ಸುದ್ದಿಗಳು

ತಮಿಳುನಾಡಿನ ‘ತಲೈವರ್’ ಕರುಣಾನಿಧಿ!

ನಂತರ, ರಾಜಕೀಯ ಜೀವನವನ್ನು ಮುಂದುವರೆಸಿದ ಇವರು, ದ್ರಾವಿಡ  ಮುನ್ನೇತ್ರ ಕಾಜಿಗಂ ಪಕ್ಷದ ನೇತಾರರಾಗಿ ತಮಿಳು ನಾಡಿನ ಮೂರನೇ ಮುಖ್ಯ ಮಂತ್ರಿಯಗಿ ಸಾರ್ವಜನಿಕ ವಲಯಕ್ಕೆ ಅಪಾರವಾದ ಸೇವೆಯನ್ನು ಸಲ್ಲಿಸಿದ್ದಾರೆ

ತಮಿಳುನಾಡು,ಜು.30:

ನಾಗಪಟ್ಟಣಂ ಜಿಲ್ಲೆಯ ತಿರುಕ್ಕುವಲೈ ಗ್ರಾಮದಲ್ಲಿ ಜೂನ್ 3, 1924 ರಲ್ಲಿ  ಜನಿಸಿದ ಕರುಣಾ ನಿಧಿ, ತಮ್ಮ ಶಾಲಾ ದಿನಗಳಲ್ಲಿ ನಾಟಕ, ಕವಿತೆ ಮತ್ತು ಸಾಹಿತ್ಯದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು. ಸ್ಪೀಕರ್ ಅಳಗಿರಿಸ್ವಾಮಿಯಿಂದ ಪ್ರೇರಿತರಾದ ಕರುಣಾನಿಧಿ, ಜಸ್ಟೀಸ್ ಪಾರ್ಟಿಯ ಸಿದ್ದಾಂತವನ್ನು ಪರಿಗಣಿಸಿ, ತನ್ನ 14 ನೇ ವಯಸ್ಸಿನಲ್ಲಿ ಸಾಮಾಜಿಕ ಚಳವಳಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿರುತ್ತಾರೆ.

 ವೃತ್ತಿಜೀವನ

ತಮಿಳು ಚಲನಚಿತ್ರೋದ್ಯಮದಲ್ಲಿ ಕರುಣಾನಿಧಿ ಅವರು ತಮ್ಮ ವೃತ್ತಿಜೀವನವನ್ನು ಚಿತ್ರಕಥೆಗಾರರಾಗಿ ಪ್ರಾರಂಭಿಸಿದ್ದರು. ಅವರ ಬುದ್ಧಿ ಮತ್ತು ವಾಗ್ವೈಜ್ಞಾನಿಕ ಕೌಶಲ್ಯದ ಮೂಲಕ ಅವರು ಶೀಘ್ರವಾಗಿ ಜನಪ್ರಿಯ ರಾಜಕಾರಣಿಯಾಗಿ ಬೆಳೆದರು. ದ್ರಾವಿಡ ಚಳವಳಿಯ ಸಮಾಜವಾದಿ ಮತ್ತು ತಾರ್ಕಿಕವಾದ ಆದರ್ಶಗಳನ್ನು ಪ್ರಸಾರ ಮಾಡಿದ ಐತಿಹಾಸಿಕ ಮತ್ತು ಸಾಮಾಜಿಕ (ಸುಧಾರಣಾವಾದಿ) ಕಥೆಗಳನ್ನು ಬರೆಯುವಲ್ಲಿ ಅವರು ಪ್ರಸಿದ್ಧರಾಗಿದ್ದರು.

ಚಿತ್ರರಂಗಕ್ಕೆ ಕೊಟ್ಟ ಕೊಡುಗೆ ಏನು?

