ಸುದ್ದಿಗಳು

ಬೆಂಗಳೂರು ನನ್ನ ಎರಡನೇಯ ಮನೆ ಇದ್ದಂತೆ ಎಂದ ಕವಿತಾ ರಾಧೆ ಶ್ಯಾಮ್

ಕನ್ನಡ ಸೇರಿದಂತೆ ಹಲವಾರು ಭಾಷೆಗಳಲ್ಲಿ ಬ್ಯುಸಿಯಿರುವ ನಟಿ

ಬೆಂಗಳೂರು.ಮಾ.15: ಕಳೆದ ವರ್ಷ ಚಿತ್ರರಂಗದಲ್ಲಿ ಬಾರೀ ಸುದ್ದಿಗೆ ಗ್ರಾಸವಾಗಿದ್ದ #ಮಿಟೂ ಹಗರಣದ ಕುರಿತಂತೆ ಮತ್ತಷ್ಟು ಹೇಳಿಕೆ ನೀಡಿ ಸದ್ದು ಮಾಡಿದವರು ಹಾಗೂ ತಮ್ಮ ಬೋಲ್ಡ್ ಆ್ಯಂಡ್ ನೇರ ನುಡಿಯಿಂದ ಎಲ್ಲರಿಂದ ಗಮನ ಸೆಳೆಯಲ್ಪಟ್ಟವರು ಕವಿತಾ ರಾಧೆ ಶ್ಯಾಮ್.

ಬೆಂಗಳೂರಿನ ಕುರಿತಂತೆ

ಕವಿತಾರವರು ಮೂಲತಃ ಬಾಲಿವುಡ್ ಚಿತ್ರರಂಗದಲ್ಲಿ ಸಕ್ರಿಯರಾದವರು. ಕನ್ನಡದಲ್ಲಿ ರಾಗಿಣಿ ದ್ವಿವೇದಿ ಅಭಿನಯದ `ಅಮ್ಮ’ ಹಾಗೂ ನಿಖಿಲ್ ಕುಮಾರ್ ನಟನೆಯ ‘ಜಾಗ್ವಾರ್’ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಈಗ ಇವರು ಬೆಂಗಳೂರಿನ ಕುರಿತಂತೆ ಹೇಳಿಕೆಯೊಂದನ್ನು ನೀಡಿದ್ದಾರೆ.

ಹೌದು, ಬೆಂಗಳೂರು ನನ್ನ ಎರಡನೇಯ ಮನೆಯಿದ್ದಂತೆ ಎಂದು ಕವಿತಾ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದು, ಸದ್ಯ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಹಲವಾರು ಭಾಷೆಗಳ ಚಿತ್ರಗಳಲ್ಲಿ ಬ್ಯೂಸಿಯಿದ್ದಾರೆ.

ಸಿನಿಮಾಗಳು

ಸದ್ಯ ಕವಿತಾ ‘ಕಾಸುರ’ ಮತ್ತು ‘ಗಡಿ’ ಚಿತ್ರಗಳಲ್ಲಿ ನಟಿಸುತ್ತಿದ್ದು, ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಇವೆರೆಡು ಚಿತ್ರಗಳ ಶೂಟಿಂಗ್ ಇಲ್ಲಿಯೇ ನಡೆಯುತ್ತಿವೆ. ‘ಬೆಂಗಳೂರು ನನಗೆ ಬೇರೆ ಊರು ಎನ್ನಿಸುವುದಿಲ್ಲ. ಮುಂಬೈನಂತೆಯೇ ಇದೂ ಕೂಡಾ ನನ್ನದೇ ಊರು ಎನ್ನಿಸುತ್ತದೆ. ಇಲ್ಲಿಯ ಜನ ತೋರಿಸುವ ಪ್ರೀತಿ ದೊಡ್ಡದು’ ಎಂದಿದ್ದಾರೆ.

ಇನ್ನು ಕವಿತಾರವರು ‘ಕಾಸುರ’ ಚಿತ್ರದಲ್ಲಿ ಅವರು ಸಿಬಿಐ ಆಫೀಸರ್ ಅಗಿ ಕಾಣಿಸಿಕೊಂಡಿದ್ದಾರೆ. ಇದು ತಮಿಳು ಮತ್ತು ಕನ್ನಡದಲ್ಲಿ ತೆರೆಕಾಣಲಿದೆ. ತಮಿಳಿನಲ್ಲಿ ಕಾಸುರನ್ ಎಂದು ಹೆಸರಿಡಲಾಗಿದೆ. ಈ ಚಿತ್ರ ಪೂರ್ಣಗೊಂಡಿದ್ದು ತೆರೆ ಕಾಣಬೇಕಿದೆ.

ಅದೇ ರೀತಿ ‘ಗಡಿ’ ಸಿನಿಮಾ ಕನ್ನಡ ಮತ್ತು ತಮಿಳಿನಲ್ಲಿ ನಿರ್ಮಾಣವಾಗುತ್ತಿದ್ದು, ‘ಸಾಲಗಾರ ಸಹಕಾರ ಸಂಘ’ ಚಿತ್ರ ತೆಲುಗು ಮತ್ತು ಕನ್ನಡದಲ್ಲಿ ನಿರ್ಮಣವಾಗುತ್ತಿದೆ. ಇದಲ್ಲದೆ, ‘ಕೋಮಲಿ’ ಎಂಬ ಇನ್ನೊಂದು ತಮಿಳು ಚಿತ್ರದಲ್ಲೂ ನಟಿಸಿದ್ದಾರೆ.

ಅಂದ ಹಾಗೆ ಕವಿತಾ ಈ ಮೊದಲು ವಿಕ್ರಮ್ ಭಟ್ ರೋಮಾಂಚಕ ಟಿವಿ ಸರಣಿಯಲ್ಲಿ ‘ಹೂ ಡನ್ ಇಟ್ ಉಲ್ಜಾನ್’ ನಲ್ಲಿ ಪ್ರಥಮ ಬಾಲಿವುಡ್ ನಟಿಯಾಗಿದ್ದಾರೆ. ಭಾರತದಲ್ಲಿ ಪ್ರಾಣಿಗಳ ಕ್ರೌರ್ಯವನ್ನು ಪ್ರತಿಭಟಿಸಲು ಅರೆ ನಗ್ನ ಫೋಟೋ ಶೂಟ್ ನಲ್ಲಿ ಭಾಗವಹಿಸುವುದರ ಮೂಲಕ ಮೊದಲ ಗಮನ ಸೆಳೆದಿದ್ದರು.

ಗೋವಾದಲ್ಲಿ ಜಾಲಿ ಮೂಡ್ ನಲ್ಲಿರುವ ಪಟಾಕ ಪಾರ್ವತಿ

#kavitharadheshyama, #kannadafilms, #balkaninews #kannadasuddigalu, #filmnews, #raginiips, #jagvara

Tags