ಸಂಗೀತಾ ಭಟ್ ಅಭಿನಯದ ‘ಕಪಟ ನಾಟಕ ಪಾತ್ರಧಾರಿ’ ಚಿತ್ರವು ತೆರೆಗೆ ಬರಲು ಸಿದ್ದತೆ ನಡೆಸುತ್ತಿದೆ. ಇದೇ ವೇಳೆ ಚಿತ್ರದ ವಿಡಿಯೋ ಸಾಂಗ್ ವೊಂದು ಯುಟ್ಯೂಬ್ ನಲ್ಲಿ ರಿಲೀಸ್ ಆಗಿದ್ದು, ನೋಡುಗರಿಂದ ಮೆಚ್ಚುಗೆ ಪಡೆಯುತ್ತಿದೆ.

ಒಬ್ಬ ಆಟೋಡ್ರೈವರ್ ನ ಸುತ್ತ ಹೆಣೆದಿರುವ ಕಥೆಯನ್ನು ಒಳಗೊಂಡ ಈ ಚಿತ್ರದ ಲಿರಿಕಲ್ ಹಾಡೊಂದು ಈ ಹಿಂದೆ ರಿಲೀಸ್ ಆಗಿ ಸಾಕಷ್ಟು ಮೋಡಿ ಮಾಡಿತ್ತು. ಇದೀಗ ಈ ಹಾಡಿನ ವಿಡಿಯೋ ಹಾಡು ಸಹ ನೋಡುಗರ ಮನ ಸೆಳೆಯುತ್ತಿದೆ.

ಕ್ರಿಶ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರವು ಚಂದದ ಹಾಡುಗಳ ಮೂಲಕವೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ವಿಡಿಯೋ ದೃಶ್ಯಗಳು ನೋಡುಗರನ್ನೆಲ್ಲ ಆವರಿಸಿಕೊಳ್ಳುವಂತೆ ಮೂಡಿ ಬಂದಿದೆ. ಇದರಲ್ಲಿ ನಾಯಕ ಬಾಲು ನಾಗೇಂದ್ರ ಮತ್ತು ನಾಯಕಿ ಸಂಗೀತಾ ಭಟ್ ಚೆಂದದ ಲುಕ್ಕುಗಳಲ್ಲಿ ಕಂಗೊಳಿಸಿದ್ದಾರೆ.

ಗರುಡ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಬಾಲು ನಾಗೇಂದ್ರ, ಸಂಗೀತಾ ಭಟ್, ಕರಿ ಸುಬ್ಬು, ಶಂಕರ್ ನಾರಾಯಣ್, ಪ್ರಕಾಶ್ ತುಮ್ಮಿನಾಡು, ಉಗ್ರಂ ಮಂಜು, ಜಯದೇವ್, ನವೀನ್ ವಾಸುದೇವ್, ಸುನೀಲ್ ಕುಲಕರ್ಣಿ ಸೇರಿದಂತೆ ಸಾಕಷ್ಟು ನಟರು ನಟಿಸಿದ್ದಾರೆ.

ಹಿಂದಿ ವೆಬ್ ಸರಣಿಯಲ್ಲಿ ಮಿಂಚಲಿರುವ ತಾನ್ಯಾ ಹೋಪ್

#KapataNatakaPaatradhaari #VideoSong #BaluNagendra #SangeethaBhat #kannadaSuddigalu

Tags