ಸುದ್ದಿಗಳು

ಪತ್ನಿ ಹಾಗೂ ಮಗನ ವಿರುದ್ಧ ದೂರು ನೀಡಿದ ಸೈಫ್ ಅಲಿಖಾನ್!!

ನಾನು ತೈಮೂರ್ ಗೆ ಒಂದು ಮುತ್ತು ನೀಡು ಎಂದು ಕೇಳಿದರೆ, ಆತ ನನ್ನ ಕೈಗೆ ಮತ್ತು ನೀಡುತ್ತಾನೆ.

ಮುಂಬೈ,ಜು.28: ಪತ್ನಿ ಕರೀನಾ ಕಪೂರ್ ಖಾನ್ ಹಾಗೂ ಮಗ ತೈಮೂರ್ ಸದಾ ಸುದ್ದಿಯಲ್ಲಿರುವ ಸೆಲೆಬ್ರೆಟಿಗಳು. ತೈಮೂರ್ ಎಲ್ಲೇ ಹೋದರೂ ಸಾಕು ಮಿಡಿಯಾದ ಕಣ್ಣು ಅವನ ಮೇಲಿರುತ್ತೆ. ಅಷ್ಟೇ ಅಲ್ಲದೆ ಕರೀನಾ ಕೂಡ ಏನು ಕಮ್ಮಿಯಿಲ್ಲ. ಈಗ ಕರೀನಾ ಪತಿ ಸೈಫ್ ಇವರಿಬ್ಬರ ವಿರುದ್ಧ ದೂರು ನೀಡಿದ್ದಾರೆ. ಹೌದು ನಂಬಲೇಬೇಕಾದ ವಿಷಯ. ನನಗೆ ನನ್ನ ಪತ್ನಿ ಹಾಗೂ ಮಗ ಮುತ್ತು ನೀಡುತ್ತಿಲ್ಲ ಎಂದು ಅಭಿಮಾನಿಗಳಿಗೆ ಬಾಲಿವುಡ್ ನಟ ಸೈಫ್ ಅಲಿ ಖಾನ್ ದೂರು ನೀಡಿದ್ದಾರೆ.

ಮುತ್ತು ನೀಡುತ್ತಿಲ್ಲ

ಕಾರ್ಯಕ್ರಮವೊಂದರಲ್ಲಿ ಸೈಫ್ ಅಲಿ ಖಾನ್ ಈ ರೀತಿ ಹೇಳಿದ್ದಾರೆ. ನನ್ನ ಪತ್ನಿ ಇನ್ನುಂದೆ ನನಗೆ ಮುತ್ತು ನೀಡುವುದಿಲ್ಲ ಎಂದು ಹೇಳಿದ್ದಾರೆ. ಇದನ್ನು ಕೇಳಿ ಅಲ್ಲಿದ್ದ ಅಭಿಮಾನಿಗಳು ಒಂದು ಕ್ಷಣ ಶಾಕ್ ಆಗಿದ್ದಾರೆ. ಇವರಿಬ್ಬರ ಮಧ್ಯೆ ಏನಾಯಿತಪ್ಪಾ ಎಂದು ಹುಬ್ಬೇರಿಸಿದ್ದಾರೆ

ನಾಟಕವಾಡುವ ತೈಮೂರ್

ನಾನು ತೈಮೂರ್ ಗೆ ಒಂದು ಮುತ್ತು ನೀಡು ಎಂದು ಕೇಳಿದರೆ, ಆತ ನನ್ನ ಕೈಗೆ ಮತ್ತು ನೀಡುತ್ತಾನೆ. ಕೆನ್ನೆಗೆ ನೀಡು ಎಂದಾಗ ಆತ ಕೆನ್ನೆಗೆ ಮುತ್ತು ನೀಡುವ ರೀತಿ ನಾಟಕವಾಡುತ್ತಾನೆ. ಅಲ್ಲದೇ ಕರೀನಾ ಕೂಡ ಇದೇ ರೀತಿ ಮಾಡುತ್ತಾಳೆ ಎಂದು ಸೈಫ್ ಅಲಿ ಖಾನ್ ತಮ್ಮ ಅಭಿಮಾನಿಗಳಲ್ಲಿ ಹೇಳಿದ್ದಾರೆ.

ಮುತ್ತು ಯಾಕೆ ಕೊಡುತ್ತಿಲ್ಲ ಎನ್ನುವುದನ್ನು ಹೇಳಿದ ಅವರು, ನನ್ನ ಮುಂದಿನ ಚಿತ್ರಕ್ಕೆ ಗಡ್ಡ ಬಿಟ್ಟಿದ್ದೇನೆ. ಈ ಕಾರಣಕ್ಕೆ ಪತ್ನಿ ಮತ್ತು ಮಗ ಮುತ್ತು ನೀಡುತ್ತಿಲ್ಲ ಎಂದು ತಿಳಿಸಿದ್ದಾರೆ. ಗಡ್ಡ ಬಿಡುವುದರ ಜೊತೆಗೆ ಕೂದಲಿಗೆ ಸೈಫ್ ಡ್ರೆಡ್ ಲಾಕ್ ಕೂಡ ಮಾಡಿಸಿದ್ದಾರೆ.

ಮುಂದಿನ ಚಿತ್ರದಲ್ಲಿ ನಾನು ನಾಗಾ ಸಾಧು ಹಂಟರ್ ಪಾತ್ರದಲ್ಲಿ ಅಭಿನಯಿಸಲಿದ್ದೇನೆ. ಹಾಗಾಗಿ ನನಗೆ ಉದ್ದ ಗಡ್ಡ ಬೇಕಾಗಿದೆ ಎಂದು ಸೈಫ್ ಹೇಳಿದ್ದಾರೆ.

 

Tags

Related Articles

Leave a Reply

Your email address will not be published. Required fields are marked *