ಸುದ್ದಿಗಳು

ಬಾಲಿವುಡ್ ನ ಈ ನಟಿಯನ್ನು ಮದುವೆಯಾಗಲು ಕರಣ್ ಜೋಹರ್ ಇಚ್ಛಿಸಿದ್ದರಂತೆ?

ಕರೀನಾ ಕಪೂರ್ ನನ್ನ ಮೊದಲ ಆಯ್ಕೆ..

ಕರಣ್ ಜೋಹರ್ ಇದೀಗ ಮತ್ತೊಮ್ಮೆ ತಮ್ಮ ಲೈಂಗಿಕ ಆಸಕ್ತಿಯ ವಿಚಾರವನನ್ನು ಮಾಧ್ಯಮವೊಂದರ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ

ಮುಂಬೈ,ಸೆ.07: ನಿರ್ದೇಶಕ ಹಾಗೂ ನಿರ್ಮಾಪಕ ಕರಣ್ ಜೋಹಾರ್ ಹಲವು ಬಾರಿ ತಮ್ಮ ಸೆಕ್ಸ್ ಲೈಫ್, ತಮ್ಮ  ಸಮಸ್ಯೆ ಕುರಿತಂತೆ ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಅಂದಹಾಗೆ ಕರಣ್ ಜೋಹರ್ ಇದೀಗ ಮತ್ತೊಮ್ಮೆ ತಮ್ಮ ಲೈಂಗಿಕ ಆಸಕ್ತಿಯ ವಿಚಾರವನನ್ನು ಮಾಧ್ಯಮವೊಂದರ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ. ನನಗೆ ಲೈಂಗಿಕಾಸಕ್ತಿ ಸಿಕ್ಕಾಪಟ್ಟೆ ಕಡಿಮೆ ಎಂದು ಹೇಳಿಕೊಂಡಿರುವ ಕರಣ್ ಜೋಹರ್, ನನಗೆ ಈ ವಿಚಾರದಲ್ಲಿ ಆಸಕ್ತಿ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಕರೀನಾ ಮೊದಲ ಆಯ್ಕೆ

ಅಂದಹಾಗೆ ಕರಣ್ ಜೋಹರ್ ಇದೀಗ ಇಬ್ಬರು ಮುದ್ದಾದ ಮಕ್ಕಳ ತಂದೆ. ಬಾಡಿಗೆ ತಾಯಿಯ ಮೂಲಕ ಕರಣ್ ಇಬ್ಬರು ಮುದ್ದಾದ ಅವಳಿ ಮಕ್ಕಳಿಗೆ ತಂದೆಯಾಗಿದ್ದು, ಮಕ್ಕಳೊಂದಿಗೆ ಕರಣ್ ಜೋಹರ್ ಉತ್ತಮ ಸಮಯ ಕಳೆಯುತ್ತಿದ್ದಾರೆ.

Image result for kareena kapoor

ಅನೈತಾಶ್ರಾಫ್ ಅವರ ಚಾಟ್ ಶೋ ದಲ್ಲಿ ಕೇಳಲಾದ, ನೀವು ಮದುವೆಯಾಗಲು ಇಷ್ಟಪಟ್ಟರೆ ಯಾರನ್ನು ಬಾಳಸಂಗಾತಿಯನ್ನಾಗಿ ಆಯ್ಕೆ ಮಾಡಲು ಇಚ್ಛಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿರುವ ಕರಣ್ ಜೋಹರ್, ಒಂದು ವೇಳೆ ನಾನು ಮದುವೆಯಾಗುತ್ತಿದ್ದರೆ, ಕರೀನಾ ಕಪೂರ್ ನನ್ನ ಮೊದಲ ಆಯ್ಕೆ ಎಂದಿದ್ದಾರೆ. ಅಂದಹಾಗೆ ಕರಣ್ ಹಾಗೂ ಕರೀನಾ ಕಾಪೂರ್ ಸದಾ ಸುದ್ದಿಯಲ್ಲಿರುತ್ತಾರೆ. ಇವರಿಬ್ಬರು ಬಾಲಿವುಡ್ ನ ಅತ್ಯಂತ ಅತ್ಮೀಯ ಗೆಳೆಯರಾಗಿದ್ದರೂ, ಇವರ ಮಧ್ಯೆಗಿನ ಸಂಬಂಧದ ಕುರಿತಂತೆ ಹಲವು ಬಾರಿ ಸುದ್ದಿಯಾಗಿತ್ತು.

 

Tags

Related Articles