ಸುದ್ದಿಗಳು

ಬ್ಯಾಕ್ ಲೆಸ್ ಡ್ರೆಸ್ ಫೋಟೋ ಶೇರ್ ಮಾಡಿದ ಕತ್ರಿನಾ: ಅರ್ಜುನ್ ಕಪೂರ್ ಕಮೆಂಟ್ ಹೀಗಿತ್ತು…

ನಟಿ ಕತ್ರಿನಾ ಕೈಫ್ ಸೇರಿದಂತೆ  ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಸೋಮವಾರ ‘ಐಫಾ ರಾಕ್ಸ್’ ರೆಡ್ ಕಾರ್ಪೆಟ್ ನಲ್ಲಿ ಕಾಣಿಸಿಕೊಂಡರು.

ಇದೀಗ ಇವೆಂಟ್ ನಲ್ಲಿ ಕತ್ರಿನಾ ಹೊಳೆಯುವ ಕೆಂಪು ಬಣ್ಣದ ಬ್ಯಾಕ್ ಲೆಸ್ ಡ್ರೆಸ್ ನಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದಾರೆ.

ಅಷ್ಟೇ ಅಲ್ಲ, ಡ್ರೆಸ್ ಗೆ ಪ್ಲಗಿಂಗ್ ನೆಕ್ ಲೈನ್ ಬಂದಿದ್ದು, ಅವರ ಆಕರ್ಷಕ ಮೈ ಮಾಟಕ್ಕೆ ನೆರೆದವರು ಮನಸೋತಿರುವುದಂತು ಸುಳ್ಳಲ್ಲ.

ಅಂದಹಾಗೆ ಈ ಫೋಟೋವನ್ನು ಕತ್ರೀನಾ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ನಟ ಅರ್ಜುನ್ ಕಪೂರ್ ಈ ಫೋಟೋ ನೋಡಿ ‘ಬ್ಯಾಕ್ ಆಫ್’ ಎಂದು ಕಮೆಂಟ್  ಸಹ ಮಾಡಿದ್ದಾರೆ.

ಇನ್ನು ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವ ಅರ್ಜುನ್ ಕಪೂರ್ ಆಗಾಗ ಇಂಡಸ್ಟ್ರಿಯಲ್ಲಿರುವ ಕೆಲ ಸ್ನೇಹಿತರನ್ನು ಹೀಗೆ ಕಾಲೆಳೆಯುವುದು ಸಹಜ.

ಈ ಕಾರ್ಯಕ್ರಮದಲ್ಲಿ ರಾಧಿಕಾ ಮದನ್ ಕ್ಲಾಸಿಕ್ ಕಂಚಿನ ಬಣ್ಣದ ಉಡುಪು ಧರಿಸಿದ್ದರೆ, ರಿಚಾ ಚಡ್ಡಾ ಸ್ಲಿಟ್ ಗೌನ್ ರಾಕುಲ್ ಪ್ರೀತ್ ಸಿಂಗ್ ಬಂಗಾರದ ಬಣ್ಣದ ಪ್ಯಾಂಟ್ ಸೂಟ್ ನಲ್ಲಿ ಕಂಗೊಳಿಸಿದರು.

 

View this post on Instagram

 

💃💃💃 @iifa @wizcraft_india #IIFA20

A post shared by Katrina Kaif (@katrinakaif) on

ಮುಂಬೈ ಏರ್ ಪೋರ್ಟ್ ನಲ್ಲಿ ಮೇಕಪ್ ಇಲ್ಲದೇ ಕಾಣಿಸಿಕೊಂಡ ಕಾಜಲ್!

#balkaninews #katrinakaif #IIFARocks #arjunkapoor #bollywoodnews

Tags