ಸುದ್ದಿಗಳು

ಕೆಸಿಸಿ ಟ್ರೋಫಿ ಮೇಲೆ ಶಿವಣ್ಣ ಕಣ್ಣು!!

ಚಿತ್ರೀಕರಣಕ್ಕೆ ಬ್ರೇಕ್ .. ಕ್ರಿಕೆಟ್ ಪ್ರಾಕ್ಟೀಸ್ ಗೆ ಜೈ..

ಶಿವಣ್ಣ ಇದುವರೆಗೂ ಕುಟುಂಬ ಜೊತೆಗೆ ಪ್ರವಾಸ ಹೋಗುವುದು ಬಿಟ್ಟರೆ, ರಜೆ ತೆಗೆದುಕೊಳ್ಳದೇ ಕೆಲಸ ಮಾಡುತ್ತಿದ್ದರು

ಬೆಂಗಳೂರು,ಸೆ.03: ಕಿಚ್ಚ ಸುದೀಪ್ ನೇತೃತ್ವದ ಕನ್ನಡ ಚಲನಚಿತ್ರ ಕಪ್(ಕೆಸಿಸಿ)ಆರಂಭಕ್ಕೆ ದಿನಗಣನೆ ಉಳಿದಿದೆ. . ಎರಡನೆಯ ಆವೃತ್ತಿಯ ಈ ಟೂರ್ನಿಯನ್ನು ನಗರದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಏರ್ಪಡಿಸಲಾಗಿದ್ದು , ಮುಂದಿನ ಶನಿವಾರ ಮತ್ತು ಭಾನುವಾರ ಅಂದರೆ ಸೆಪ್ಟೆಂಬರ್ 8 ಮತ್ತು 9ರಂದು ಈ ಟೂರ್ನಿ ನಡೆಯಲಿದೆ. ಈಗಾಗಳೇ ಇದಕ್ಕೆ ಸಕಲ ಸಿದ್ದತೆ ನಡೆದಿದೆ. ಅದರಲ್ಲೂ ಶಿವಣ್ಣ ಅಭ್ಯಾಸದಲ್ಲಿ ನಿರತರಾಗಿದ್ದಾರೆ.

ಟೂರ್ನಿಯಲ್ಲಿ ಶಿವಣ್ಣ

ಕಳೆದ ಬಾರಿಯ ಟೂರ್ನಿಯಲ್ಲಿ ಶಿವರಾಜಕುಮಾರ್ ನೇತೃತ್ವದ ತಂಡವು ಪಂದ್ಯವನ್ನು ಗೆದ್ದಿತ್ತು. ಕಳೆದ ಬಾರಿ ಗೆದ್ದಂತೆ ಈ ಬಾರಿಯೂ ಗೆಲ್ಲುತ್ತದೋ ಗೊತ್ತಿಲ್ಲ. ಹಿಂದೆ ಶಿವರಾಜಕುಮಾರ್ ಅವರು ಯಾವುದೇ ಅಭ್ಯಾಸವಿಲ್ಲದೆ ನೇರವಾಗಿ ಅಖಾಡಕ್ಕಿಳಿದು ಗೆದ್ದಿದ್ದರು. ಅದೇ ಯಶಸ್ಸಿನ ಅಲೆಯಲ್ಲಿರುವ ಅವರು, ಈ ಬಾರಿ ಸಹ ಗೆಲುವಿನ ಬಾಗಿಲನ್ನೇ ಎದುರು ನೋಡುತ್ತಿದ್ದಾರೆ. ಹಾಗಾಗಿ ಚಿತ್ರೀಕರಣಕ್ಕೆ ಬಿಡುವು ಕೊಟ್ಟು, ಅಭ್ಯಾಸ ಮಾಡುತ್ತಿದ್ದಾರೆ..

ಶಿವಣ್ಣ
ಜೊತೆಗೆ ಗಣೇಶ್ ಸಹ ಪ್ರಾಕ್ಟೀಸ್

ಸುದೀಪ್ ಹೇಳುವ ಪ್ರಕಾರ ​, ಶಿವಣ್ಣ ಇದುವರೆಗೂ ಕುಟುಂಬ ಜೊತೆಗೆ ಪ್ರವಾಸ ಹೋಗುವುದು ಬಿಟ್ಟರೆ, ರಜೆ ತೆಗೆದುಕೊಳ್ಳದೇ ಕೆಲಸ ಮಾಡುತ್ತಿದ್ದರು. ಇದೇ ಮೊದಲ ಬಾರಿಗೆ ಅವರು 10 ದಿನಗಳ ಕಾಲ ಚಿತ್ರೀಕರಣದಿಂದ ಬಿಡುವು ಪಡೆದು ಅಭ್ಯಾಸ ಮಾಡುತ್ತಿದ್ದಾರೆ. ಶಿವಣ್ಣ ಜೊತೆಗೆ ಗಣೇಶ್ ಸಹ ಪ್ರಾಕ್ಟೀಸ್ ಸೆಷನ್‍ಗಳಲ್ಲಿ ಭಾಗವಹಿಸುತ್ತಿದ್ದಾರೆ’ ಎಂದು ಹೇಳಿದ್ದಾರೆ ಕಿಚ್ಚ..

 

Tags

Related Articles