ಸುದ್ದಿಗಳು

‘ಕವಚ’ದಲ್ಲೀಗ‘ ಹೊಸ ಬೆಳಕು ಮೂಡುತ್ತಿದೆ…

‘ಹೊಸ ಬೆಳಕು’ ಸಾಂಗ್ ರಿಮಿಕ್ಸ್ ವರ್ಷನ್ ಬಿಡುಗಡೆ

ಬೆಂಗಳೂರು.ಮಾ.23: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಂದನಾಗಿ ನಟಿಸಿರುವ ‘ಕವಚ’ ಚಿತ್ರವು ಬರುವ ತಿಂಗಳ ಮೊದಲ ವಾರ ಬಿಡುಗಡೆಯಾಗುತ್ತಿದೆ. ಈಗಾಗಲೇ ಟೀಸರ್, ಟ್ರೈಲರ್ ಹಾಗೂ ಹಾಡುಗಳ ಮೂಲಕ ಗಮನ ಸೆಳೆದಿದ್ದ ಈ ಚಿತ್ರದ ಮತ್ತೊಂದು ಯುಟ್ಯೂಬ್ ನಲ್ಲಿ ಸಾಂಗ್ ರಿಲೀಸ್ ಆಗಿದೆ.

ಹೌದು, ಈ ಚಿತ್ರದಲ್ಲಿ ‘ಹೊಸ ಬೆಳಕು’ ಚಿತ್ರದ ಟೈಟಲ್ ಸಾಂಗ್ ‘ಹೊಸ ಬೆಳಕು ಮೂಡುತ್ತಿದೆ’ ಹಾಡನ್ನು ರಿಮಿಕ್ಸ್ ಮಾಡಲಾಗಿದೆ. ನಿನ್ನೆಯಷ್ಟೇ ಈ ಹಾಡು ಬಿಡುಗಡೆಯಾಗಿದ್ದು, ಎಂದೂ ಮಾಸದ ಈ ಹಾಡೀಗ ಹೊಸರೂಪವನ್ನು ಪಡೆದು ಮತ್ತೆ ಎಲ್ಲರ ನಾಲಿಗೆ ಮೇಲೆ ಹರಿದಾಡುತ್ತಿದೆ.

ಅಂದ ಹಾಗೆ ‘ಹೊಸ ಬೆಳಕು’ ಚಿತ್ರವು 1982 ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿತ್ತು. ಚಿತ್ರದಲ್ಲಿ ಡಾ. ರಾಜ್ ಕುಮಾರ್ ,ಸರಿತಾ, ಅಶ್ವಥ್, ಪ್ರತಿಮಾ ರಾವ್, ಬಾಲ ನಟರಾಗಿ ಪುನೀತ್.. ಹೀಗೆ ಅನೇಕರು ನಟಿಸಿದ್ದರು. ಈ ಚಿತ್ರದ ಸೂಪರ್ ಹಿಟ್ ಹಾಡನ್ನು ‘ಕವಚ’ಕ್ಕಾಗಿ ಮರು ಬಳಸಿಕೊಳ್ಳಲಾಗಿದೆ.

ಅಂದ ಹಾಗೆ ಈ ಹಾಡನ್ನು ಚಿ. ಉದಯ್ ಶಂಕರ್ ಬರೆದಿದ್ದರು. ಈಗ ಈ ಹಾಡನ್ನು ವಿಜಯ್ ಪ್ರಕಾಶ್ ಹಾಡಿದ್ದು, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಸನ್ನಿವೇಶ ಹಾಗೂ ಸಂದರ್ಭಕ್ಕೆ ತಕ್ಕಂತೆ ಈ ಹಾಡನ್ನ ಸೆಲೆಬ್ರೇಷನ್ ಸಾಂಗ್ ಆಗಿ ತೆರೆಮೇಲೆ ಮೂಡಿಸಿದ್ದಾರೆ ನಿರ್ದೇಶಕ ಜಿ.ವಿ.ಆರ್ ವಾಸು.

ಅಂದ ಹಾಗೆ ಇದೊಂದು ಮಲಯಾಳಂ ಭಾಷೆಯ ‘ಒಪ್ಪಂ’ ಚಿತ್ರದ ರಿಮೇಕ್ ಆಗಿದ್ದು, ಚಿತ್ರದಲ್ಲಿ ಶಿವಣ್ಣ ಸೇರಿದಂತೆ ಇಶಾ ಕೊಪ್ಪಿಕರ್ ,ಕೃತಿಕಾ ಜಯರಾಂ, ಬೇಬಿ ಮೀನಾಕ್ಷಿ, ವಸಿಷ್ಠ ಸಿಂಹ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ರಾಹುಲ್ ಶ್ರೀವಾತ್ಸವ್ ಛಾಯಾಗ್ರಹಣ, ರವಿವರ್ಮ ಸಾಹಸ ಸಂಯೋಜನೆಯಿದೆ.

ರಾಘಣ್ಣನ 25 ನೇ ಸಿನಿಮಾ ‘ಆಡಿಸಿದಾತ’

#kavacha, #hosabelaku, #song, #balkaninews #kannadasuddigalu, #shivarajkumar, #filmnews

Tags

Related Articles