ಚಿತ್ರ ವಿಮರ್ಶೆಗಳುಬಾಲ್ಕನಿಯಿಂದಸುದ್ದಿಗಳು

‘ಕವಲು ದಾರಿ’ಯಲ್ಲಿ ರೋಚಕ ಪಯಣ

ಚೇಂಜ್ ಕೇಳುವ ಪ್ರೇಕ್ಷಕರಿಗೆ ಖಂಡಿತಾ ಇಷ್ಟವಾಗುವ ಸಿನಿಮಾ

ಬೆಂಗಳೂರು.ಏ.13: ‘ಗೋಧಿ ಬಣ‍್ಣ ಸಾಧಾರಣ ಮೈಕಟ್ಟು’ ಚಿತ್ರದ ಬಳಿಕ ಹೇಮಂತ್ ರಾವ್ ನಿರ್ದೇಶನದ ಸಿನಿಮಾವಿದು. ಚಿತ್ರದಲ್ಲಿ ಸಸ್ಪೆನ್ಸ್ ಕಥಾಹಂದರದ ರೋಚಕ ಪ್ರಯಾಣವಿದೆ. ಮಹಾನಗರದ ಅಪರಾಧ ಜಗತ್ತಿನ ಒಳಸುಳಿಗಳ ಹುಡುಕಾಟಕ್ಕೆ ಕೈ ಹಾಕಿದ್ದಾರೆ. ಅದರಲ್ಲಿ ಯಶಸ್ವಿಯೂ ಆಗಿದ್ದು, ಚಿತ್ರವನ್ನು ಅಚ್ಚುಕಟ್ಟಾಗಿ ಕಟ್ಟಿ ಕೊಟ್ಟಿದ್ದಾರೆ.

ಇಷ್ಟವಿಲ್ಲದಿದ್ದರೂ ಕೆಲಸಕ್ಕೆ ಹೊರಡುವ ಟ್ರಾಫಿಕ್ ಸಬ್ ಇನ್ಸ್ ಪೆಕ್ಟರ್ ಶ್ಯಾಮ್ (ರಿಷಿ) ಗೆ ಕ್ರೈಮ್ ವಿಭಾಗದಲ್ಲಿ ಕೆಲಸ ಮಾಡುವ ಆಸೆ. ಪೊಲೀಸ್ ಇಲಾಖೆಯಲ್ಲಿ ಕೆಲಸದಲ್ಲಿರುವ ಕಾರಣಕ್ಕೇ ಅವನಿಗೆ ಮದುವೆಯಾಗಲು ಹುಡುಗಿ ಸಿಗುವುದಿಲ್ಲ.
ಇನ್ನು ತಂತ್ರಜ್ಞಾನ ಸಿಕ್ಕಾಪಟ್ಟೆ ಮುಂದುವರಿದಿರುವ ಈ ಕಾಲದಲ್ಲಿ ಒಂದು ಕೊಲೆ ಪ್ರಕರಣವನ್ನು ಭೇದಿಸುವುದು ಸುಲಭವಲ್ಲ. ಅಂಥದ್ದರಲ್ಲಿ ಬರೋಬ್ಬರಿ 40 ವರ್ಷಗಳ ಹಿಂದೆ ನಡೆದ ತ್ರಿವಳಿ ಕೊಲೆಯ ಹಿಂದೆ ಬೀಳುತ್ತಾನೆ ಬೀಳುತ್ತಾನೆ ಕಥಾನಾಯಕ.

ಈ ಮಧ್ಯೆ ಫ್ಲೈ ಓವರ್ ನಿರ್ಮಾಣದ ಹಂತದಲ್ಲಿ ಮಣ್ಣು ಅಗೆದಾಗ ಮೂರು ಬುರುಡೆಗಳು ಪತ್ತೆ ಆಗುತ್ತವೆ. ಈ ಮೂಳೆಗಳ ಚೂರು ಅವನೊಳಗಿನ ಪತ್ತೇದಾರನನ್ನು ಬಡಿದೆಬ್ಬಿಸುತ್ತದೆ. ಅದರ ಜಾಡು ಹಿಡಿದು ಹೊರಟವನಿಗೆ ಎದುರಾಗುವ ಅನುಭವಗಳೇ ಚಿತ್ರದ ಕಥಾವಸ್ತು. ಇವುಗಳನ್ನೆಲ್ಲಾ ಹಂತ ಹಂತವಾಗಿ ಉತ್ತರ ದೊರಕಿಸಿಕೊಡುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಹೇಮಂತ್ ರಾವ್.

