ಚಿತ್ರ ವಿಮರ್ಶೆಗಳುಬಾಲ್ಕನಿಯಿಂದಸುದ್ದಿಗಳು

ಕವಚ: ಅಂದನ ಬದುಕಿನಲ್ಲಿ ಬರುವ ಕ್ರೌರ್ಯ ಮತ್ತು ಕರುಣೆಯ ರಸಾನುಭವ

ಹೊಸ ಅವತಾರದಲ್ಲಿ ಮೋಡಿ ಮಾಡುವ ಶಿವಣ್ಣ

ಬೆಂಗಳೂರು.ಏ.07: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಚಿತ್ರಗಳೆಂದರೆ, ಸಾಮಾನ್ಯವಾಗಿ ಹೊಡಿ, ಬಡಿ, ಕಡಿ ಎಂದೇ ಜನನಿತವಾಗಿದ್ದರೂ ಸಹ ಅಲ್ಲೊಂದು ಇಲ್ಲೊಂದು ಕ್ಲಾಸ್ ಚಿತ್ರಗಳು ಸಹ ಬಂದಿವೆ. ಹಾಗೆಯೂ ‘ಕವಚ’ ಚಿತ್ರವೂ ಸಹ ಸಿದ್ದ ಸೂತ್ರಗಳಿಲ್ಲದೇ ಮನುಷ್ಯ ಸಂಬಂಧಗಳ ಭಾವುಕತೆಯಲ್ಲೂ ಪ್ರೇಕ್ಷಕನಲ್ಲಿ ಕಂಪನ ಹುಟ್ಟಿಸುತ್ತದೆ.

ಹೌದು, ಈ ಚಿತ್ರವು ಪ್ರೇಕ್ಷಕರ ಮನ ತಣಿಸುವ, ಕಾಡಿಸುವ, ಭಾವುಕತೆಗೆ ಒಳಗಾಗುವಂತೆ ಮಾಡುವಂತಹ ಪ್ರಯೋಗಾತ್ಮಕ ಸಿನಿಮಾ. ಮಲಯಾಳಂನಲ್ಲಿ ಬಂದ ‘ಒಪ್ಪಂ’ ಚಿತ್ರದ ರಿಮೇಕ್ ಆಗಿದ್ದರೂ, ಕನ್ನಡಕ್ಕೆ ತಕ್ಕಂತೆ ಅಲ್ಲಲ್ಲಿ ಬದಲಾವಣೆ ಮಾಡಿಕೊಳ್ಳಲಾಗಿದೆ. ಇನ್ನು ಚಿತ್ರದ ನಾಯಕ ಶಿವಣ್ಣ ಇಲ್ಲಿ ಜಯರಾಮನಾಗಿ ಕಮಾಲ್ ಮಾಡಿದ್ದಾರೆ. ಅವರ ನಟನಾ ಸಾಮರ್ಥ್ಯ ತೋರಿಸುವ ಅದ್ಭುತ ಸಿನಿಮಾವೆಂದೇ ಹೇಳಬಹುದು.

ಜಯರಾಮ (ಶಿವರಾಜ್ ಕುಮಾರ್) ಒಬ್ಬ ಅಂಧ ಹುಡುಗ. ತಂಗಿ ಮದುವೆಗೆ ಹಣ ಹೊಂದಿಸಲು ಸಾಕಷ್ಟು ಕಷ್ಟ ಪಡುತ್ತಿರುತ್ತಾನೆ. ಬೆಂಗಳೂರಿನ ಅಪಾರ್ಟ್ ಮೆಂಟಿನಲ್ಲಿ ಕೆಲಸ ಮಾಡುವ ಜಯರಾಮ ಅದೇ ಅಪಾರ್ಟ್ ಮೆಂಟಿನ ಒಬ್ಬ ಜಡ್ಜ್ ಪ್ರಾಣಕ್ಕೆ ಆಪತ್ತು ಬಂದಾಗ ಕಾಪಾಡಲು ಮುಂದಾಗುತ್ತಾನೆ. ಜಡ್ಜ್ ಮಗಳಿಗೆ ‘ಕವಚ’ ರೀತಿ ಇರುತ್ತಾನೆ. ಹೀಗೆ ಅಂದನಾಗಿದ್ದರೂ ವಿಶೇಷ ಗ್ರಹಣ ಶಕ್ತಿ ಹೊಂದಿರುವ ಜಯರಾಮ ಹೇಗೆ ಒಬ್ಬ ಸೀರಿಯಲ್ ಕಿಲ್ಲರ್ ನಿಂದ ಜಡ್ಜ್ ಮಗಳನ್ನು ಕಾಪಾಡುತ್ತಾನೆ ಎನ್ನುವುದೇ ಚಿತ್ರದ ಕಥೆ.

