ಸುದ್ದಿಗಳು

ಕೆಸಿಸಿ : ಯಶ್ ವಿರುದ್ದ ಗೋಲ್ಡನ್ ಸ್ಟಾರ್ ಗೆ ಗೋಲ್ಡನ್ ಕಪ್

ಒಡೆಯರ್ ಚಾರ್ಜರ್ಸ್ ತಂಡಕ್ಕೆ ಕರ್ನಾಟಕ ಚಲನಚಿತ್ರ ಕಪ್ 2018

ಬೆಂಗಳೂರು,ಸೆ.10: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ  ಆರಂಭಗೊಂಡ ಕೆಸಿಸಿ ಕ್ರಿಕೆಟ್ ಕಪ್ ನ ಅಂತಿಮ ಹಣಾಹಣಿಯಲ್ಲಿ ರಾಕಿಂಗ್ ಸ್ಟಾರ್ ಯಶ್ ತಂಡ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ತಂಡಗಳ ನಡುವೆ ಜಿದ್ದಾಜಿದ್ದಿ ದಿನ ಪಂದ್ಯಾವಳಿ ರೋಮಾಂಚನಕಾರಿಯಾಗಿತ್ತು..

ಕೆಸಿಸಿ ಶ್ರೀಲಂಕಾ ಕ್ರಿಕೆಟಿಗ ತಿಲಕರತ್ನೆ ದಿಲ್ಶನ್ ಅವರ ಆಲ್ ರೌಂಡರ್ ಆಟದ ನೆರವಿನಿಂದ ಗೋಲ್ಡನ್ ಸ್ಟಾರ್ ಗಣೇಶ್ ನಾಯಕತ್ವದ ಒಡೆಯರ್ ಚಾರ್ಜರ್ಸ್ ತಂಡ ಕರ್ನಾಟಕ ಚಲನಚಿತ್ರ ಕಪ್ 2018 ನನ್ನು ತನ್ನದಾಗಿಸಿಕೊಂಡಿದೆ.

KCC 2018: Wodeyar Chargers vs Rashtrakuta Panthers final report

ಒವೇಶ್ ಷಾ ಅವರ ಭರ್ಜರಿ ಬ್ಯಾಟಿಂಗ್       

ನಿನ್ನೆ ನಡೆದ ಫೈನಲ್ ಪಂದ್ಯದಲ್ಲಿ ರಾಕಿಂಗ್ ಸ್ಟಾರ್ ಯಶ್ ನಾಯಕತ್ವದ ರಾಷ್ಟ್ರಕೂಟ ಪ್ಯಾಂಥರ್ಸ್ ವಿರುದ್ಧ ಗೋಲ್ಡನ್ ಸ್ಟಾರ್ ಗಣೇಶ್ ತಂಡ 6 ವಿಕೆಟ್ ಗಳ ಭರ್ಜರಿ ಜಯ ಸಾಧಿಸುವ ಮೂಲಕ ಕೆಸಿಸಿ ಕಪ್ ತಮ್ಮದಾಗಿಸಿಕೊಂಡಿದ್ದಾರೆ

ಮೊದಲು ಬ್ಯಾಟಿಂಗ್ ಮಾಡಿದ ಯಶ್ ತಂಡ ಗಣೇಶ್ ತಂಡದ ಗೆಲುವಿಗೆ 123 ರನ್ ಟಾರ್ಗೆಟ್ ನೀಡಿದ್ದರು. ಸ್ಟಾರ್ ಆಟಗಾರ ಒವೇಶ್ ಷಾ ಅವರ ಭರ್ಜರಿ ಬ್ಯಾಟಿಂಗ್ , ಎದುರಾಳಿಗೆ ಸವಾಲಿನ ಮೊತ್ತ ನೀಡುವಲ್ಲಿ ನೆರವಾಯಿತು.

ಇನ್ನು ಗಣೇಶ್ ತಂಡ ಇದನ್ನು ಗುರಿ ಬೆನ್ನಟ್ಟಿದ 10 ಓವರ್ ಗೆ 4 ವಿಕೆಟ್ ಕಳೆದುಕೊಂಡು 127 ರನ್ ಜಯಭೇರಿ ಸಾಧಿಸಿದರು

ಮೊದಲು ಬ್ಯಾಟಿಂಗ್ ಮಾಡಿದ ರಾಷ್ಟ್ರಕೂಟ ಪ್ಯಾಂಥರ್ಸ್ ನಿಂದ ಷಾ ಕೇವಲ 11 ಎಸೆತಗಳಿಗೆ ಅಜೇಯ 42 ರನ್ ಸೇರಿಸಿದರು. ಷಾ ರನ್ ನೆರವು ಬಿಟ್ಟರೆ ಎಸ್ ಹೂವರ್ 33, ರಾಜೀವ್ 14, ಕೃಷ್ಣ 19 ರನ್ ಕೊಡುಗೆ ನೀಡಿದರು. ಹೀಗಾಗಿ ತಂಡ 10 ಓವರ್ ಗಳಲ್ಲಿ 6 ವಿಕೆಟ್ ಕಳೆದು 122 ರನ್ ಪೇರಿಸಿತು.

 

Tags