ಸುದ್ದಿಗಳು

“ಕವಚ” ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ….!

ಡಿ. 7 ರಂದು ತೆರೆಗೆ ಬರುತ್ತಿರುವ ಸಿನಿಮಾ

ಬೆಂಗಳೂರು,ನ,23: ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಸಿನಿಮಾಗಳು ಅಂದ್ರೆನೇ ಹಾಗೇ. ಅವರು ಒಂದೊಂದು ಸಿನಿಮಾದಲ್ಲಿ ವಿಭಿನ್ನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಜೊತೆಗೆ ಅಭಿಮಾನಿಗಳನ್ನು ತನ್ನತ್ತ ಸೆಳೆದುಕೊಂಡಿದ್ದಾರೆ.

ವಿಭಿನ್ನ ಪಾತ್ರದಲ್ಲಿ ಶಿವಣ್ಣ …!

ಸದ್ಯ ‘ಟಗರು’ ಹಾಗೂ ‘ಜೋಗಿ’ ಪ್ರೇಮ್ ನಿರ್ದೇಶನದ ‘ದಿ ವಿಲನ್’ ಸಿನಿಮಾ ಯಶಸ್ಸಿನಲ್ಲಿ ತೇಲುತ್ತಿರುವ ಶಿವಣ್ಣ ಮತ್ತೊಂದು ವಿಭಿನ್ನ ಪಾತ್ರದಲ್ಲಿ ಮಿಂಚುವುದಕ್ಕೆ ಹೊರಟಿದ್ದಾರೆ. ಹೌದು, ‘ಕವಚ’ ಎನ್ನುವ ವಿಭಿನ್ನ ಟೈಟಲ್ ಹೊಂದಿರೋ ಈ ಚಿತ್ರದಲ್ಲಿ ಶಿವಣ್ಣ ವಿಶೇಷ ಪಾತ್ರದಲ್ಲಿ ಮಿಂಚಲಿದ್ದಾರೆ.

ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ …!

ಈ ಚಿತ್ರ ಮಲಯಾಳಂನಲ್ಲಿ ಮೋಹನ್ ಲಾಲ್ ನಟನೆಯ ಪ್ರಿಯದರ್ಶನ್ ನಿರ್ದೇಶನದ ಕ್ರೈಮ್ ಆಧಾರಿತ ‘ಒಪ್ಪಮ್’ ಚಿತ್ರದಿಂದ ಸ್ಪೂರ್ತಿ ಪಡೆದು ‘ಕವಚ‘ ಚಿತ್ರವನ್ನು ಜಿವಿಆರ್ ವಾಸು ನಿರ್ದೇಶಿಸುತ್ತಿದ್ದಾರೆ. ಇಲ್ಲಿ ಶಿವರಾಜ್ ಕುಮಾರ್ ದೃಷ್ಟಿದೋಷವುಳ್ಳ ವ್ಯಕ್ತಿಯಾಗಿ ನಟಿಸುತ್ತಿದ್ದಾರೆ.

ಶಿವರಾಜ್ ಕುಮಾರ್ ಅವರ ಜೊತೆ ಇಶಾ ಕೊಪ್ಪಿಕರ್, ಬಾಲ ಕಲಾವಿದೆ ಮೀನಾಕ್ಷಿ, ತಬಲಾ ನಾಣಿ. ಕೃತಿಕಾ ಜಯರಾಮ್,ವಶಿಷ್ಟ ಸಿಂಹ, ರವಿ ಕಾಳೆ ಮೊದಲಾದವರು ನಟಿಸುತ್ತಿದ್ದಾರೆ.

ಹಯಗ್ರೀವ ಮೂವಿ ಅದಿಷ್ಟಾನ, ಎಂವಿ ಸತ್ಯನಾರಾಯಣ ಮತ್ತು ಎ. ಸಂಪತ್ ಒಟ್ಟಾಗಿ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತವಿದೆ. ಸದ್ಯ ಈ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ.

Tags