ಸುದ್ದಿಗಳು

ಕ್ಲೋಸ್ ಅಪ್ ಫೋಟೋ ವೈರಲ್: ಕರೀನಾಳನ್ನು ‘ಆಂಟಿ’ ಎಂದ ಟ್ರೋಲಿಗರು

ಬಾಲಿವುಡ್ ನಟಿ ಕರೀನಾ ಕಪೂರ್ ಯುರೋಪ್ ಪ್ರವಾಸದಲ್ಲಿರುವುದು ಗೊತ್ತಿರುವ ವಿಚಾರ. ಪ್ರವಾಸಕ್ಕೆ ಹೋದ ನಂತರ ಕರೀನಾ ಅಲ್ಲಿನ ಲೇಟೆಸ್ಟ್ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಲೇ ಇದ್ದಾರೆ. ಆದರೆ ಇದೀಗ ಅವರು ಪೋಸ್ಟ್ ಮಾಡಿರುವ ಕ್ಲೋಸ್ ಅಪ್ ನಲ್ಲಿ ತೆಗೆದುಕೊಂಡ ಸೆಲ್ಫಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ.

ಸೆಲ್ಫಿ ನೋಡಿದ ಟ್ರೋಲಿಗರು ‘ಓಲ್ಡ್ ಈಸ್ ಗೋಲ್ಡ್,  ‘ನಿಮಗೆ ವಯಸ್ಸಾಗಿರುವುದು ಈ ಸೆಲ್ಫಿಯಿಂದ ತಿಳಿಯುತ್ತದೆ’, ‘ನಿಮಗೆ ವಯಸ್ಸಾಗುತ್ತಿದೆ’, ಎಂಬ ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಮುಂದೆ ಹೋಗಿ ‘ಆಂಟಿ’ ಎಂದು ಕರೆದಿದ್ದಾರೆ.

ಅಷ್ಟಕ್ಕೂ ಇಷ್ಟೆಲ್ಲಾ ವೈರಲ್ ಆಗುತ್ತಿರುವ ಸೆಲ್ಫಿಯನ್ನು ಪೋಸ್ಟ್ ಮಾಡಿದವರು ಕರೀನಾ ಮ್ಯಾನೇಜರ್ ಪೂನಂ ದಮಾನಿಯಾ. ಆದರೆ ಈ ಫೋಟೋ ಈಗ ಅಭಿಮಾನಿಗಳನ್ನು ಇಂಪ್ರೆಸ್ ಮಾಡದೆ, ಟ್ರೋಲ್ ಗೆ ಗುರಿಯಾಗುವಂತೆ ಮಾಡಿದೆ.

ತಮ್ಮ ದೇಹಕಾರದ ಕಾರಣದಿಂದಲೇ ಕರೀನಾ ಟ್ರೋಲ್ ಆಗುತ್ತಿರುವುದು ಇದೇ ಮೊದಲೇನಲ್ಲ. ಕಳೆದ ವರ್ಷ ಮಾರ್ಚ್ ನಲ್ಲಿ ಸಿಂಗಾಪುರ್ ನಲ್ಲಿ ನಡೆದ ಫ್ಯಾಷನ್ ಷೋ ಒಂದರಲ್ಲಿ ಝೀರೋ ಸೈಜ್ ನಿಂದಾಗಿ ಟ್ರೋಲ್ ಗೆ ಒಳಗಾಗಿದ್ದರು.

ಕರೀನಾ ಮಾತ್ರವಲ್ಲ, ದೇಹದ ಆಕಾರವನ್ನು ಝೀರೋ ಸೈಜ್ ಗೆ ಬದಾಲಯಿಸಿಕೊಂಡು ಟ್ರೋಲ್ ಆದವರ ಸಾಲಿನಲ್ಲಿ ದೀಪಿಕಾ ಪಡುಕೋಣೆ, ಸೋನಂ ಕಪೂರ್ ಕೂಡ ಇದ್ದಾರೆ.

 

View this post on Instagram

 

Sunkissed in Tuscany 😍😍😍 missing you Bebo 💕💕

A post shared by Poonam Damania (@poonamdamania) on

ಜಿಮ್ ಸೇರಿದ ಮಹೇಶ್ ಬಾಬು ಅತ್ತೆ!!

 

#balkaninews # kareenakapoor #troll #kareenakapoorinstagram #kareenakapoortwitter #internet #photoviral

Tags