ತಮಿಳು ಸಿನೆಮಾರಂಗದಲ್ಲಿ, ಮಹತ್ತರವಾದ ಸ್ಥಾನವನ್ನು ಗುರುತಿಸಿಕೊಂಡಿದ್ದಾರೆ. ಹಿರಿಯ ನಟ ಶಿವಾಜಿ ಗಣೇಶನ್ ಮತ್ತು ಎಸ್. ರಾಜೇಂದ್ರನ್ ಎಂಬ ಇಬ್ಬರು ಪ್ರಮುಖ ನಟರನ್ನು ಪರಿಚಯಿಸಿದ್ದು ಇವರೇ. ಕರುಣಾನಿಧಿ ತಮಿಳು ಸಾಹಿತ್ಯಕ್ಕೆ ನೀಡಿದ ಕೊಡುಗೆಗಳು ಅನೇಕ . ಕವಿತೆಗಳು, ಪತ್ರಗಳು, ಚಿತ್ರಕಥೆಗಳು, ಕಾದಂಬರಿಗಳು, ಜೀವನ ಚರಿತ್ರೆಗಳು, ಐತಿಹಾಸಿಕ ಕಾದಂಬರಿಗಳು, ವೇದಿಕೆಯ ನಾಟಕಗಳು, ಸಂಭಾಷಣೆಗಳು ಮತ್ತು ಚಲನಚಿತ್ರ ಗೀತೆಗಳು ಅವರ ಕೊಡುಗೆಗಳು ಅಪಾರವಾಗಿ ಗಳಿಸಿದ್ದಾರೆ. ಇವರು ಬರೆದ ಪುಸ್ತಕಗಳಲ್ಲಿ ಒಂದಾದ ಸಂಘ ತಮಿಳ್, ತಿರುಕ್ಕುರಳ್ ಉರಯ್ ಹಾಗು 100 ಕ್ಕಿಂತ ಹೆಚ್ಚು ಕವಿತೆಗಳನ್ನು ಬರೆದಿದ್ದಾರೆ.

ರಾಜಕೀಯ ಜೀವನ!

ನಂತರ, ರಾಜಕೀಯ ಜೀವನವನ್ನು ಮುಂದುವರೆಸಿದ ಇವರು, ದ್ರಾವಿಡ  ಮುನ್ನೇತ್ರ ಕಾಳಗಂ ಪಕ್ಷದ ನೇತಾರರಾಗಿ ತಮಿಳು ನಾಡಿನ ಮೂರನೇ ಮುಖ್ಯ ಮಂತ್ರಿಯಗಿ ಜನತೆಗೆ, ಸಾರ್ವಜನಿಕ ವಲಯಕ್ಕೆ ಅಪಾರವಾದ ಸೇವೆಯನ್ನು ಸಲ್ಲಿಸಿದ್ದಾರೆ. ಇವರು ರಾಜಕೀಯ ಮುತ್ಸದ್ದಿಯಾಗಿ ನಾಡಿನಾದ್ಯಂತ ಹೆಸರು ಮಾಡಿದ್ದು ಕ್ರಾಂತಿಯ ಹರಿಕಾರ ಕರುಣಾ!

ಆರೋಗ್ಯದಲ್ಲಿ ಏರುಪೇರು

ಅನಾರೋಗ್ಯ ನಿಮಿತ್ತ ಚೆನ್ನೈಯ ಕಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಡಿ.ಎಂ.ಕೆ. ಮುಖ್ಯಸ್ಥ ಎಂ. ಕರುಣಾನಿಧಿ ಅವರ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ನೀಡಿ ಎಂದು ಅಭಿಮಾನಿಗಳು ಹಠ ಹಿಡಿದಿದ್ದಾರೆ.

ಕಳೆದ ಮೂರು ದಿನಗಳಿಂದ ನಾವು ಇಲ್ಲಿ ಅನ್ನ-ನೀರು ಬಿಟ್ಟು ಕಾಯುತ್ತಿದ್ದೇವೆ. ನಮಗೇನೂ ಬೇಡ, ತಲೈವರ್ ಬೇಕು. ಅವರ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ನೀವು ನೀಡುತ್ತಿಲ್ಲ ಯಾಕೆ? ನಮಗೆ ಅವರು ಬೇಕೆಂದು ಎಎನ್ಐ ಸುದ್ಧಿ ಸಂಸ್ಥೆಯೊಂದಿಗೆ ಮಾತನಾಡಿದ ಅಭಿಮಾನಿಯೊಬ್ಬರು ಹೇಳಿಕೊಂಡಿದ್ದಾರೆ.

ಮೂತ್ರನಾಳ ಸೋಂಕು ಮತ್ತು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿರುವ ಕರುಣಾ ನಿಧಿ ಅವರಿಗೆ ಗೋಪಲಪುರಂನಲ್ಲಿರುವ ಅವರ ನಿವಾಸದಲ್ಲೇ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಶುಕ್ರವಾರ ತಡ ರಾತ್ರಿ ಧೀಡೀರನೆ ರಕ್ತದ ಒತ್ತಡ ಇಳಿಕೆಯಾದ್ದರಿಂದ ಅವರನ್ನು ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಯಿತು. ಈಗ ಅವರ ಆರೋಗ್ಯ ಸುಧಾರಿಸಿದೆ ಎಂದು ಕಾವೇರಿ ಆಸ್ಪತ್ರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ..

Tags