ಸುದ್ದಿಗಳು

ರಾಜಮೌಳಿ ಸಿನಿಮಾಕ್ಕೆ ಮಹಾನಟಿ ಕೀರ್ತಿ ಸುರೇಶ್!

ಬಹುಭಾಷೆಯಲ್ಲಿ ತೆರೆಕಂಡು ವಿಶ್ವದಾದ್ಯಂತ ಯಶಸ್ಸು ಗಳಿಸಿರುವ ಬಾಹುಬಲಿ ಸಿನಿಮಾದ ನಂತರ ಮೋಸ್ಟ್ ಟ್ಯಾಲೆಂಟೆಡ್ ಡೈರೆಕ್ಟರ್ ರಾಜಮೌಳಿಯವರು ಮತ್ತೊಂದು ಸಿನಿಮಾಕ್ಕೆ ಕೈ ಹಾಕುವುದರ ಮೂಲಕ ಬಾರೀ ತಯಾರಿ ನಡೆಸುತ್ತಿದ್ದಾರೆ ಎನ್ನುವುದು ಈಗಾಗಲೇ ತಿಳಿದ ವಿಷಯ.

ಪ್ರಸ್ತುತ  ಸಿನಿಮಾವನ್ನು RRR ಎನ್ನುವ ಶೀರ್ಷಿಕೆಯೊಂದಿಗೆ ಟಾಲಿವುಡ್ ನ ಮಲ್ಟಿ ಸ್ಟಾರ್ರ್ಸ್ ಗಳಾದ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಮತ್ತು ಎನ್ಟಿಆರ್ ಸೇರಿದಂತೆ ಹಲವಾರು ಸಹ ನಟ ನಟಿಯರು ಬಾರೀ ತಯಾರಿ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಸಿನಿಮಾದ ಪ್ರಿ-ಪ್ರೊಡಕ್ಷನ್ಸ್ ಕಲಸಗಳು ಶುರುವಾಗಿದ್ದು ಈ ಕಥೆಗೆ ತಕ್ಕ ನಾಯಕ ನಟಿಯರ ಆಯ್ಕೆ ಪ್ರಕ್ರಿಯೆಯಲ್ಲಿ ನಿರ್ದೇಶಕರನ್ನು ಒಳಗೊಂಡಂತೆ ನಿರ್ಮಾಪಕರು ಬ್ಯುಸಿಯಾಗಿದ್ದಾರೆ ಎನ್ನಲಾಗಿದೆ.

ಈ ಹಿಂದೆ ಈ ಸಿನಿಮಾಕ್ಕೆ ನಟಿ ತಮನ್ನಾ ಅವರು ಆಯ್ಕೆಯಾಗಿದ್ದಾರೆ ಎನ್ನುವ ಸುದ್ದಿ ಕೇಳಿ ಬಂದಿತ್ತು ಆದರೆ ಈಗ ಮತ್ತೋರ್ವ ನಟಿಯಾದ ಕೀರ್ತಿ ಸುರೇಶ್ ಅವರನ್ನು ಆಯ್ಕೆ ಮಾಡುವ ನಿರ್ದಾರವನ್ನು ಪ್ರೊಡಕ್ಷನ್ ಮಂಡಳಿ ತೆಗೆದುಕೊಂಡಿದೆ ಎಂದು ಸಿನಿ ಮೂಲಗಳು ತಿಳಿಸಿವೆ.

ಪ್ರಸ್ತುತ ಕೀರ್ತಿ ಸುರೇಶ್ ಅವರ ನಟನೆಯ ‘ಮಹಾನಟಿ’ ಸಿನಿಮಾ ಅನೇಕ ಸಿನಿ ದಿಗ್ಗಜರ ವಿಮರ್ಶೆಗೆ ಹಾಗು ಮೆಚ್ಚುಗೆಗೆ ಕಾರಣವಾಗಿದ್ದು ತಮ್ಮ ಯಶಸ್ಸಿನ ಪಯಣವನ್ನು ಮೂಂದುವರೆಸಿದೆ ಎನ್ನಲಾಗಿದೆ. ಇದರ ಬೆನ್ನಲ್ಲೆ ಇವರ ನಟನೆಯನ್ನು ಮೆಚ್ಚಿ ಈ ಸಿನಿಮಾಕ್ಕೆ ಆಯ್ಕೆ ಮಾಡಲಾಗಿದೆ ಎಂದು ಗಾಳಿ ಸುದ್ದಿ ಹರಡಿದೆ.

Tags

Related Articles

Leave a Reply

Your email address will not be published. Required fields are marked *