ಸುದ್ದಿಗಳು

ಮಾಲ್ಡೀವ್ಸ್ ನಲ್ಲಿ ಬೆಬೋ!!

ಸೈಫ್ ಜೊತೆ ಕರೀನಾ ಬಿಕಿನಿ ತೊಟ್ಟು ಫೋಟೋಕ್ಕೆ ಫೋಸ್..

ಕರೀನಾ ಕಪೂರ್ ಪತಿ ಸೈಫ್ ಅಲಿ ಖಾನ್, ಮಗ ತೈಮೂರ್ ಅಲಿ ಖಾನ್ ಹಾಗೂ ಸೋಹಾ, ಖುನಾಲ್ ಹಾಗೂ ಅವರ ಮಗಳ ಜೊತೆ ಸಂತಸದಿಂದ ದಿನ ಕಳೆಯುತ್ತಿದ್ದಾರೆ..

ಮುಂಬೈ,ಸೆ.03: ಬಾಲಿವುಡ್ ಬೇಬೋ ಕರೀನಾ ಕಪೂರ್ ಖಾನ್ ಈಗ ಕೊಂಚ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ ಹೌದು ಕರೀನಾ ಸದ್ಯ ಮಾಲ್ಡೀವ್ಸ್ ನಲ್ಲಿ ತನ್ನ ಕುಟುಂಬದ ಜೊತೆ ರಜಾದ ಮೋಜಿನಲ್ಲಿದ್ದಾಳೆ. ಕರೀನಾ ಕಪೂರ್ ಪತಿ ಸೈಫ್ ಅಲಿ ಖಾನ್, ಮಗ ತೈಮೂರ್ ಅಲಿ ಖಾನ್ ಹಾಗೂ ಸೋಹಾ, ಖುನಾಲ್ ಹಾಗೂ ಅವರ ಮಗಳ ಜೊತೆ ಸಂತಸದಿಂದ ದಿನ ಕಳೆಯುತ್ತಿದ್ದಾರೆ..

ವಾಲ್ ಆಫ್ ಫೇಮ್’

ಪ್ರವಾಸ ಹೋದರೆ ಮಾತ್ರ ಸಾಕೇ? ಅಲ್ಲಿರುವ ಕೆಲವು ಸುಂದರ ದೃಶ್ಯಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿದರೆ ಇನ್ನಷ್ಟು ಚೆಂದ.. ಹಾಗಾಗಿ ಕೆಲ ಫೋಟೋಗಳನ್ನು ಸೋಹಾ ಅಲಿ ಖಾನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. ಸೋಹಾ, ಬಾಲಿವುಡ್ ನ ಸೂಪರ್ ಜೋಡಿಗಳಲ್ಲಿ ಒಂದಾದ ಸೈಫ್-ಕರೀನಾರನ್ನು ಕ್ಯಾಮರಾದಲ್ಲಿ ಸೆರೆ ಹಿಡಿದು `ವಾಲ್ ಆಫ್ ಫೇಮ್’ ಎಂದು ಶೀರ್ಷಿಕೆ ನೀಡಿದ್ದಾಳೆ.

ಸೈಫ್ ಜೊತೆ ಕರೀನಾ ಬಿಕಿನಿ ತೊಟ್ಟು ಫೋಟೋಕ್ಕೆ ಫೋಸ್ ನೀಡಿದ್ದಾಳೆ. ಈಜು ಕೊಳದಲ್ಲಿ ಪಿಂಕ್ ಬಿಕಿನಿ ತೊಟ್ಟ ಈ ಫೋಟೋಕ್ಕೆ ಅಪಾರ ಮೆಚ್ಚುಗೆ ಗಳಿಸಿದೆ. ಇನ್ನು ಕರೀನಾ ಒಂದು ಮಗುವಾದ ಮೇಲೂ ತನ್ನ ಫಿಟ್ನೆಸ್ ನನ್ನು ಕಾಪಾಡಿಕೊಂಡು ಬಂದಿದ್ದಾಳೆ…

 

Tags