ಸುದ್ದಿಗಳು

ಇಂಗ್ಲೆಂಡ್ ನಲ್ಲಿ ಜಾಲಿ ಮೂಡಿನಲ್ಲಿ ಕತ್ರೀನಾ!!

ಭಾರತ್ ನಲ್ಲಿ ನಾಯಕಿಯಾಗಿ ಕ್ಯಾಟ್!!

ಸಹ-ನಟ ಸಲ್ಮಾನ್ ಖಾನ್ ಅವರೊಂದಿಗೆ ‘ಮಾಲ್ಟಾ’ದಲ್ಲಿ ‘ಭಾರತ್’ ಚಿತ್ರದ ಚಿತ್ರೀಕರಣದ ನಂತರ ಇಂಗ್ಲೆಂಡ್‌ಗೆ ತೆರಳಿದ್ದರು

ಮುಂಬೈ,ಸೆ.01: ಕತ್ರೀನಾ ಕೈಫ್ ಈಗ ‘ಭಾರತ್’ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಪ್ರಿಯಾಂಕಾ ಛೋಪ್ರಾ ಭಾರತ್‌ನಿಂದ ಹೊರನಡೆದ ನಂತರ, ಸಲ್ಮಾನ್‌ ಗೆ ನಾಯಕಿಯಾಗಿ ಕತ್ರೀನಾ ಪ್ರಮುಖ ಪಾತ್ರವನ್ನು ವಹಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಟಬು ಮತ್ತು ದಿಶಾ ಪಟಾನಿ ಸಹ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕತ್ರೀನಾ ವಿಡಿಯೋ

ಆದರೆ ಈಗ ಕತ್ರೀನಾ ವಿಡಿಯೋವೊಂದು ಸಾಮಾಜಿಕ ಜಾಲಾತಾಣದಲ್ಲಿ ಹರಿದಾಡುತ್ತಿದೆ. ಕಾರಿನಲ್ಲಿ ಪ್ರಯಾಣಿಸುತ್ತಿರುವ ವೀಡಿಯೊ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಅವರು ಇಂಗ್ಲೆಂಡ್‌ ನಲ್ಲಿರುವುದು ಕಂಡುಬರುತ್ತದೆ. ಸಹ-ನಟ ಸಲ್ಮಾನ್ ಖಾನ್ ಅವರೊಂದಿಗೆ ‘ಮಾಲ್ಟಾ’ದಲ್ಲಿ ‘ಭಾರತ್’ ಚಿತ್ರದ ಚಿತ್ರೀಕರಣದ ನಂತರ ಇಂಗ್ಲೆಂಡ್‌ಗೆ ತೆರಳಿದ್ದರು. ಕತ್ರೀನಾ ಈಗ ತಮ್ಮ ಸ್ನೇಹಿತರೊಂದಿಗೆ ರೋಡ್ ಟ್ರಿಪ್‌ನಲ್ಲಿದ್ದು ಆ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

“ಮಾಲ್ಟಾ” ಎನ್ನುವ ಶೀರ್ಷಿಕೆ

ಭಾರತ್ ಚಿತ್ರದ ಶೂಟಿಂಗ್ ಸ್ಥಳದಿಂದ ಕಳೆದ ವಾರ ಮಾಲ್ಟಾದಲ್ಲಿ ತಮ್ಮ ಭಾವಚಿತ್ರವನ್ನು ತೆಗೆದು “ಮಾಲ್ಟಾ” ಎನ್ನುವ ಶೀರ್ಷಿಕೆ ಹಾಕಿ ಹಂಚಿಕೊಂಡಿದ್ದಾರೆ. ಆ ಚಿತ್ರದಲ್ಲಿ ಕತ್ರೀನಾ ತಮ್ಮ ಬೌನ್ಸಿ ಕೂದಲು ಮತ್ತು ತಾಜಾ ಮುಖದಿಂದ ತುಂಬಾ ಸುಂದರವಾಗಿ ಕಾಣುತ್ತಿದ್ದಾಳೆ.

ಅಲಿ ಅಬ್ಬಾಸ್ ನಿರ್ದೇಶನದ ಈ ಚಿತ್ರವನ್ನು ಮುಂದಿನ ವರ್ಷ ಜೂನ್ 5 ರಂದು ಬಿಡುಗಡೆಗೊಳಿಸಲು ತಯಾರಿ ನಡೆಸಲಾಗುತ್ತಿದೆ ಎಂದು ಮೂಲಗಳು ಹೇಳುತ್ತಿವೆ.

रोड ट्रिप ????????

A post shared by Katrina Kaif (@katrinakaif) on

Tags