Image result for kavacha kannada movie

ಚಿತ್ರದಲ್ಲಿ ಒಂದು ಕಡೆ ಕರುಣೆಯಿದ್ದರೆ, ಮತ್ತೊಂದೆಡೆ ಕ್ರೌರ್ಯತೆ ಇದೆ. ಚಿತ್ರದಲ್ಲಿ ನಂದಿನಿ ಪಾತ್ರದಲ್ಲಿ ನಟಿಸಿರುವ ಮೀನಾಕ್ಷಿ ಎಲ್ಲರ ಮನಸ್ಸನ್ನು ಸೆಳೆಯುತ್ತಾಳೆ. ಹಾಗೆಯೇ ಚಿತ್ರದ ಕ್ಯಾಮರಾ ವರ್ಕ್ ಹಾಗೂ ಹಾಡುಗಳು ಆಕರ್ಷಿಸುತ್ತವೆ. ಚಿತ್ರದ ಡೈಲಾಗ್ಸ್ ಗಳು ಸಹ ಪ್ರಮುಖ ಆಕರ್ಷಣೆಯಾಗಿವೆ.

‘ಐ ಯಾಮ್ ಬ್ಲೈಂಡ್, ಆದರೆ ವೀಕ್ ಅಲ್ಲ, ನನಗಾಗುವ ನೋವು ಸಹಿಸುತ್ತೇನೆ, ಆದರೆ ನನ್ನವರಿಗೆ ನೋವಾದರೆ ಸಹಿಸುವುದಿಲ್ಲ ಎನ್ನುವಂತಹ ಪಾರ್ಚ್ ಟಚಿಂಗ್ ಡೈಲಾಗ್ ಜತೆಗೆ ಕ್ರೌರ್ಯ ತುಂಬಿಕೊಂಡ ತಂದೆಯೊಬ್ಬ, ಕಣ್ಣೆದುರೆ ಇರುವ ಮಗಳನ್ನು ನೋಡದೆ ಹೋಗಿದ್ದು ನೋಡುಗನ ಕಣ್ಣಲ್ಲಿ ತೀವ್ರವಾಗಿ ಕಾಡುತ್ತದೆ.

Image result for kavacha kannada movie

ಉಳಿದಂತೆ ರಾಜೇಶ್ ನಟರಂಗ, ವಸಿಷ್ಟ ಸಿಂಹ, ಕೃತಿಕಾ, ರವಿಕಾಳೆ, ಲಯಕೋಕಿಲಾ, ತಬಲಾ ನಾಣಿ, ರಮೇಶ್ ಭಟ್ ಸೇರಿದಂತೆ ಎಲ್ಲರ ಅಭಿನಯ ಆಪ್ತವೆನಿಸುತ್ತದೆ. ಬೇಸಿಗೆ ಕಾಲದಲ್ಲಿ ತಂಗಾಳಿಯ ಆಹ್ಲಾದ ನೀಡುತ್ತದೆ ಈ ಸಿನಿಮಾ.

ದಾಖಲೆಯ ಮೊತ್ತಕ್ಕೆ ಮಾರಾಟವಾದ ‘ಪಡ್ಡೆಹುಲಿ’ ಚಿತ್ರದ ಹಿಂದಿ ಡಬ್ಬಿಂಗ್ ರೈಟ್ಸ್

#kavacha, #reviews, #balkaninews #shivarajkumar, #filmnews, #kannadasuddigalu

Tags