ಸುದ್ದಿಗಳು

ಬಾಲಿವುಡ್ ನ ಈ ಮಂದಿಗಿಲ್ಲ ಮತದಾನದ ಹಕ್ಕು…!!!

ಮುಂಬೈ, ಏ.15:

ಮತದಾನ ಎಲ್ಲರ ಹಕ್ಕು, ಮತದಾನ ಮಾಡಿರೆಂದು ಅನೇಕ ಜಾಗೃತಿಗಳನ್ನು ಚುನಾವಣಾ ಆಯೋಗ ಮಾಡಿದೆ. ಅಷ್ಟೇ ಅಲ್ಲ ಸೆಲಿಬ್ರಿಟಿಗಳು ಅಭಿಮಾನಿಗಳಿಗೆ ಹತ್ತಿರವಾಗಿರುತ್ತಾರೆ ಎನ್ನುವ ಕಾರಣಕ್ಕೆ ಅವರಿಂದ ಈ ಜಾಗೃತಿ ಕಾರ್ಯಕ್ರಮಗಳನ್ನು ಮಾಡಿಸಿದೆ ಚುನಾವಣಾ ಆಯೋಗ. ಆದರೆ ಈ ಜಾಗೃತಿ ಮಾಡಿದ ಅನೇಕ ಮಂದಿ ಭಾರತದಲ್ಲಿ ಮತದಾನ ಮಾಡುವ ಹಕ್ಕನ್ನು ಹೊಂದಿಲ್ಲ ಎನ್ನಲಾಗಿದೆ.

ಕೆನಡಾ ಪಾಸ್‌ ಪೋರ್ಟ್ ಹೊಂದಿದ ನಟ ಅಕ್ಷಯ್..?

ಹೌದು, ಬಾಲಿವುಡ್‌ ನ ಅನೇಕ ದೇಶ ಭಕ್ತಿ ತೋರುವ ಸಿನಿಮಾಗಳು ಹಾಗೂ ಸಿನಿಮಾಗಳಲ್ಲಿ ದೇಶಭಕ್ತನಾಗಿ ಕಾಣಿಸುವ ನಟ ಅಕ್ಷಯ್ ಕುಮಾರ್‌ ಗೆ ಭಾರದಲ್ಲಿ ಮತದಾನ ಮಾಡುವ ಹಕ್ಕಿಲ್ಲವಂತೆ. ಈ ನಟ ಕೆನಡಾದ ಪಾಸ್‌ಪೋರ್ಟ್ ಅನ್ನು ಹೊಂದಿದ್ದಾರೆ ಎನ್ನಲಾಗಿದೆ. ಹಾಗಾಗಿ ಇವರಿಗೆ ಭಾರತದಲ್ಲಿ ಮತದಾನದ ಮಾಡುವ ಮಾಡುವ ಹಕ್ಕಿಲ್ಲ ಎನ್ನಲಾಗುತ್ತಿದೆ. ಇನ್ನೂ ಪಂಜಾಬ್‌ ನ ಅಮೃತಸರದಲ್ಲಿ ಜನಿಸಿದ ಇವರು, ಕೆನಡಾ ಫಾಸ್‌ಪೋರ್ಟ್ ನಿಂದಾಗಿ ಅವಕಾಶ ಕಳೆದುಕೊಂಡಿದ್ದಾರೆ.

ಕತ್ರೀನಾ ಕೂಡ ಇಂಡಿಯಾದವರಲ್ವಾ..?

ಇನ್ನೂ ಕತ್ರೀನಾ ಕೈಫ್ ಕೂಡ ಈ ದೇಶದ ಪ್ರಜೆಯಲ್ಲವಂತೆ. ಕತ್ರೀನಾ ಬ್ರಿಟೀಷ್ ಪ್ರಜೆಯಾಗಿದ್ದಾರೆ ಹಾಗಾಗಿ ಅವರು ಕೂಡ ಭಾರತದಲ್ಲಿ ಮತದಾನದ ಹಕ್ಕು ಇಲ್ಲವೆಂಬುದಾಗಿದೆ ವರದಿಗಳಾಗಿವೆ. ಇನ್ನೂ ಹೀಗೆ ಹಲವಾರು ಬಾಲಿವುಡ್ ಮಂದಿ ಕೂಡ ಮತದಾನದ ಹಕ್ಕು ಪಡೆದಿಲ್ಲೆವೆಂದು ಹೇಳಲಾಗುತ್ತಿದೆ.

‘ಕ್ರಿಸ್ಟಲ್ ಪಾರ್ಕ್’ ಪ್ರೊಡಕ್ಷನ್ ಹೌಸ್ ಬ್ಯಾನರ್ ಅಡಿಯಲ್ಲಿ ಅಜಯ್ ಹೊಸ ಸಿನಿಮಾ!!

#balkaninews #bollywood #hindimovies #katrinakaif #indians #votingpower #akshaykumar

Tags