ಸುದ್ದಿಗಳು

ಕರೀನಾಗೆ ತೈಮೂರ್ ಕೊಟ್ಟ ಮೊದಲ ಗಿಫ್ಟ್..!

ಮುಂಬೈ, ಏ.22:

ನಟಿ ಕರೀನಾ ಕಪೂರ್ ಗೆ ಯಾಕೋ ಖುಷಿ..! ಹೌದು, ಸದ್ಯ ನೀವು ಸಾಮಾಜಿಕ ಜಾಲತಾಣಗಳನ್ನು ನೋಡಿದಾಗ ಅತಿ ಹೆಚ್ಚು ಮಗುವಿನ ಫೋಟೋ ಡೌನ್‌ ಲೋಡ್ ಹಾಗೂ ಶೇರ್ ಆಗಿದ್ದನ್ನು ನೋಡಿರಬಹುದು. ಇದರಲ್ಲಿ ಕರೀನಾ ಕಪೂರ್ – ಸೈಫ್ ಅಲಿ ಖಾನ್ ಪುತ್ರ ತೈಮೂರ್ ಅಲಿ ಖಾನ್ ಗೆ ಮೊದಲ ಸ್ಥಾನ. ತನ್ನ ಕ್ಯೂಟ್ ನೆಸ್ ಮೂಲಕ ಸುದ್ದಿಯಲ್ಲಿರುವ ತೈಮೂರ್ ಇದೀಗ ಮೊದಲ ಬಾರಿಗೆ ತನ್ನ ತಾಯಿ ಕರೀನಾಗೆ ಗಿಫ್ಟ್ ವೊಂದನ್ನು ನೀಡಿದ್ದಾನೆ. ಸೂರ್ಯನ ಕುರಿತಾದ ಚಿತ್ರವೊಂದನ್ನು ತನ್ನ ಕೈಯ್ಯಾರೆ ಮುದ್ದು ಮುದ್ದಾಗಿ ಬಿಡಿಸಿರುವ ತೈಮೂರ್ ತನ್ನ ತಾಯಿಗೆ ಗಿಫ್ಟ್ ನೀಡಿದ್ದಾನೆ. ಇದರಲ್ಲಿ ‘Mom, you are my sunshine’ ಎಂದು ಬರೆದಿದ್ದಾನೆ. ಇದನ್ನು ನೋಡಿ ಸ್ವತಃ ಕರೀನಾ ಕಪೂರ್ ಗೆ ಶಾಕ್ ಆಗಿತ್ತಂತೆ..!

ಈ ಕುರಿತು ಮಾತನಾಡಿದ ಕರೀನಾ, ‘ಒಂದು ಸೊಗಸಾದ ನೋಟವನ್ನು ಚಿತ್ರಿಸಿದ್ದಾನೆ’ ಎಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕೆಲವರು ಈ ಹಿಂದೆ ಕರೀನಾ ಕಪೂರ್ ವಿರುದ್ಧ ಆರೋಪವೊಂದನ್ನು ಮಾಡಿದ್ದರು. ಅದೇನೆಂದರೆ  ಜೂನಿಯರ್ ನವಾಬ್ ನೊಂದಿಗೆ ಕರೀನಾ ಹೆಚ್ಚು ಸಮಯ ಕಳೆಯುತ್ತಿಲ್ಲ ಎಂದು ದೂರಿದ್ದರು. ಇದಕ್ಕೆ ಅದೇ ರೀತಿ ಉತ್ತರ ಕೊಟ್ಟಿರುವ ಕರೀನಾ ಕಪೂರ್, ಬಿಳಿ ಶರ್ಟ್ ಹಾಗೂ ಗ್ರೇ ಕಾರ್ಗೋ ಪ್ಯಾಂಟ್ ಧರಿಸಿ ತೈಮೂರ್ ನ ಕೈ ಹಿಡಿದು ನಡೆದುಕೊಂಡು ಹೋಗುವ ಫೋಟೋವೊಂದನ್ನು ಅಪ್ ಲೋಡ್ ಮಾಡಿದ್ದಾರೆ. ಅದೇನೇ ಆಗಲಿ, ಕ್ಯೂಟ್ ತೈಮೂರ್ ತನ್ನ ಮುದ್ದು – ಮುದ್ದು ಕೈಯಿಂದ ಬಿಡಿಸಿರೋ ಮೊದಲ ಪೈಂಟಿಂಗನ್ನು ತಾಯಿಗೆ ಗಿಫ್ಟ್ ನೀಡಿದ್ದು ಕರೀನಾ ಕಪೂರ್ ಗೆ ಸ್ವರ್ಗ ಸಿಕ್ಕ ಖುಷಿಯಂತೆ.!

 

View this post on Instagram

 

❤❤❤❤

A post shared by Kareena Kapoor Khan (@therealkareenakapoor) on

ಮತ್ತೆ ನಗಿಸಲು ಮತ್ತೊಮ್ಮೆ ಬರುತ್ತಿದೆ ‘ಸಿಲ್ಲಿ ಲಲ್ಲಿ’

#kareenakapoor #bollywood #hindimovies #tamiuralikhan #kareenakapoorandtaimuralikhan

Tags