ಸುದ್ದಿಗಳು

ಉಪೇಂದ್ರ ಅವರಿಂದ ‘ಆ ಕರಾಳ ರಾತ್ರಿ’ ಚಿತ್ರದ ಆಡಿಯೋ ಬಿಡುಗಡೆ.

ಬಿಗ್ ಬಾಸ್ ನಿಂದ ಹೊರ ಬಂದ ಸ್ಪರ್ಧಿಗಳೆಲ್ಲರೂ ಸಖತ್ ಬ್ಯೂಸಿ ಆಗಿದ್ದಾರೆ. ಮನೆ ಒಳಗೆ ಹೋಗಿದ್ದ ಕಲಾವಿದರು ಈಗ ಸಿನಿಮಾಗಳಲ್ಲಿ , ರಿಯಾಲಿಟಿ ಶೋಗಳನ್ನ ಭಾಗಿಯಾಗಿದ್ದಾರೆ. ಅದೇ ರೀತಿಯಲ್ಲಿ ಜೆಕೆ, ಅನುಪಮ ಹಾಗೂ ವೈಷ್ಣವಿ ಒಂದೇ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

‘ಆ ಕರಾಳ ರಾತ್ರಿ’ ಎಂಬ ಹೆಸರು ಕೇಳುತ್ತಿದ್ದಂತೆಯೇ ಇದ್ಯಾವುದೋ ಹಾರರ್ ಚಿತ್ರ ಎಂದನಿಸಬಹುದು. ಆದರೆ, ಅದು ಹಾರರ್ ಅಲ್ಲ, ಇದೊಂದು ಎಮೋಷನಲ್ ಥ್ರಿಲ್ಲರ್ ಸಿನಿಮಾ ಎನ್ನುತ್ತಾರೆ ದಯಾಳ್ ಪದ್ಮನಾಭನ್.

ಕೇವಲ 14 ನೇ ದಿನದಲ್ಲಿ ಶೂಟಿಂಗ್ ಮುಗಿಸಿ ಸುದ್ದಿಯಾಗಿದ್ದ ಚಿತ್ರವನ್ನು, ದಯಾಳ್ ಅವರು ನಿರ್ಮಿಸುತ್ತಿದ್ದು, ಸಧ್ಯ ಈ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಸೋಮವಾರ , ಸಂಜೆ 6: 30 ಕ್ಕೆ ನಟ ಉಪೇಂದ್ರ ಅವರು ಆಡಿಯೋ ಬಿಡುಗಡೆ ಮಾಡುತ್ತಾರೆ. ಈ ಕಾರ್ಯಕ್ರಮ ಬೆಂಗಳೂರಿನ ಕಲಾವಿದರ ಸಂಘ, ಚಾಮರಾಜಪೇಟೆಯಲ್ಲಿ ನಡೆಯಲಿದೆ.

ಮೊದಲ ಬಾರಿಗೆ 80 ರ ದಶಕದ ಗೆಟಪ್ ನಲ್ಲಿ ಕಾಣಿಸಿಕೊಂಡಿರುವ ಜೆ.ಕೆ ಈ ಚಿತ್ರದ ಕುರಿತು ಖುಷಿ ವ್ಯಕ್ತಪಡಿಸುತ್ತಾರೆ. ಹಾಗೂ ರಿಯಾಲಿಟಿಗೆ ವಿರುದ್ಧವಾಗಿ ಉದ್ದ ಮೀಸೆ, ಸ್ಮೂಥ್ ಶೇವ್ ಗೆಟಪ್ ನಲ್ಲಿ ಮಿಂಚುತ್ತಿದ್ದಾರೆ.

ಒಂದು ರಾತ್ರಿಯಲ್ಲಿ ನಡೆಯುವ ಘಟನೆಯ ಸುತ್ತ ಹೆಣೆದ ಕತೆ ‘ ಆ ಕರಾಳ ರಾತ್ರಿ ‘ ಚಿತ್ರದಲ್ಲಿ ಹಳ್ಳಿಯಲ್ಲಿ ನಡೆಯುವ ಕತೆ ಹೇಳಲಾಗಿದೆ . ನಗರದಿಂದ ಹಳ್ಳಿಗೆ ಬಂದ ಹುಡುಗನೊಬ್ಬ ಮನೆಯೊಂದರಲ್ಲಿ ಉಳಿದುಕೊಂಡಾಗ ಏನಾಗುತ್ತೆ ಎನ್ನುವುದು ಚಿತ್ರದಲ್ಲಿದೆ . ಪೂರ್ಣವಾಗಿ 80 ರ ದಶಕದ ಸ್ಟೈಲ್ ನೋಡಬಹುದು .

ಜೆ.ಕೆ ಮತ್ತು ಅನುಪಮಾ ಗೌಡ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಚಿತ್ರಕ್ಕೆ ನಟ ನವೀನ್ ಕೃಷ್ಣ ಅವರು ಸಂಭಾಷಣೆ ಬರೆದಿದ್ದಾರೆ. ಗಣೇಶ್ ನಾರಾಯಣ್ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ರಂಗಾಯಣರಘು ಹಾಗೂ ವೀಣಾಸುಂದರ್ ಸೇರಿದಂತೆ ಹಲವಾರು ಕಲಾವಿದರು ನಟಿಸಿದ್ದಾರೆ.

Tags