ಸುದ್ದಿಗಳು

‘ಕಪಟ ನಾಟಕ ಪಾತ್ರದಾರಿ’ಯ ಶೂಟಿಂಗ್ ಮುಕ್ತಾಯ

‘ಹುಲಿರಾಯ’ ಚಿತ್ರದ ಬಳಿಕ ನಾಯಕ ಬಾಲು ನಾಗೇಂದ್ರ ನಟಿಸುತ್ತಿರುವ ಚಿತ್ರವೇ ‘ಕಪಟ ನಾಟಕ ಪಾತ್ರದಾರಿ’. ಈ ಚಿತ್ರದಲ್ಲಿ ಅವರು ಆಟೋ ಡ್ರೈವರ್ ಆಗಿ ಕಾಣಿಸಿಕೊಂಡಿದ್ದು, ಸಂಗೀತಾ ಭಟ್ ನಾಯಕಿಯಾಗಿ ಅಭಿನಯಿಸಿದ್ದಾರೆ.

ಅಂದ ಹಾಗೆ ಮೊನ್ನೆಯಷ್ಟೇ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಚಿತ್ರವನ್ನು ಕ್ರಿಶ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿರುವ ಅವರು ನಿರ್ಮಾಣದಲ್ಲೂ ಪಾಲುದಾರರಾಗಿದ್ದಾರೆ.

‘ಈ ಜಗತ್ತಿನಲ್ಲಿ ಎಲ್ಲರದು ನಾಟಕವಾಗಿರುತ್ತದೆ. ಅವರವರ ಬದುಕಿನಲ್ಲಿ ಬರುವವರೇ ಪಾತ್ರಧಾರಿಗಳು. ಅದರಲ್ಲಿ ಪೋಷಕರು, ಸಹೋದರರು, ಸಹೋದರಿಯರು, ಸ್ನೇಹಿತರು, ಪೊಲೀಸರು, ಖಳರು ಎಲ್ಲರೂ ಇರಬಹುದು ಎಂಬುದನ್ನು ಈ ಚಿತ್ರದಲ್ಲಿ ತೋರಿಸಲಿದ್ದೇನೆ’ ಎಂದು ನಿರ್ದೇಶಕ ಕ್ರಿಶ್ ಹೇಳುತ್ತಾರೆ.

ಸೋಮಾರಿಯಾಗಿರುವ ಕಥಾನಾಯಕ ಬದುಕು ಕಟ್ಟಿಕೊಳ್ಳಲು ಆಟೋ ಚಾಲಕರಾಗಿ, ಆ ಮಧ್ಯೆ ಒಂದು ಪ್ರೀತಿಯೂ ಹುಟ್ಟಿಕೊಂಡು, ಅದರ ಜೊತೆಗೆ ಎದುರಾಗುವ ಸಮಸ್ಯೆಗಳು ಹಾಗೂ ಪರಿಹಾರಗಳನ್ನು ಈ ಚಿತ್ರದಲ್ಲಿ ನೋಡಬಹುದು.

ಚಿತ್ರದಲ್ಲಿ ಸಂಗೀತ ಭಟ್, ಬಾಲು ನಾಗೇಂದ್ರ ಸೇರಿದಂತೆ, ಕರಿಸುಬ್ಬು, ಶಂಕರ್ ನಾರಾಯಣ್, ಪ್ರಕಾಶ್ ತುಮ್ಮಿನಾಡು, ಉಗ್ರಂ ಮಂಜು, ಜಯದೇವ್, ಸುನೀಲ್ ಕುಲಕರ್ಣಿ ಮುಂತಾದವರು ನಟಿಸಿದ್ದಾರೆ. ಗರುಡ ಕ್ರಿಯೇಶನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಚಿತ್ರಕ್ಕೆ ಆದಿಲ್ ನದಾಫ್ ಸಂಗೀತ ನೀಡಿದ್ದಾರೆ.

ಯಶ್ ಗೆ ಸ್ಟಾರ್ ಗಿರಿ ತಂದು ಕೊಟ್ಟ ಈ ಚಿತ್ರಕ್ಕೆ 6 ವರ್ಷ !!

#kapatanatakapatradari #movie #shooting #complited #balkaninews #balunagendra, #sangethabhat #kannadafilm, #kannadamovie, #kannadanews, #kannadanewmovie, #kannadacine, #latestkannadamovie, #sandalwoodmovies

Tags