ಸುದ್ದಿಗಳು

ವಿಭಿನ್ನ ಪಾತ್ರದಲ್ಲಿ ದುನಿಯಾ ರಶ್ಮಿ!!

ದುರ್ಗಾದೇವಿ ಕೈಯಲ್ಲಿರುವ ಆಯುಧಕ್ಕೆ "ಕಾರ್ನಿ'

ಬೆಂಗಳೂರು,ಸೆ.09: ‘ದುನಿಯಾ’ ಚಿತ್ರ ಯಾರಿಗೆ ತಾನೆ ನೆನಪಿಲ್ಲ ಹೇಳಿ? ಚಂದನವನದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದ ಈ ಸಿನಿಮಾ ಅಷ್ಟು ಬೇಗನೇ ಮರೆಯಲು ಸಾಧ್ಯಲಿಲ್ಲ.  ವಿಜಿ ಹಾಗೂ ರಶ್ಮಿಯ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಮನೋಜ್ಞ ನಟನೆಯಿಂದ ಫೇಮಸ್ ಆಗಿದ್ದ ನಟಿ ರಶ್ಮಿ,ಈಗ ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ದುನಿಯಾ’ ರಶ್ಮಿ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟು ಬರೋಬ್ಬರಿ ಒಂದು ದಶಕ ಕಳೆದಿದೆ. ಈ ಹತ್ತು ವರ್ಷಗಳಲ್ಲಿ ರಶ್ಮಿ ಗೆಲುವಿಗಿಂತ ಸೋಲು ಕಂಡಿದ್ದೇ ಹೆಚ್ಚು. ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಲೇ ಬಂದ ರಶ್ಮಿ, ಆರಂಭದ ಬೆರಳೆಣಿಕೆ ವರ್ಷಗಳಲ್ಲಂತೂ ಸ್ವಲ್ಪ ಬಿಜಿ ಇದ್ದದ್ದು ನಿಜ. ಆದರೆ, ಅದೇನಾಯ್ತೋ ಏನೋ, ಇದ್ದಕ್ಕಿದ್ದಂತೆಯೇ ರಶ್ಮಿ ಗಾಂಧಿನಗರದಿಂದ ಸ್ವಲ್ಪ ದೂರ ಉಳಿದರು. ಹಾಗಂತ, ಚಿತ್ರರಂಗ ಬಿಡಲಿಲ್ಲ.

ಕಾರ್ನಿ ಎಂದರೇನು?

ಹೌದು, ಸ್ಯಾಂಡಲ್​ವುಡ್​ನಲ್ಲಿ ತಯಾರಾಗುತ್ತಿರುವ ‘ಕಾರ್ನಿ’ ಚಿತ್ರದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. 1982ರಲ್ಲಿ ಬಿಡುಗಡೆಯಾಗಿದ್ದ ‘ಇದು ಸಾಧ್ಯ’ ಎನ್ನುವ ಚಿತ್ರ ಕಾರ್ನಿ ಸಿನಿಮಾಗೆ ಸ್ಫೂರ್ತಿಯಂತೆ. “ಇದೊಂದು ದೇವಿಯ ಪವರ್‌ ಫುಲ್ ಆಯುಧದ ಹೆಸರು. ದುರ್ಗಾದೇವಿ ಕೈಯಲ್ಲಿರುವ ಆಯುಧಕ್ಕೆ “ಕಾರ್ನಿ’ ಎನ್ನಲಾಗುತ್ತದೆ. ಅದು ಬಾಣಕ್ಕಿಂತಲೂ ಹರಿತವಾದ ಆಯುಧ. ಇಲ್ಲಿ ರಶ್ಮಿ ಆ “ಕಾರ್ನಿ’ ಮೂಲಕ ಯಾರನ್ನು ಸಂಹರಿಸುತ್ತಾರೆ ಎಂಬುದು ಸಸ್ಪನ್ಸ್‌. ಇದು ಸಸ್ಪೆನ್ಸ್‌ ಥ್ರಿಲ್ಲರ್‌ ಕಥೆ. ಇದರೊಂದಿಗೆ ವಿಶೇಷ ತಾಂತ್ರಿಕತೆ ಸ್ಪರ್ಶ ಚಿತ್ರಕ್ಕಿದೆ. ಚಿಕ್ಕಮಗಳೂರು ಸುತ್ತಮುತ್ತ ಸಾಗುವ ಈ ಕಥೆ, ಬಹುತೇಕ ರಾತ್ರಿಯಲ್ಲೇ ನಡೆಯಲಿದೆ ಎಂಬುದು ನಿರ್ದೇಶಕರ ಮಾತು.

Image result for duniya rashmi karni movie
ಸಸ್ಫೆನ್ಸ್​ ಹಾಗೂ ಥ್ರಿಲ್ಲರ್​ ಕಥೆಯಿರುವ ಈ ಚಿತ್ರ ಕತ್ತಲೆಯಲ್ಲಿಯೇ ನಡೆಯುತ್ತಿದಯಂತೆ. ರೊಮ್ಯಾನ್ಸ್ ಹಾಗೂ ಡೈಲಾಗ್ ಈ ಚಿತ್ರದಲ್ಲಿ ಇಲ್ಲವೇ ಇಲ್ಲ.

ಈ ಚಿತ್ರದಲ್ಲಿ ರಶ್ಮಿ ಮೆಕೋವರ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಅಂದ್ರೆ ಡೈಲಾಗ್​ ಇಲ್ಲದ ಬರೀ ಎಕ್ಸ್​​ಪ್ರೆಷನ್​. ಇನ್ನು ಕಾರ್ನಿ ಚಿತ್ರದಲ್ಲಿ ನಿರಂತ್ ಎಂಬುವರು ನೆಗೆಟಿವ್ ಶೇಡ್​ನಲ್ಲಿ ಕಾಣಿಸಿಕೊಂಡಿದ್ದಾರೆ.
ಲೈಫ್ ಸೂಪರ್ ಸಿನಿಮಾ ನಿರ್ದೇಶನ ಮಾಡಿದ್ದ ವಿನೋದ್, ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ‌ಗೋವಿಂದರಾಜ್ ಈ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ..ಇದೇ ವಾರ ಕಾರ್ನಿ ಸಿನಿಮಾ ರಿಲೀಸ್  ಆಗಲು ರೆಡಿಯಾಗಿದ್ದಾರೆ..

Tags