ಚಿತ್ರದಲ್ಲಿ ಬಂದು ಹೋಗುವ ಸಣ್ಣ ಪಾತ್ರಗಳು ಸಹ ಚಿತ್ರಕ್ಕೆ ಪೂರಕವಾಗಿದ್ದು, ಅದರಲ್ಲೂ ನಾಯಕ ಶ್ಯಾಮ್ ಗೆ ನೆರವಾಗುವ ನಿವೃತ್ತ ಪೊಲೀಸ್ ಅಧಿಕಾರಿ ಮುತ್ತಣ್ಣ (ಅನಂತ್ ನಾಗ್) ಸೇರಿದಂತೆ ಇತರೇ ಪಾತ್ರಗಳು ನೋಡುಗರಿಗೆ ಕುತೂಹಲ ಮೂಡಿಸುವಲ್ಲಿ ಪ್ಲಸ್ ಪಾಯಿಂಟ್ ಆಗಿವೆ.

ಸೆನ್ಸಿಬಲ್ ಪೊಲೀಸ್ ಅಧಿಕಾರಿಯಾಗಿ ರಿಷಿ ನೋಡುಗರ ಮನಸ್ಸಲ್ಲಿ ಉಳಿಸಯುತ್ತಾರೆ. ಉಳೀದಂತೆ ಅನಂತ್ನಾಗ್, ಅಚ್ಯುತ್ ಕುಮಾರ್, ಸಂಪತ್ಕುಮಾರ್, ರೋಶಿನಿ ಪ್ರಕಾಶ್, ಸುಲೀಲ್ ಕುಮಾರ್, ಸುಮನ್ ರಂಗನಾಥನ್ ನಿರ್ವಹಿಸಿರುವ ಪಾತ್ರಗಳು ಸಿನಿಮಾದಾಚೆ ಬಂದಾಗಲೂ ಕಾಡುತ್ತವೆ.

ಚಿತ್ರದ ಸಂಗೀತ, ಛಾಯಾಗ್ರಹಣ, ಸಂಕಲನ, ಹಾಗೂ ಸಂಭಾಷಣೆ ಪ್ರಮುಖವಾಗಿದೆ. ಒಟ್ಟಿನಲ್ಲಿ ಈ ಕವಲುದಾರಿಯ ಹಾದಿ ರೋಚಕವಾಗಿದ್ದು, ನೋಡುಗರ ಮನಸ್ಸನ್ನು ತನ್ನತ್ತ ಸೆಳೆದು ರೋಚಕ ಅನುಭವವನ್ನು ನೀಡುತ್ತದೆ. ಇನ್ನು ಮನರಂಜನೆಯೊಂದಿಗೆ ಕ್ರೈಮ್ ಥ್ರಿಲ್ಲರ್ ಇಷ್ಟ ಪಡುವವರಿಗೆ ಈ ಸಿನಿಮಾ ಖುಷಿ ನೀಡಬಹುದು.

ಮುಂಬೈನ ಸಿನಿಮಾ ವಿಮರ್ಶಕರ ಕೂಟದ(ಎಫ್.ಸಿ.ಜಿ) ಪ್ರಶಸ್ತಿಗೆ ನಾಮ ನಿರ್ದೇಶನಗೊಂಡ ಕನ್ನಡದ ಮೂರು ಸಿನಿಮಾಗಳು

#kavaludaari, #review, #balkaninews #rishi, #Ananthanag, #filmnews, #kannadasuddigalu

Tags