ಸುದ್ದಿಗಳು

ಕರೀನಾ ಧರಿಸಿದ ಲೆಹೆಂಗಾ ತೂಕ ಎಷ್ಟು ಗೊತ್ತಾ?

ಮುಂಬೈ,ಜು.27: ಬಾಲಿವುಡ್ ನ ಬೆಡಗಿ ಕರೀನಾ ಕಪೂರ್ ವೀರೆ ದಿ ವೆಡ್ಡಿಂಗ್ ಚಿತ್ರದ ಯಶಸ್ಸಿನ ಅಲೆಯಲ್ಲಿ ತೇಲಾಡುತ್ತಿದ್ದಾರೆ. ಬೆಬೋ ಎಲ್ಲೇ ಹೋದರೂ ಸರಿ ಸುದ್ದಿಯಲ್ಲಿರುತ್ತಾಳೆ. ಸದ್ಯ ಕರೀನಾ ಕಪೂರ್ ಖಾನ್ ಇಂಡಿಯಾ ಕೌಚರ್ ವೀಕ್ 2018 ಗಾಗಿ ಗುರುವಾರ ರ್ಯಾಂಪ್ ವಾಕ್ ಮಾಡಿದ್ದಾಳೆ. ರ್ಯಾಂಪ್ ವಾಕ್ ಮಾಡುವುದರಲ್ಲೇನು ವೈಶಿಷ್ಟ್ಯ ಎನ್ನಬೇಡಿ. ಕರೀನಾ ಈ ಬಾರಿ ಫ್ಯಾಷನ್ ವಿನ್ಯಾಸಕಾರ ಶೇನ್ ಮತ್ತು ಫಾಲ್ಗುಣಿ ಪೀಕಾಕ್ ವಿನ್ಯಾಸಗೊಳಿಸಿದ್ದ ಡ್ರೆಸ್ ತೊಟ್ಟು ಕಣ್ಮನ ಸೆಳೆದಿದ್ದಾಳೆ.

ಬಂಗಾರ ಬಣ್ಣದ ಲೆಹೆಂಗಾ!!

ಬಂಗಾರ ಬಣ್ಣದ ಲೆಹಂಗಾ ತೊಟ್ಟ ಕರೀನಾ ಮಿರ ಮಿರನೆ ಮಿಂಚುತ್ತಿದ್ದಳು. ಟ್ರೆಡಿಶನ್ ಜೊತೆ ಗ್ಲಾಮರಾಗಿ ಕಾಣ್ತಿದ್ದಳು. ಕರೀನಾ ಧರಿಸಿದ್ದ ಲೆಹಂಗಾ ಮೇಲೆ ಸ್ಫಟಿಕದ ಕಸೂತಿ ಮಾಡಲಾಗಿತ್ತು. ಗರಿಗಳಿರುವ ದುಪಟ್ಟಾ ಕರೀನಾ ಸೌಂದರ್ಯವನ್ನು ಇಮ್ಮಡಿಗೊಳಿಸಿದ್ದು ಸುಳ್ಳಲ್ಲ.

ಬರೋಬ್ಬರಿ 30 ಕೆ.ಜಿ.

ಕರೀನಾ ಧರಿಸಿದ್ದ ಲೆಹಂಗಾ ತೂಕ ಎಷ್ಟಿರಬಹುದು ಗೊತ್ತಾ? ಬರೋಬ್ಬರಿ 30 ಕೆ.ಜಿ.ಯಂತೆ. ಈ ವಿಚಾರವನ್ನು ಕರೀನಾ ಸ್ವತಃ ಹೇಳಿದ್ದಾಳೆ. ರ್ಯಾಂಪ್ ವಾಕ್ ಬಳಿಕ ಮಾತನಾಡಿದ ಕರೀನಾ, ಲೆಹಂಗಾ ತುಂಬಾ ಭಾರವಾಗಿತ್ತು. 30 ಕೆ.ಜಿ ಲೆಹಂಗಾ ಧರಿಸಿದ್ದ ನನಗೆ ರ್ಯಾಂಪ್ ವಾಕ್ ಮಾಡೋದು ತುಂಬಾ ಕಷ್ಟವಾಗಿದ್ದರೂ ಲೆಹಂಗಾ ನನಗೆ ಇಷ್ಟವಾಗಿದೆ ಎಂದಿದ್ದಾಳೆ ಕರೀನಾ!!

 

Tags