ಸುದ್ದಿಗಳು

‘ಕವಚ’ ಚಿತ್ರದಲ್ಲಿ ಶಿವಣ್ಣನ ಕಥೆ ಹೇಳಲಿರುವ ಅನಂತ್ ನಾಗ್

ಹಿನ್ನೆಲೆ ಧ್ವನಿ ನೀಡಿದ ಅನಂತ್ ನಾಗ್

ಬೆಂಗಳೂರು.ಮಾ.21: ಬರುವ ತಿಂಗಳ ಮೊದಲ ವಾರ ತೆರೆ ಕಾಣಲು ಸಿದ್ದವಾಗಿರುವ ‘ಕವಚ’ ಚಿತ್ರವು ಮತ್ತೊಮ್ಮೆ ಸದ್ದು ಮಾಡುತ್ತಿದೆ. ಈಗಾಗಲೇ ತನ್ನ ಬಿಡುಗಡೆಯ ದಿನವನ್ನು ಮೂರು ಬಾರಿ ಬದಲಿಸಿಕೊಂಡಿರುವ ಈ ಚಿತ್ರದಲ್ಲಿ ಹಿರಿಯ ನಟ ಅನಂತ್ ನಾಗ್ ಹಿನ್ನೆಲೆ ಧ್ವನಿ ನೀಡಿದ್ದಾರೆ.

ಹೌದು, ಈ ಚಿತ್ರಕ್ಕೆ ಅನಂತ್ ನಾಗ್ ಸಾಥ್ ನೀಡಿದ್ದು, ಆಸೆಯಂತೆ ಚಿತ್ರಕ್ಕೆ ಹಿನ್ನೆಲೆ ಧ್ವನಿ ನೀಡಿದ್ದಾರೆ. ಕಥೆಯ ಪ್ರಮುಖ ಅಂಶ ಹಾಗೂ ಕ್ಲೈಮ್ಯಾಕ್ಸ್ ಕುರಿತಾಗಿ ಅವರು ಧ್ವನಿ ನೀಡಿದ್ದು, ಚಿತ್ರದ ಕೆಲ ದೃಶ್ಯಗಳನ್ನು ನೋಡಿ ಮೆಚ್ಚುಗೆ ಸೂಚಿಸಿದ್ದಾರೆ.

ಇನ್ನು ಕಳೆದ ವರ್ಷ ರಿಲೀಸ್ ಆಗಿ ಕಮಾಲ್ ಮಾಡಿದ್ದ ‘ಕೆ.ಜಿ.ಎಫ್’ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದ ಅನಂತ್ ನಾಗ್ ಚಿತ್ರದ ಆರಂಭದಲ್ಲಿ ವಿಶಿಷ್ಟ ಧ್ವನಿಯ ಮೂಲಕ ಯಾರ್ದಪ್ಪಾ ಇದು ವಾಯ್ಸು ಅಂತಾ ಎಲ್ರೂ ಉದ್ಘಾರ ತೆಗೆಯುವ ಹಾಗೆ ಮಾಡಿ ಅಭಿಮಾನಿಗಳ ಮನಗೆದ್ದಿದ್ದರು. ಈಗ ‘ಕವಚ’ ಚಿತ್ರದಲ್ಲಿ ಅವರು ಬ್ಯಾಕ್ ಗ್ರೌಂಡ್ ವಾಯ್ಸ್ ಹೇಳುವ ಮೂಲಕ ಚಿತ್ರದ ಬಗ್ಗೆ ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ.

ಈ ಚಿತ್ರದಲ್ಲಿ ಶಿವಣ್ಣ ಮೊದಲ ಬಾರಿಗೆ ಅಂದನ ಪಾತ್ರದಲ್ಲಿ ನಟಿಸಿದ್ದಾರೆ. ಇದು ಮಲೆಯಾಳಂನ ‘ಒಪ್ಪಂ’ ಚಿತ್ರದ ರಿಮೇಕ್ ಆಗಿದ್ದು, ಉಳಿದಂತೆ ಇಶಾ ಕೊಪ್ಪಿಕರ್, ರವಿಕಾಳೆ, ಕೃತಿಕಾ, ರಾಜೇಶ್ ನಟರಂಗ, ವಸಿಷ್ಠ ಸಿಂಹ, ಬೇಬಿ ಮೀನಾಕ್ಷಿ, ಜಯಪ್ರಕಾಶ್ ಮೊದಲಾದ ಕಲಾವಿದರು ನಟಿಸಿದ್ದಾರೆ.

ಚಿತ್ರಕ್ಕೆ ರಾಹುಲ್ ಶ್ರೀವಾತ್ಸವ್ ಛಾಯಾಗ್ರಹಣ, ಜೊ.ನಿ ಹರ್ಷ ಸಂಕಲನವಿದೆ. ಚಿತ್ರದ ಹಾಡುಗಳಿಗೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಇದೆ. ಕೆ. ಕಲ್ಯಾಣ್, ಡಾ. ವಿ ನಾಗೇಂದ್ರ ಪ್ರಸಾದ್, ಕವಿರಾಜ್ ಚಿತ್ರದ ಹಾಡುಗಳಿಗೆ ಸಾಹಿತ್ಯವನ್ನು ಒದಗಿಸಿದ್ದಾರೆ.

‘777 ಚಾರ್ಲಿ’ ಬಳಗಕ್ಕೆ ಇಬ್ಬರು ಮುದ್ದಾದ ಮಕ್ಕಳು ಎಂಟ್ರಿ

#kavacha, #backbroundvoice, #ananthanag, #balkaninews #shivarajkumar, #ishakoppikar, #kannadasuddigalu, #filmnews

Tags