ಸುದ್ದಿಗಳು

ಮತ್ತೆ ತಾಯಿಯಾಗುತ್ತಿದ್ದಾಳೆ ಬೆಬೋ!!

ಇನ್ನೂ ಎರಡು ವರ್ಷ ಬೇಕಂತೆ!!

ಮುಂಬೈ,ಸೆ.12: ಬಾಲಿವುಡ್ ನ ಮುದ್ದಾದ ಜೋಡಿಗಳಲ್ಲಿ ಕರೀನಾ-ಸೈಫ್ ದಂಪತಿ ಕೂಡ ಒಬ್ಬರು. ಸದ್ಯ ತಾಯಿಯಾದ ಬಳಿಕ ಕರೀನಾ ‘ವೀರೆ ದಿ ವೆಡ್ಡಿಂಗ್’ ಸಿನಿಮಾದಲ್ಲಿ ನಟಿಸುವ ಮೂಲಕ ಬಾಲಿವುಡ್‍ನಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಕರೀನಾ-ಸೈಫ್ ಗೆ ಈಗಾಗಲೇ ಮುದ್ದಾದ ಗಂಡು ಮಗುವೊಂದಿದೆ. ತೈಮೂರ್ ದೊಡ್ಡವನಾಗುತ್ತಿದ್ದಂತೆ ಕರೀನಾ ಇನ್ನೊಂದು ಮಗುವಿನ ಆಲೋಚಿಸುತ್ತಿದ್ದಾಳೆ. ಈ ವಿಷಯವನ್ನು ಖುದ್ದು ಕರೀನಾ ಕಪೂರ್ ಖಾನ್ ಹೇಳಿದ್ದಾಳೆ.

ಮತ್ತೆ ತಾಯಿಯಾಗುವೆ

ಕರೀನಾ ಇತ್ತೀಚಿಗೆ ಸ್ನೇಹಿತೆ ಅಮೃತಾ ಅರೋರಾ ಜೊತೆ ಕೋಮಲ್ ನಹಾತಾ ಶೋ ‘ಸ್ಟೇರಿ ನೈಟ್ಸ್’ 2.ಓ! ಕಾರ್ಯಕ್ರಮಕ್ಕೆ ಬಂದಿದ್ದಳು. ಈ ವೇಳೆ ನಾನು ಹಾಗೂ ಸೈಫ್ ಎರಡನೇ ಮಗುವಿನ ಪ್ಲಾನ್ ಮಾಡ್ತಿದ್ದೇವೆ. ಆದರೆ ಎರಡು ವರ್ಷಗಳ ನಂತರ ಎಂದು ಕರೀನಾ ಹೇಳಿದ್ದಾಳೆ. ಡಿಸೆಂಬರ್ 20,2016 ರಂದು ತೈಮೂರ್ ಜನಿಸಿದ್ದಾನೆ. ತೈಮೂರ್‌ ಅಲಿ ಖಾನ್‌ ಆಗಮನದ ಮೂಲಕ ಸೈಫ್ ಮೂರನೇ ಬಾರಿಗೆ ಅಪ್ಪನಾಗಿದ್ದಾರೆ.. ತೈಮೂರ್ ಎಲ್ಲಿ ಹೋದರೂ ಸುದ್ದಿಯಾಗುತ್ತಾನೆ. ತೈಮೂರ್ ನಂತರ ಜೀವನದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಸಿನಿಮಾಕ್ಕೆ ಹೆಚ್ಚು ಸಮಯ ಸಿಗುತ್ತಿಲ್ಲ. ವರ್ಷಕ್ಕೆ ಒಂದು ಚಿತ್ರ ಮಾಡುತ್ತೇನೆ ಎಮದು ಕರೀನಾ ಈ ಹಿಂದೆ ಹೇಳಿದ್ದಳು..

 

Tags