ಬಾಲ್ಕನಿಯಿಂದವಿಡಿಯೋಗಳುಸುದ್ದಿಗಳು

ನಟಿ ಸಾತ್ವಿಕಾ ಅಪ್ಪಯ್ಯ ನಟಿಸಿರುವ ಆಲ್ಬಮ್ ಸಾಂಗ್ ಟ್ರೈಲರ್..!!!

ದಿನದಿಂದ ದಿನಕ್ಕೆ ಚಿತ್ರರಂಗಕ್ಕೆ ಹೊಸಬರು ಹೊಸ ಹೊಸ ವಿಷಯಗಳೊಂದಿಗೆ ಬರುತ್ತಿದ್ದಾರೆ. ಕೆಲವರು ಕಿರುಚಿತ್ರಗಳ ಮೂಲಕ, ಕೆಲವರು ಆಲ್ಬಂ ಸಾಂಗ್ ಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಅಂಥದ್ದೇ ಒಂದು ಪ್ರಯತ್ನ ಇಲ್ಲಿದೆ.

ಹೌದು, ಇಲ್ಲೊಂದು ಚಿತ್ರತಂಡದವರು ಸಿನಿಮಾ ಮಾಡಿದ್ದರೂ ಸಹ ಪ್ಯಾಶನ್ ಗಾಗಿ ವಿಡಿಯೋ ಆಲ್ಬಮ್ ಸಾಂಗ್ ಮಾಡಿದ್ದಾರೆ. ಈ ಮೂಲಕ ಹೊಸತನ್ನು ನೀಡಲು ಮುಂದಾಗಿದ್ದು, ಈ ಆಲ್ಬಮ್ ಸಾಂಗ್ ಗೆ ‘ಕರಣ್’ ಎಂಬ ಹೆಸರನ್ನು ಇಡಲಾಗಿದೆ. ಅದಕ್ಕೆ ‘ಎಬೋವ್ ಆಲ್’ ಎಂಬ ಅಡಿಬರಹವಿದ್ದು, ನಟಿ ಸಾತ್ವಿಕಾ ಅಪ್ಪಯ್ಯ ಕಾಣಿಸಿಕೊಂಡಿದ್ದಾರೆ.

ಅಂದ ಹಾಗೆ ಈ ವಿಡಿಯೋ ಆಲ್ಬಮ್ ಅನ್ನು ಮಂಜು ನಂದನ್ ನಿರ್ದೇಶನ ಮಾಡಿದ್ದಾರೆ. ಇವರು ಈ ಹಿಂದೆ ‘2000’ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದು, ಈ ಚಿತ್ರವು ಬಿಡುಗಡೆಗೆ ಸಿದ್ದವಾಗುತ್ತಿದೆ. ಈ “ಕರಣ್’ ವಿಡಿಯೋ ಸಾಂಗ್ ಆಲ್ಬಂನಲ್ಲಿ ನಾಲ್ಕು ಕನ್ನಡ, ಇಂಗ್ಲೀಷ್ ಮತ್ತು ಹಿಂದಿ ಭಾಷೆಯ ನಾಲ್ಕು ಹಾಡುಗಳಿವೆ.

ಈ ವಿಡಿಯೋ ಆಲ್ಬಂನಲ್ಲಿ ಡ್ರೀಮ್ ಸಾಂಗ್, ಪೋಷಕರಿಗೆ ಸಂದೇಶ ಸಾರುವ ಒಂದು ಹಾಡು, ಮಹಿಳಾ ಪ್ರಧಾನವಾಗಿರುವ Rap ಸಾಂಗ್ ಮತ್ತು ಸಮಯಕ್ಕೆ ಆದ್ಯತೆ ಕೊಡಬೇಕು ಎಂಬ ಕುರಿತಂತೆ ಹಾಡುಗಳಿವೆ.

ಈ ವಿಡಿಯೋ ಆಲ್ಬಂ ಸಾಂಗ್ ಕುರಿತು ಮಾತನಾಡುವ ನಿರ್ದೇಶಕ ಮಂಜು ನಂದನ್, “ಆಲ್ಬಂನಲ್ಲಿ ಕರಣ್ ಸಿಂಗ್ ಠಾಕೂರ್ ಹೀರೋ ಆಗಿ ಕಾಣಿಸಿಕೊಂಡಿದ್ದು, ಉಳಿದಂತೆ ಸಿದ್ಧಾಂತ್, ಸಿಸೋಡಿಯಾ, ದುರ್ಗಾಸಿಂಗ್ ಠಾಕೂರ್, ಬೇಬೀಶ್ರೀ ಕಾಣಿಸಿಕೊಂಡಿದ್ದಾರೆ. ಹಾಡಿಗೆ ಪ್ರವೀಣ್ ಪ್ರಾನ್ಸಿಸ್ ಸಂಗೀತವಿದೆ’ಎಂದಿದ್ದಾರೆ.

ಸದ್ಯಕ್ಕೆ ಈ ವಿಡಿಯೋ ಆಲ್ಬಂ ಟ್ರೈಲರ್ ಮಾತ್ರ ರಿಲೀಸ್ ಆಗಿದ್ದು, ಮುಂದಿನ ತಿಂಗಳ 5 ರಂದು ಪೂರ್ತಿ ಹಾಡು ಬಿಡುಗಡೆಯಾಗಲಿದೆ. ಧಾರವಾಡ, ಬೆಳಗಾವಿ ಹತ್ತಿರ ಇರುವ ಜಲಪಾತವೊಂದರ ಬಳಿ ಈ ಹಾಡಿನ ಚಿತ್ರೀಕರಣ ಮಾಡಲಾಗಿದೆ.

ಶಿವಣ್ಣನ ಚಿತ್ರದಲ್ಲಿ ಶಿವಾಜಿ ಪ್ರಭು ಮತ್ತು ಸುಹಾಸಿನಿ

#karan, #video, #album, #balkaninews #filmnews, #manjunandan. #sathvikaappaiah

Tags